ಬೀದರ್: ಎಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅವರು 'ಮೇರಾ ಮಜೀದ್ ಮುಝೆ ದೇದೊ' ಎಂದು ಟ್ವೀಟ್ ಮಾಡಿದ್ದು, ಇದರ ವಿರುದ್ಧ ಕೆಂಡಕಾರಿರುವ ಸಚಿವ ಸಿ ಟಿ ರವಿ ಬಾಬರ್ ಎಲ್ಲಿಂದ ಬಂದಿದ್ದಾನೋ ಓವೈಸಿ ಕೂಡ ಅಲ್ಲಿಗೆ ಹೋಗಲಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
-
I want my masjid back. https://t.co/S3gOvF7q95
— Asaduddin Owaisi (@asadowaisi) November 15, 2019 " class="align-text-top noRightClick twitterSection" data="
">I want my masjid back. https://t.co/S3gOvF7q95
— Asaduddin Owaisi (@asadowaisi) November 15, 2019I want my masjid back. https://t.co/S3gOvF7q95
— Asaduddin Owaisi (@asadowaisi) November 15, 2019
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ರಾಜ್ಯದಲ್ಲಿ ಜಾತ್ಯಾತೀತ ಶಕ್ತಿಗಳು ಒಂದಾಗಿ ಮೈತ್ರಿ ಸರ್ಕಾರ ಆಡಳಿತಕ್ಕೆ ತಂದು 14 ತಿಂಗಳಲ್ಲೆ ಉರುಳಿ ಹೋಯ್ತು. ಈಗ ಮಹಾರಾಷ್ಟ್ರದಲ್ಲಿ ಮಹಾಮೈತ್ರಿ ಮಾಡಿಕೊಂಡಿದ್ದು, ಅದು ಕೂಡ ಕೇವಲ ನಾಲ್ಕು ತಿಂಗಳು ಮಾತ್ರ ಉಳಿಯಲಿದೆ ಎಂದು ಸಚಿವ ರವಿ ಭವಿಷ್ಯ ನುಡಿದರು.
ಕಾಂಗ್ರೆಸ್ನವರಿಗೆ ಈಗಲಾದ್ರು ಬುದ್ದಿ ಬಂದಿದೆ. ವೀರ ಸಾವರ್ಕರ್ ಬಗ್ಗೆ ಕೇವಲವಾಗಿ ಮಾತನಾಡಿರುವುದು ನಿಲ್ಲಿಸಲಿ. ಜೀವಿತಾವಧಿಯಲ್ಲಿ ಎರಡೆರಡು ಬಾರಿ ಜೈಲು ಶಿಕ್ಷೆ ಅನುಭವಿಸಿದ ವೀರ ಸಾರ್ವಕರ್ಗೆ ಭಾರತ ರತ್ನ ನೀಡುವ ವಿಚಾರದಲ್ಲಿ ಸರ್ವಾನುಮತ ಬರಲಿ ಎಂದು ಹೇಳಿದರು.
ಇನ್ನು, ಬಾಬ್ರಿ ಮಜೀದ್ ವಿಚಾರದಲ್ಲಿ ಎಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ತಕರಾರು ತೆಗೆದಿದ್ದು, 'ಮೇರಾ ಮಜೀದ್ ಮುಝೆ ದೇದೊ' ಎಂದು ಟ್ವೀಟ್ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಸಚಿವರು, ಬಾಬರ್ ಒಬ್ಬ ಅಕ್ರಮಣಕಾರಿ. ಅವನೊಂದಿಗೆ ಇವರು ಗುರುತಿಸಿಕೊಳ್ಳುವುದಾದರೆ ಅವನು ಎಲ್ಲಿಂದ ಬಂದಿದ್ದಾನೋ ಅಲ್ಲಿಗೆ ಹೋಗಲಿ. ಅಲ್ಲಿ ಮಸೀದಿ ಇದೆ ಎಂದು ಟಾಂಗ್ ನೀಡಿದರು.