ಬೀದರ್: ಲಾಕ್ಡೌನ್ನಿಂದಾಗಿ ಊಟ ಇಲ್ಲದೆ ಕಂಗಾಲಾಗಿರುವ ನಿರಾಶ್ರಿತರಿಗೆ ಎರಡು ಹೊತ್ತು ಊಟ ನೀಡುವ ಮೂಲಕ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚೌವ್ಹಾಣ್ ಅಭಿಯಾನ ಆರಂಭಿಸಿದ್ದಾರೆ.
ಔರಾದ್ ವಿಧಾನಸಭಾ ಕ್ಷೇತ್ರದಲ್ಲಿ ಸುತ್ತಾಡಿದ ಸಚಿವ ಪ್ರಭು ಚೌವ್ಹಾಣ್ ಬೀದಿಬದಿ ಬದುಕು ನಡೆಸುತ್ತಿರುವ ಜನರಿಗೆ ಬೆಳಿಗ್ಗೆ ಮತ್ತು ಸಂಜೆ ಹೊತ್ತು ಊಟ ನೀಡಲು ಆರಂಭಿಸಿದ್ದಾರೆ. ಇಂದಿನಿಂದ ಲಾಕ್ಡೌನ್ ಆದೇಶ ಅವಧಿ ಮುಗಿಯುವವರೆಗೆ ಊಟ ವಿತರಿಸಲಾಗುವುದು ಎಂದು ತಿಳಿಸಿದ್ದಾರೆ.
ಚಿಕ್ಲಿ ಬಾರ್ಡರ್ ಚೆಕ್ ಪೋಸ್ಟ್, ಮುರ್ಕಿ, ಕಮಲನಗರ ಹಾಗೂ ಔರಾದ್ ಪಟ್ಟಣದ ವಿವಿಧ ಬಡಾವಣೆಗಳಲ್ಲಿ ರಸ್ತೆ ಬದಿಯಲ್ಲಿ ಬದುಕು ಸಾಗಿಸುವ ನಿರಾಶ್ರಿತರಿಗೆ ಈ ವ್ಯವಸ್ಥೆ ಮಾಡಿರುವುದಾಗಿ ಹೇಳಿದ್ದಾರೆ.
ಅಲ್ಲದೆ ಚೆಕ್ ಪೋಸ್ಟ್ಗಳಲ್ಲಿ ಅಧಿಕಾರಿಗಳು ಖಡಕ್ ಆಗಿ ವರ್ತಿಸಬೇಕಾಗಿದೆ. ಯಾರೇ ಇದ್ದರೂ ರಾಜ್ಯದ ಗಡಿ ಪ್ರವೇಶಕ್ಕೆ ಅವಕಾಶ ಮಾಡಿಕೊಡಬೇಡಿ. ಸೋಂಕಿತರು ರಾಜ್ಯಕ್ಕೆ ಬಂದ್ರೆ ಅನಾಹುತವಾಗುವ ಸಂಭವವಿದ್ದು, ಹದ್ದಿನ ಕಣ್ಣಿಡುವಂತೆ ಸೂಚನೆ ನೀಡಿದ್ದಾರೆ.