ಬಸವಕಲ್ಯಾಣ: ಕಳೆದ ವರ್ಷ ಪುಲ್ವಾಮಾದಲ್ಲಿ ಉಗ್ರರ ದಾಳಿಯಿಂದಾಗಿ ಹುತಾತ್ಮರಾದ ಯೋಧರ ಸ್ಮರಣಾರ್ಥ ನಗರದಲ್ಲಿ ಯುವಕರು ಕ್ಯಾಂಡಲ್ ಮಾರ್ಚ್ ನಡೆಸಿ, ದಾಳಿಯಲ್ಲಿ ಮಡಿದ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.
ನಗರದ ಜಾಮಾ ಮಸೀದಿಯಿಂದ ಗಾಂಧಿ ವೃತ್ತ, ಬಸವ ವೃತ್ತದ ಮೂಲಕ ಮುಖ್ಯ ರಸ್ತೆ ಮಾರ್ಗವಾಗಿ ಅಂಬೇಡ್ಕರ್ ವೃತ್ತದವರೆಗೆ ಕ್ಯಾಂಡಲ್ ಮಾರ್ಚ್ ಜರುಗಿತು. ವೃತ್ತದಲ್ಲಿ ಕೆಲ ಕಾಲ ಮೌನಾಚರಣೆ ನಡೆಸಿದ ನಂತರ ಯೋಧರ ಭಾವಚಿತ್ರಗಳಿಗೆ ನಮಿಸಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಯುವ ಮುಖಂಡ ಮಹ್ಮದ್ ರೈಸೋದ್ದಿನ್ ಮಾತನಾಡಿ, ಪುಲ್ವಾಮಾದಲ್ಲಿ ನಮ್ಮ ಸೈನಿಕರ ಮೇಲೆ ಉಗ್ರರು ದಾಳಿ ನಡೆಸಿದ್ದು ದೇಶ ಮರೆಯುವಂತಿಲ್ಲ. ದೇಶದ ರಕ್ಷಣೆಗಾಗಿ ಜೀವಗ ಹಂಗು ಬಿಟ್ಟು ಗಡಿಯಲ್ಲಿ ಸೇವೆ ಸಲ್ಲಿಸುತ್ತಿರುವ ಸೈನಿಕರನ್ನು ಗೌರವಿಸುವ ಮನೋಭಾವ ಎಲ್ಲರಲ್ಲಿಯೂ ಬರಬೇಕು ಎಂದರು.