ಬೀದರ್: ಕಳೆದ ವಾರ ಜಿಲ್ಲೆಯಲ್ಲಾದ ಧಾರಾಕಾರ ಮಳೆಯಿಂದಾಗಿ ಕಮಲನಗರ ತಾಲೂಕಿನ ಅದೆಷ್ಟೋ ಗ್ರಾಮಗಳು ಮುಳುಗಡೆಯಾಗಿದ್ದವು, ಇದೀಗ ಮತ್ತೆ ಭಾರಿ ಮಳೆಯಾಗಿ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಶುಕ್ರವಾರ ಬೆಳಿಗ್ಗೆಯಿಂದ ಔರಾದ್, ಭಾಲ್ಕಿ ತಾಲೂಕಿನಲ್ಲಿ ಅಲ್ಪ ಪ್ರಮಾಣದ ಮಳೆಯಾಗಿತ್ತು. ಆದರೆ ಮಧ್ಯಾಹ್ನದ ನಂತರ ಕಮಲನಗರ ತಾಲೂಕಿನ ದಾಬಕಾ, ಮುರ್ಕಿ, ಮುಧೋಳ, ಡೊಣಗಾಂವ್ ಸೇರಿದಂತೆ ಬಹುತೇಕ ಭಾಗದಲ್ಲಿ ಮೂರು ಗಂಟೆಗಳ ಕಾಲ ಧಾರಾಕಾರ ಮಳೆಯಾಗಿದೆ.
ಕಳೆದ ಬಾರಿಯ ಮಳೆಗೆ ರೈತರ ಗದ್ದೆಯಲ್ಲಿ ನೆನೆದು ಹೋಗಿದ್ದ ಅಲ್ಪ ಸ್ವಲ್ಪ ಬೆಳೆಗಳು ಈಗ ನೀರುಪಾಲಾಗಿವೆ. ಹಳ್ಳ, ಕೆರೆ ಕಟ್ಟೆಗಳು ಅಪಾಯ ಮಟ್ಟದಲ್ಲಿ ಹರಿಯುತ್ತಿವೆ. ಗುಡುಗು ಮಿಶ್ರಿತ ಮಳೆ ಕಳೆದ ಮೂರು ಗಂಟೆಗಳಿಂದ ತಾಲೂಕಿನಾದ್ಯಂತ ಅಬ್ಬರಿಸುತ್ತಿದ್ದು, ಮಳೆಯ ರೌದ್ರಾವತಾರ ಇನ್ನೂ ಮುಂದುವರೆದಿದೆ.