ETV Bharat / state

ಚೆಕ್​ ಪೋಸ್ಟ್​ ಸಿಬ್ಬಂದಿಗೆ ಊಟವಿಲ್ಲ, ಸರ್ಕಾರ ಕೊಟ್ಟ ದುಡ್ಡೆನಾಯ್ತು? ಡಿಸಿಗೆ ಸಚಿವ ಪ್ರಭು ಚೌವ್ಹಾಣ ಪ್ರಶ್ನೆ

ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಜಿಲ್ಲಾ ಮಟ್ಟದ ತುರ್ತು ಉನ್ನತಮಟ್ಟದ ಸಭೆಯಲ್ಲಿ ಸಚಿವ ಪ್ರಭು ಚೌವ್ಹಾಣ, ಜಿಲ್ಲಾಧಿಕಾರಿ ಡಾ.ಎಚ್.ಆರ್.ಮಹದೇವ್ ಅವರ ನಡೆಯನ್ನು ಪ್ರಶ್ನೆ ಮಾಡಿದರು.

Prabhu Chavana questioned to the District Collector
ಚೆಕ್​ಪೊಸ್ಟ್​ ಸಿಬ್ಬಂದಿಗೆ ಊಟವಿಲ್ಲ,ಸರ್ಕಾರ ಕೊಟ್ಟ ದುಡ್ಡೆನಾಯ್ತು..ಜಿಲ್ಲಾಧಿಕಾರಿಗೆ ಸಚಿವ ಪ್ರಭು ಚವ್ಹಾಣ ಪ್ರಶ್ನೆ..!
author img

By

Published : Apr 9, 2020, 12:09 AM IST

ಬೀದರ್: ಕೊವಿಡ್-19 ನಿಯಂತ್ರಣಕ್ಕೆ ಹಾಕಲಾದ ಲಾಕ್​ಡೌನ್ ವೇಳೆ ಗಡಿ ಚೆಕ್ ಪೋಸ್ಟ್​ಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಊಟ ಸಿಗ್ತಿಲ್ಲ. ಮಾಸ್ಕ್, ಸ್ಯಾನಿಟೈಸರ್ ಕೊರತೆ ಇದೆ. ಸರ್ಕಾರ ಕೊಟ್ಟ ದುಡ್ಡೆಷ್ಟು ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚೌವ್ಹಾಣ ಜಿಲ್ಲಾಧಿಕಾರಿ ಡಾ. ಹೆಚ್.ಆರ್.ಮಹದೇವ್ ಅವರಿಗೆ ಪ್ರಶ್ನೆ ಮಾಡಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಜಿಲ್ಲಾ ಮಟ್ಟದ ತುರ್ತು ಉನ್ನತಮಟ್ಟದ ಸಭೆಯಲ್ಲಿ ಸಚಿವ ಪ್ರಭು ಚೌವ್ಹಾಣ, ಜಿಲ್ಲಾಧಿಕಾರಿ ಡಾ.ಎಚ್.ಆರ್.ಮಹದೇವ್ ಅವರ ನಡೆಯನ್ನು ಪ್ರಶ್ನೆ ಮಾಡಿದರು. ಇದಕ್ಕೆ ಉತ್ತರಿಸಿದ ಜಿಲ್ಲಾಧಿಕಾರಿ, ಸರ್ಕಾರ ಕೊರೊನಾ ವೈರಸ್ ನಿಯಂತ್ರಣಕ್ಕೆ 3 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ. ನಾವು ಆಯಾ ತಾಲೂಕುಗಳ ತಹಶೀಲ್ದಾರರಿಗೆ ತಲಾ 10 ಲಕ್ಷ ರುಪಾಯಿ ಬಿಡುಗಡೆ ಮಾಡಿದ್ದೇವೆ. ಚೆಕ್ ಪೋಸ್ಟ್​​ಗಳಲ್ಲಿ ಊಟ ಕೊಡ್ತಿಲ್ಲ ಎಂಬ ದೂರು ಬಂದಿಲ್ಲ. ಈಗ ಬಂದಿದೆ, ಇದನ್ನು ಸರಿ ಮಾಡುತ್ತೇವೆ ಎಂದರು.

ಅಲ್ಲದೆ ಮಾಸ್ಕ್​, ಸ್ಯಾನಿಟೈಸರ್​ ಕೂಡ ನೀಡಲಾಗಿದೆ. ಆಯಾ ಸ್ಥಳೀಯ ಸಂಸ್ಥೆಗಳಿಗೆ ಇದರ ಹೊಣೆಗಾರಿಕೆ ನೀಡಲಾಗಿದೆ. ಲಾಕ್​ಡೌನ್ ಜಾರಿಯಲ್ಲಿದ್ದರೂ ಜನರು ಸಾಮೂಹಿಕವಾಗಿ ಬೀದಿಗೆ ಬರ್ತಿದ್ದಾರೆ. ಲಾಕ್​ಡೌನ್ ಸಡಿಲಿಕೆ ಮಾಡಿರುವುದು ಸರಿಯಲ್ಲ. ಇನ್ನಷ್ಟು ಬಿಗಿಗೊಳಿಸುವ ಮೂಲಕ ಜನರಿಗೆ ಮನೆಯಿಂದ ಹೊರಗೆ ಬರದಂತೆ ಮಾಡಬೇಕು ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.