ಬೀದರ್: ಗುಜರಾತ್, ಮಹಾರಾಷ್ಟ್ರ ಹಾಗೂ ಬಿಹಾರ ರಾಜ್ಯಗಳಲ್ಲಿ ಅಪರೂಪಕ್ಕೆ ಕಾಣುವ ನೀಲಗೈ (ನೀಲಿ ಜಿಂಕೆ) ಇದೀಗ ಗಡಿ ಜಿಲ್ಲೆ ಬೀದರ್ನಲ್ಲಿ ಕಾಣಿಸಿಕೊಂಡಿವೆ. ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಶಿವಶಂಕರ ಅವರ ತಂಡ ಈ ಅಪರೂಪದ ಜಿಂಕೆ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಓದಿ: 'ನಿನ್ನಂಥ ಅಪ್ಪ ಇಲ್ಲ': ಮಗನಿಗೆ 3 ಕೋಟಿ ರೂ. ಮೌಲ್ಯದ ಕಾರು ಗಿಫ್ಟ್ ನೀಡಿದ ಸೋನು ಸೂದ್
ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿರುವ ಜಿಲ್ಲೆಯ ಔರಾದ್ ತಾಲೂಕಿನ ನಂದಿ ಬಿಜಲಗಾಂವ್ ಗ್ರಾಮದ ಹೊರ ವಲಯದಲ್ಲಿ ಅಪರೂಪದ ಜಿಂಕೆ ಪತ್ತೆ ಹಚ್ಚುವಲ್ಲಿ ಡಿಎಫ್ಓ ಅವರ ತಂಡ ಯಶಸ್ವಿಯಾಗಿದೆ. ಮಾರ್ಚ್ ಹಾಗೂ ಮೇ ತಿಂಗಳಲ್ಲಿ ಮುರ್ಕಿ ಹಾಗೂ ನಂದಿ ಬಿಜಲಗಾಂವ್ ಗ್ರಾಮದ ಸುತ್ತಲಿನ ಪ್ರದೇಶದಲ್ಲಿ ಒಟ್ಟು 39 ನೀಲಗೈ ಕಾಣಿಸಿಕೊಂಡಿವೆ. ಇದರೊಟ್ಟಿಗೆ ಜಿಂಕಾರ, ಕೃಷ್ಣಮೃಗ ಹಾಗೂ ಕೊಂಡು ಕುರಿಗಳು ಕಾಣಿಸಿಕೊಂಡಿವೆ.
ಮೊದಲ ಬಾರಿಗೆ 02 ಗಂಡು, 11 ಹೆಣ್ಣು, ಎರಡು ಮರಿ ನೀಲಗೈ ಕಂಡು ಬಂದಿವೆ. ಎರಡನೇ ಬಾರಿ 22 ನೀಲಗೈ ಕಂಡು ಬಂದಿದ್ದು, ಈ ಪೈಕಿ 9 ಗಂಡು 10 ಹೆಣ್ಣು ಹಾಗೂ ಮೂರು ಮರಿಗಳಿದ್ದವು. ನೀಲಗೈ ಸಂತತಿಗೆ ರೈತ ಸಮುದಾಯ ಭಯ ಪಡುವ ಅಗತ್ಯವಿಲ್ಲ. ರೈತರ ಬೆಳೆ ಹಾನಿಯಾದರೆ ನಿಯಮಾನುಸಾರ ಸರ್ಕಾರದಿಂದ ಪರಿಹಾರ ನೀಡಲಾಗುವುದು ಎಂದು ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಶಿವಶಂಕರ್ ಹೇಳಿದ್ದಾರೆ.
ನೀಲಗೈ ಸಂತತಿ ಪತ್ತೆ ಹಚ್ಚುವ ಈ ಕಾರ್ಯದಲ್ಲಿ ವನ್ಯ ಜೀವಿ ಛಾಯಾಚಿತ್ರಗಾರ ವಿವೇಕ ಅವರು ಅದ್ಭುತ ಚಿತ್ರಗಳನ್ನು ಸೆರೆ ಹಿಡಿದಿದ್ದು, ಇದು ತನಗೆ ಹೊಸ ಅನುಭವ ನೀಡಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.