ಬೀದರ್: ಅಕ್ರಮವಾಗಿ ಕಳ್ಳಭಟ್ಟಿ ಮಾರಾಟ ಮಾಡ್ತಿದ್ದ ಇಬ್ಬರ ಮೇಲೆ ಅಬಕಾರಿ ಪೊಲೀಸರು ಕೇಸ್ ದಾಖಲಿಸಿದ್ದಾರೆ.
ಜಿಲ್ಲೆಯ ಭಾಲ್ಕಿ ತಾಲೂಕಿನ ಕಪಲಾಪುರ ಗ್ರಾಮದ ಬಳಿ ಎರಡು ಬೈಕ್ಗಳ ಮೇಲೆ ಕಳ್ಳಭಟ್ಟಿ ಸಾಗಣೆ ಮಾಡ್ತಿದ್ದ ಮಾಹಿತಿ ಪಡೆದ ಅಧಿಕಾರಿಗಳು ದಾಳಿ ನಡೆಸಿ, ಎರಡು ಬೈಕ್, 20 ಲೀಟರ್ ಕಳ್ಳಭಟ್ಟಿ ವಶಪಡಿಸಿಕೊಂಡಿದ್ದಾರೆ.
250 ಲೀಟರ್ ಕಳ್ಳಭಟ್ಟಿ ಕೊಳೆ ನಾಶ: ಇನ್ನೊಂದೆಡೆ ಭಾಲ್ಕಿ ತಾಲೂಕಿನ ದೊಡ್ಡಿ ತಾಂಡಾದ ಹೊರ ವಲಯದಲ್ಲಿ ಬಿಂದಿಗೆಗಳಲ್ಲಿ ತುಂಬಿಡಲಾದ ಕಳ್ಳಭಟ್ಟಿ ಕೊಳೆಯನ್ನ ಅಬಕಾರಿ ಪೊಲೀಸರು ನಾಶಪಡಿಸಿದ್ದು, ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.