ETV Bharat / state

ಸಿದ್ದರಾಮಯ್ಯ ಹೇಳೋದೆಲ್ಲಾ ಉಲ್ಟಾ ಆಗುತ್ತೆ: ಸಚಿವ ಈಶ್ವರಪ್ಪ - ಸಿದ್ದರಾಮಯ್ಯ ವಿರುದ್ಧ ಈಶ್ವರಪ್ಪ ವಾಗ್ದಾಳಿ

ಮಾಜಿ ಸಿಎಂ ಸಿದ್ದರಾಮಯ್ಯ ಹೇಳೋದೆಲ್ಲಾ ಉಲ್ಟಾ ಆಗುತ್ತೆ. ಈ ಬಾರಿ ಉಪ ಚುನಾವಣೆಯ ಫಲಿತಾಂಶ ಕೂಡ ಸಿದ್ದರಾಮಯ್ಯ ಪಾಲಿಗೆ ಉಲ್ಟಾ ಆಗಲಿದೆ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.

ಸಚಿವ ಕೆ.ಎಸ್. ಈಶ್ವರಪ್ಪ
ಸಚಿವ ಕೆ.ಎಸ್. ಈಶ್ವರಪ್ಪ
author img

By

Published : Nov 28, 2019, 7:44 PM IST

ಬೀದರ್: ಮಾಜಿ ಸಿಎಂ ಸಿದ್ದರಾಮಯ್ಯ ಹೇಳೋದೆಲ್ಲಾ ಉಲ್ಟಾ ಆಗುತ್ತೆ. ಈ ಬಾರಿ ಉಪ ಚುನಾವಣೆಯ ಫಲಿತಾಂಶ ಕೂಡ ಸಿದ್ದರಾಮಯ್ಯ ಪಾಲಿಗೆ ಉಲ್ಟಾ ಆಗಲಿದೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು. ನರೇಂದ್ರ ಮೋದಿ ಪ್ರಧಾನಿ ಆಗಲ್ಲ. ಕುಮಾರಸ್ವಾಮಿ ಅವರಪ್ಪನಾಣೆಗೂ ಸಿಎಂ ಆಗಲ್ಲ ಹಾಗೂ ಬಿ.ಎಸ್.ಯಡಿಯೂರಪ್ಪ ಸಿಎಂ ಆಗಲ್ಲ ಎಂದು ಹೇಳಿದ್ದ ಸಿದ್ದರಾಮಯ್ಯ ಅವರ ಹೇಳಿಕೆಗಳೆಲ್ಲವೂ ಉಲ್ಟಾ ಆಗಿಲ್ಲವೇ ಎಂದು ಪ್ರಶ್ನಿಸಿದ್ರು.

ಪ್ರಧಾನಿ ನರೇಂದ್ರ ಮೋದಿ ಮತ್ತೆ ಪ್ರಧಾನಿ ಆದ್ರು, ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಸಿದ್ದರಾಮಯ್ಯ ಅವರೇ ಕರೆದುಕೊಂಡು ಹೋಗಿ ಸಿಎಂ ಮಾಡಿಸಿದ್ದಾರೆ. ಬಿಎಸ್​ವೈ ಇದೀಗ ಸಿಎಂ ಆಗಿ ಅಧಿಕಾರದಲ್ಲಿ ಇದ್ದಾರೆ ಎಂದರು. ಅದೇ ರೀತಿ ಈ ಬಾರಿ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುವುದಿಲ್ಲ. ಚುನಾವಣೆ ನಂತರ ಬಿಎಸ್​ವೈ ಸರ್ಕಾರ ಪತನ ಗ್ಯಾರಂಟಿ ಎಂದು ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಇದು ಕೂಡ ಉಲ್ಟಾ ಆಗಲಿದೆ ಎಂದರು.

ಇನ್ನು ಅನರ್ಹ ಶಾಸಕರಿಗೆ ಸಚಿವ ಸ್ಥಾನ ನೀಡುವುದು ಗ್ಯಾರಂಟಿ. ಅವರಿಗೆ ಏನೆಲ್ಲಾ ಭರವಸೆ ಕೊಟ್ಟಿದ್ದೆವೋ ಅದರಂತೆ ನಮ್ಮ ನಾಯಕರು ನಡೆದುಕೊಳ್ತಾರೆ ಎಂದರು. ಈ ಸರ್ಕಾರ ಮುಂದಿನ ಮೂರು ವರ್ಷಗಳ ಕಾಲ ಸುಭದ್ರವಾಗಿರಲಿದೆ ಎಂದು ಈಶ್ವರಪ್ಪ ಹೇಳಿದರು.

ಸಚಿವ ಕೆ.ಎಸ್.ಈಶ್ವರಪ್ಪ

ಮಾಜಿ ಪ್ರಧಾನಿ ದೇವೇಗೌಡರಿಗೆ ಬಿಜೆಪಿ ಜತೆ ಸೇರಿ ಅಧಿಕಾರ ಮಾಡಬೇಕೆಂಬ ಆಸೆಯಿದೆ. ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಸೊಲ್ತಾರೆ. ಬಿಜೆಪಿ-ಜೆಡಿಎಸ್ ಶಾಸಕರ ಬೆಂಬಲ ಪಡೆದು ಅಧಿಕಾರಕ್ಕೆ ಬರಬೇಕೆಂದು ಅಂದುಕೊಂಡಿದ್ದಾರೆ ಎಂದರು. ಕುಮಾರಸ್ವಾಮಿ ಅನರ್ಹ ಶಾಸಕರನ್ನು ಸೋಲಿಸಿಯೇ ಸಿದ್ಧ ಎಂದು ಹೇಳುತ್ತಿದ್ದಾರೆ. ಅವರಿಗೆ ಅವರ ಅಪ್ಪ ದೇವೇಗೌಡರು, ಮಗ ನಿಖಿಲ್ ಅವರನ್ನೇ ಗೆಲ್ಲಿಸಲಿಕ್ಕಾಗಿಲ್ಲ. ಇನ್ನು ಅವರು ಬಿಜೆಪಿ ಅಭ್ಯರ್ಥಿಗಳನ್ನು ಎಲ್ಲಿ ಸೋಲಿಸ್ತಾರೆ ಎಂದರು.

Intro:ಸಿದ್ದರಾಮಯ್ಯ ಹೇಳೊದೆಲ್ಲ ಉಲ್ಟಾ ಆಗುತ್ತೆ- ಕೆ.ಎಸ್ ಈಶ್ಚರಪ್ಪ ವ್ಯಂಗ್ಯ...!

ಬೀದರ್:
ಮಾಜಿ ಸಿಎಂ ಸಿದ್ದರಾಮಯ್ಯ ಹೇಳೊದೆಲ್ಲಾ ಉಲ್ಟಾ ಆಗುತ್ತೆ ಈ ಬಾರಿ ಉಪ ಚುನಾವಣೆ ಪಲಿತಾಂಶ ಕೂಡ ಸಿದ್ದರಾಮಯ್ಯ ಪಾಲಿಗೆ ಉಲ್ಟಾ ಆಗಲಿದೆ ನೋಡ್ತಾ ಇರಿ ಎಂದು ಸಚಿವ ಕೆ.ಎಸ್ ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪ್ರಧಾನಿ ನರೇಂದ್ರ ಮೋದಿ ಪ್ರಧಾನಿ ಆಗೊಲ್ಲ. ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಅವರಪ್ಪನ ಆಣೆ ಸಿಎಂ ಆಗೋಲ್ಲ. ಬಿ.ಎಸ್ ಯಡಿಯೂರಪ್ಪ ಸಿಎಂ ಆಗೋಲ್ಲ ಎಂದು ಹೇಳಿದ್ದ ಸಿದ್ದರಾಮಯ್ಯ ಅವರ ಹೇಳಿಕೆಗಳೆಲ್ಲವೂ ಉಲ್ಟಾ ಆಗಿಲ್ಲವಾ...? ಪ್ರಧಾನಿ ನರೇಂದ್ರ ಮೋದಿ ಮತ್ತೆ ಪ್ರಧಾನಿ ಆದ್ರು, ಎಚ್.ಡಿ. ಕುಮಾರಸ್ವಾಮಿ ಅವರನ್ನು ಸಿದ್ದರಾಮಯ್ಯ ಅವರೆ ಕರಕೊಂಡು ಹೊಗಿ ಸಿಎಂ ಮಾಡಿಸಿದ್ದಾರೆ. ಬಿ.ಎಸ್ ವೈ ಈಗ ಸಿಎಂ ಆಗಿ ಅಧಿಕಾರದಲ್ಲಿ ಇದ್ದಾರೆ. ಹಾಗೆ ಈ ಬಾರಿ ಉಪಚುನಾವಣೆಯಲ್ಲಿ ಬಿಜೆಪಿ ಗೆಲ್ಲೊದಿಲ್ಲ ಚುನಾವಣೆ ನಂತರ ಬಿಎಸ್ ವೈ ಸರ್ಕಾರ ಪತನ ಗ್ಯಾರಂಟಿ ಎಂದು ಹೇಳ್ತರುವ ಸಿದ್ದರಾಮಯ್ಯ ಹೇಳಿಕೆ ಕೂಡ ಉಲ್ಟಾ ಆಗಲಿದೆ ಎಂದರು.

ಮಾಜಿ ಸಿಎಂ ಎಚಡಿಕೆ ಕಣ್ಣಿರು ಹಾಕ್ತಿದ್ದಾರೆ. ಅಂತದ್ದೆನಾಗಿದೆ ಚುನಾವಣೆಯಲ್ಲಿ ಸೋಲು ಗೆಲುವು ಸ್ವಾಭಾವಿಕರ ಕಣ್ಣಿರು ಹಾಕಿದ್ದರೆ ಹಾಕಬೇಡಿ ಅಂತ ಹೇಳಬಹುದು ಎಂದು ಈಶ್ವರಪ್ಪ ಸಮಾಧಾನ ಹೇಳಿದರು.

ಅನರ್ಹ ಶಾಸಕರಿಗೆ ಸಚಿವ ಸ್ಥಾನ ನೀಡುವುದು ಗ್ಯಾರಂಟಿ. ಅವರಿಗೆ ಎನೆಲ್ಲಾ ಭರವಸೆ ಕೊಟ್ಟಿದ್ದೆವೊ ಅದರಂತೆ ನಮ್ಮ ನಾಯಕರು ನಡೆದುಕೊಳ್ತಾರೆ ಈ ಸರ್ಕಾರ ಮುಂದಿನ ಮೂರು ವರ್ಷಗಳ ಕಾಲ ಸುಭದ್ರವಾಗಿರಲಿದೆ ಎಂದು ಈಶ್ವರಪ್ಪ ಹೇಳಿದರು.

ಜೆಡಿಎಸ್ ವರಿಷ್ಠ ದೇವೆಗೌಡರಿಗೆ ಬಿಜೆಪಿ ಜತೆ ಸೇರಿ ಅಧಿಕಾರ ಮಾಡಬೇಕೆಂಬ ಆಶೆ. ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಸೊಲ್ತಾರೆ. ಬಿಜೆಪಿ ಜೆಡಿಎಸ್ ಶಾಸಕರ ಬೆಂಬಲ ಪಡೆದು ಅಧಿಕಾರಕ್ಕೆ ಬರಬೇಕು ಎಂಬ ಆಶೆ ಅವರದ್ದು ಎಂದು ಈಶ್ವರಪ್ಪ ಹೇಳಿದ್ದಾರೆ. ಅಲ್ಲದೆ ಮಾಜಿ ಸಿಎಂ ಎಚ.ಡಿ ಕುಮಾರಸ್ವಾಮಿ ಅವರಿಗೆ ಅಪ್ಪ ದೇವೆಗೌಡರು, ಮಗ ನಿಖಿಲ್ ಅವರನ್ನೆ ಗೆಲ್ಲಿಸಲಿಕ್ಕಾಗಿಲ್ಲ ಬಿಜೆಪಿ ಅಭ್ಯರ್ಥಿಗಳನ್ನೆ ಎನ್ ಸೊಲಿಸ್ತಾರೆ ಎಂದು ಈಶ್ವರಪ್ಪ ಟಾಂಗ್ ಕೊಟ್ಟರು.Body:ಅನೀಲConclusion:ಬೀದರ್
ETV Bharat Logo

Copyright © 2025 Ushodaya Enterprises Pvt. Ltd., All Rights Reserved.