ಬಸವಕಲ್ಯಾಣ: ಉರ್ದು, ಮರಾಠಿ, ತೆಲುಗು ಪ್ರಭಾವ ಹೊಂದಿರುವ ರಾಜ್ಯದ ಗಡಿಭಾಗದ ಬಸವಕಲ್ಯಾಣದಲ್ಲಿ ಮಾತೃ ಭಾಷೆ ಕನ್ನಡ ಹಾಗೂ ಹಿಂದಿ ಭಾಷೆ ಬೆಳವಣಿಗೆಗೆ ಶ್ರಮಿಸುತ್ತಿರುವ ಮಹನೀಯರನ್ನು ಗುರುತಿಸಿ, ಸನ್ಮಾನಿಸಲಾಯಿತು.
ಹೈದರಾಬಾದ್ ಕರ್ನಾಟಕ ಶಿಕ್ಷಕರ ವೇದಿಕೆ ಹಾಗೂ ಸರ್ಕಾರಿ ನೌಕರರ ಸಂಘ ಸೇರಿದಂತೆ ವಿವಿಧ ಸಂಘಟನೆಗಳ ಆಶ್ರಯದಲ್ಲಿ ಬಸವಕಲ್ಯಾಣದ ಬಿಕೆಡಿಬಿ ಸಭಾ ಭವನದಲ್ಲಿ ಆಯೋಜಿಸಿದ್ದ ಹಿಂದಿ ದಿವಸ್ ಆಚರಣೆ ಕಾರ್ಯಕ್ರಮದಲ್ಲಿ ಭಾಷೆ ಪ್ರಗತಿಗಾಗಿ ಶ್ರಮಿಸುತ್ತಿರುವ ಸುಮಾರು 1000ಕ್ಕೂ ಅಧಿಕ ಜನರನ್ನು ಸನ್ಮಾನಿಸಿ, ಪ್ರೊತ್ಸಾಹಿಸಲಾಯಿತು.
ಸರ್ಕಾರಿ ಹಾಗೂ ಖಾಸಗಿ ಕಾಲೇಜಿನ ಉನ್ಯಾಸಕರು, ಉಪನ್ಯಾಸಕಿಯರು ಸೇರಿದಂತೆ ಪ್ರಾಚಾರ್ಯರು, ಸರ್ಕಾರಿ ಶಾಲೆ ಶಿಕ್ಷಕ, ಶಿಕ್ಷಕಿಯರು, ಖಾಸಗಿ ಅನುದಾನಿತ ಹಾಗೂ ಅನುದಾನರಹಿತ ಶಾಲೆಗಳ ಶಿಕ್ಷಕರು, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು, ವಸತಿ ನಿಲಯಗಳ ಮೇಲ್ವಿಚಾರಕರು ಸೇರಿದಂತೆ ಭಾಷೆ ಬೆಳವಣಿಗೆಗೆ ಶ್ರಮಿಸುತ್ತಿರುವ ಸಾಮಾಜಿಕ ಕಾರ್ಯಕರ್ತರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು.
ಸ್ಥಳೀಯ ಶಾಸಕ ಬಿ.ನಾರಾಯಣರಾವ್, ಮಾಜಿ ಶಾಸಕರಾದ ಎಂ.ಜಿ.ಮುಳೆ, ಶಶೀಲ್ ನಮೋಶಿ, ಸಾರಿಗೆ ಅಧಿಕಾರಿ ಸಂಜೀವ ವಾಡಿಕರ, ಹೈದ್ರಾಬಾದ್ ಕರ್ನಾಟಕ ಶಿಕ್ಷಕರ ವೇದಿಕೆ ಅಧ್ಯಕ್ಷ ನರಸಿಂಗರೆಡ್ಡಿ ಗದಲೆಗಾಂವ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶಿವಾನಂದ ಮೇತ್ರೆ ಸೇರಿದಂತೆ ಪೂಜ್ಯರು, ಜನ ಪ್ರತಿನಿಧಿಗಳು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಹಾಜರಿದ್ದರು.