ಬೀದರ್: ಜಮೀನಿಗೆ ಹೋಗುವ ಕಾಲುದಾರಿಯನ್ನು ಪ್ರಭಾವಿ ವ್ಯಕ್ತಿಯೊಬ್ಬರು ಒತ್ತುವರಿ ಮಾಡಿಕೊಂಡಿದ್ದಾರೆ. ಇದರಿಂದ ಕಬ್ಬನ್ನು ಕಾರ್ಖಾನೆಗೆ ಸಾಗಿಸಲು ಹಾದಿಯಿಲ್ಲ. ಈ ಬಗ್ಗೆ ಅಧಿಕಾರಿಗಳನ್ನು ಕೇಳಿದ್ರೆ ಉಡಾಫೆ ಉತ್ತರ ನೀಡುತ್ತಿದ್ದಾರೆ ಎಂದು ಜಿಲ್ಲೆಯ ಭಾಲ್ಕಿ ತಾಲೂಕಿನ ಲಖನ್‌ಗಾವ್ ಗ್ರಾಮದ ರೈತರು ಅಸಮಾಧಾನ ಹೊರಹಾಕಿದ್ದಾರೆ.
ನಮ್ಮ ಹೊಲಗಳಿಗೆ ಹೋಗುವ ಕಾಲುದಾರಿಯನ್ನು ಗ್ರಾಮದ ಪ್ರಭಾವಿ ವ್ಯಕ್ತಿಯೊಬ್ಬರು ಒತ್ತುವರಿ ಮಾಡಿಕೊಂಡಿದ್ದಾರೆ. ಕಷ್ಟಪಟ್ಟು ಸಾಲ ಮಾಡಿ ಕಬ್ಬು ಬೆಳೆದಿದ್ದೇವೆ. ಪ್ರವಾಹದಿಂದ ಉಳಿದ ಬೆಳೆಗಳೆಲ್ಲ ಕೊಚ್ಚಿ ಹೋಗಿದೆ. ಉಳಿದು ಬೆಳೆದು ನಿಂತ ಕಬ್ಬು ಸರಿಯಾದ ಸಮಯಕ್ಕೆ ಕಾರ್ಖನೆಗೆ ಸಾಗಿಸಿದರೆ ಸರಿಯಾದ ಬೆಲೆ ಬಂದು ನಮ್ಮ ಕಷ್ಟಕ್ಕೆ ಸಹಾಯವಾಗುತ್ತದೆ.
ಓದಿ-ಅಪ್ಪನ ಜೊತೆ ತೆಗೆಸಿದ ಕೊನೆಯ ಫೋಟೋ ಹಂಚಿಕೊಂಡ ಜಗ್ಗೇಶ್
ಜಮೀನಿಗೆ ಬರಲು ರಸ್ತೆ ಇಲ್ಲದಿರುವುದರಿಂದ ಯಾವ ಕಬ್ಬಿನ ಕಾರ್ಖಾನೆಗಳು ಕಬ್ಬು ತೆಗೆದುಕೊಂಡು ಹೋಗಲು ಬರುತ್ತಿಲ್ಲ. ಹೀಗಾಗಿ ಕಬ್ಬು ಒಣಗುತ್ತಿದೆ. ಒಂದು ವೇಳೆ ಕಬ್ಬು ಕಾರ್ಖಾನೆಗೆ ಹೋಗದಿದ್ದರೆ ಕಬ್ಬಿಗೆ ಬೆಂಕಿ ಹಾಕಿ ನಾವು ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ ಎಂದು ರೈತರು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಇತ್ತ ಪ್ರಭಾವಿ ವ್ಯಕ್ತಿಗಳು ರೈತರನ್ನು ದಬಾಯಿಸಿ, ನಿಮ್ಮ ಕಬ್ಬು ಒಣಗುತ್ತಿದ್ರೆ ನಾನು ಏನು ಮಾಡಲಿ? ಅದು ನಿಮ್ಮ ಹಣೆಬರಹ ಎಂದು ನಿರ್ಲಕ್ಷ್ಯದ ಧೋರಣೆ ವ್ಯಕ್ತಪಡಿಸಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ. ಅಲ್ಲದೆ ರಸ್ತೆ ಬೇಕಾದರೆ ಅವರ ಕಾಲಿಗೆ ಬೀಳಿ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ ಎಂದು ರೈತರು ದೂರಿದ್ದಾರೆ.