ಬೀದರ್: ಗದ್ದೆಯಲ್ಲಿ ಬೇಲಿ ಹಚ್ಚುವ ಕೆಲಸದಲ್ಲಿ ತೊಡಗಿದ್ದಾಗ ಆಕಸ್ಮಿಕವಾಗಿ ಸಿಡಿಲು ಬಡಿದು, ರೈತನೊಬ್ಬ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಬೀದರ್ ತಾಲೂಕಿನ ಅಲಿಯಂಬರ್ ಗ್ರಾಮದಲ್ಲಿ ಜರುಗಿದೆ.
ಬಸವರಾಜ ಶೆಟ್ಟಿಗೊಂಡೆ (53) ಎಂಬ ರೈತ ಮೃತದುರ್ದೈವಿ. ಗದ್ದೆಯಲ್ಲಿ ಕೆಲಸ ಮಾಡುತ್ತಿರುವಾಗ ಬಿರುಗಾಳಿ ಸಹಿತ ಮಳೆಯಿಂದಾಗಿ, ಸಿಡಿಲು ಬಡಿದಿದೆ. ಈ ವೇಳೆಯಲ್ಲಿ ಮರದ ಪಕ್ಕದಲ್ಲಿಯೇ ಇದ್ದ ಬಸವರಾಜ ಅಸುನೀಗದ್ದಾರೆ.
ಸ್ಥಳಕ್ಕೆ ಜನವಾಡ ಪಿಎಸ್ಐ ಗಂಗಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.