ಬೀದರ್: ಬೈಕ್ಗಳಿಗೆ ಇಂಧನ ಪೂರೈಸದಂತೆ ಪೆಟ್ರೋಲ್ ಬಂಕ್ಗಳಿಗೆ ನಿರ್ಬಂಧ ವಿಧಿಸಿದ್ದರೂ, ಬಂಕ್ ಮುಂದೆ ಬಂದಿದ್ದ ಸವಾರರಿಗೆ ಭಾಲ್ಕಿ ಪೊಲೀಸರು ಲಾಠಿ ರುಚಿ ತೋರಿಸಿದ್ದಾರೆ.
ಜಿಲ್ಲೆಯ ಭಾಲ್ಕಿ ಪಟ್ಟಣ ಹುಮನಾಬಾದ್ ರಸ್ತೆಯಲ್ಲಿರುವ ಪೆಟ್ರೊಲ್ ಬಂಕ್ನಲ್ಲಿ ಬೆಳಗ್ಗೆಯಿಂದ ಬೈಕ್ ಮತ್ತು ಇತರೆ ವಾಹನಗಳು ಪೆಟ್ರೊಲ್ ಹಾಗೂ ಡಿಸೇಲ್ ಹಾಕಿಸಿಕೊಳ್ಳಲು ಮುಗಿ ಬಿದ್ದಿದ್ದರು. ಈ ವೇಳೆಯಲ್ಲಿ ಗಸ್ತಿನಲ್ಲಿದ್ದ ಪೊಲೀಸರು ವಾಹನ ಸವಾರರಿಗೆ ಲಾಠಿ ಬಿಸಿ ಮುಟ್ಟಿಸಿದ್ದಾರೆ.
ಇದೇ ವೇಳೆ ಹಲವರು ಮುಖಕ್ಕೆ ಮಾಸ್ಕ್ ಹಾಕಿಕೊಳ್ಳದೇ ಬೇಕಾ ಬಿಟ್ಟಿಯಾಗಿ ಬಂಕ್ನಲ್ಲಿ ಸುತ್ತಾಡುತ್ತಿದ್ದವರಿಗೆಲ್ಲರಿಗೂ ಪೊಲೀಸರು ಮನೆಯಿಂದ ಹೊರಗೆ ಬರದಂತೆ ವಾರ್ನ್ ಮಾಡಿ ಲಾಠಿ ರುಚಿ ತೋರಿಸಿ ಕಳಿಸಿದ್ದಾರೆ.