ಬೀದರ್: ಜಿಲ್ಲೆಯ ಔರಾದ್ ತಾಲೂಕಿನ ಬೊಂತಿ ಘಮಸುಬಾಯಿ ತಾಂಡಾದಲ್ಲಿ ಸಚಿವ ಪ್ರಭು ಚವ್ಹಾಣ್ ತಮ್ಮ ಗದ್ದೆಯಲ್ಲಿ ಎಳ್ಳು ಅಮಾವಾಸ್ಯೆ ಹಬ್ಬ ಆಚರಿಸಿದ್ದು, ಜೋಕಾಲಿ ಆಡಿ ಸಂಭ್ರಮಿಸಿದರು.
ಹಿಂಗಾರು ಹಂಗಾಮಿನ ಬೆಳೆಗಳೊಂದಿಗೆ ಸಂಭ್ರಮಿಸುವ ರೈತರ ಪವಿತ್ರ ಹಬ್ಬ ಎಳ್ಳು ಅಮವಾಸ್ಯೆ. ಜಮೀನಿನಲ್ಲಿ ಲಕ್ಷ್ಮಿ ಪೂಜೆ ನೆರವೇರಿಸಿ ಭಜ್ಜಿ, ರೊಟ್ಟಿ, ಅಂಬಲಿ, ಜೋಳದ ಹುಗ್ಗಿ ಹೀಗೆ ವಿಶೇಷ ಊಟ ತಯಾರಿಲಾಗಿತ್ತು.
ಜಿಲ್ಲಾ ಪಂಚಾಯತ್ ಸದಸ್ಯರಾದ ಅನೀಲ ಗುಂಡಪ್ಪ ಬಿರಾದರ, ಮಾರುತಿ ಚವ್ಹಾಣ, ಮುಖಂಡರಾದ ರಮೇಶ ದೇವಕತ್ತೆ, ಅಣೆಪ್ಪ ಖಾನಾಪೂರೆ, ಶಿವಾಜಿ ಚವ್ಹಾಣ ಸೇರಿದಂತೆ ಹಲವು ಮುಖಂಡರು ಇದ್ದರು.