ETV Bharat / state

ರೈತನಿಗೂ ಕಂಟಕವಾದ ಕೊರೊನಾ... ಬೆಳೆದ ದ್ರಾಕ್ಷಿ ಮಾರಲಾಗದೆ ಸಂಕಷ್ಟ

ಹುಮನಾಬಾದ್ ತಾಲೂಕಿನ ಘಾಟಬೋರಾಳ ಗ್ರಾಮದ ಗೊರಖನಾಥ್ ಸಗರ ಎಂಬ ರೈತ ತನ್ನ ಎರಡು ಎಕರೆ ಭೂಮಿಯಲ್ಲಿ 6 ಲಕ್ಷ ರೂಪಾಯಿ ಖರ್ಚು ಮಾಡಿ ದ್ರಾಕ್ಷಿ ಬೆಳೆದಿದ್ದಾರೆ. ಈ ಅವಧಿಯಲ್ಲಿ ದ್ರಾಕ್ಷಿ ಮಾರುಕಟ್ಟೆಗೆ ಹೋಗಿ ಹಾಕಿದ ಹಣ ವಾಪಸ್​ ಪಡೆದು ಲಾಭ ಸಿಬೇಕಿತ್ತು. ಆದ್ರೆ ಲಾಕ್​ಡೌನ್​ನಿಂದಾಗಿ ದ್ರಾಕ್ಷಿ ಗಿಡದಲ್ಲೇ ಕೆಟ್ಟು ಹೋಗುವ ಸ್ಥಿತಿ ಬಂದೊದಗಿದೆ.

corona-effect
ದ್ರಾಕ್ಷಿ ಬೆಳೆಗೆ ಕಂಟಕವಾಗಿ ಕಾಡಿದೆ ಕೊರೊನಾ
author img

By

Published : Apr 19, 2020, 7:25 PM IST

ಬೀದರ್: ವರ್ಷವಿಡೀ ಕಷ್ಟಪಟ್ಟು ಬೆಳೆದ ಬೆಳೆ ಕೈ ಸೇರಬೇಕು ಎನ್ನುವಷ್ಟರಲ್ಲೇ, ಲಾಕ್​ಡೌನ್ ಘೋಷಣೆಯಾಗಿದೆ. ಈಗ ಬೆಳೆದ ದ್ರಾಕ್ಷಿಯನ್ನು ಮಾರಾಟ ಮಾಡಲಾಗದೇ ಬೆಳೆಗಾರನೊಬ್ಬ ಕಂಗಾಲಾಗಿದ್ದಾರೆ.

ಹುಮನಾಬಾದ್ ತಾಲೂಕಿನ ಘಾಟಬೋರಾಳ ಗ್ರಾಮದ ಗೊರಖನಾಥ್ ಸಗರ ಎಂಬ ರೈತ ತಮ್ಮ ಎರಡು ಎಕರೆ ಭೂಮಿಯಲ್ಲಿ 6 ಲಕ್ಷ ರೂಪಾಯಿ ಖರ್ಚು ಮಾಡಿ ದ್ರಾಕ್ಷಿ ಬೆಳೆದಿದ್ದಾರೆ. ಆದ್ರೆ ಈಗ ಬೆಳೆದು ನಿಂತಿರುವ ದ್ರಾಕ್ಷಿಯನ್ನು ಮಾರುಕಟ್ಟೆಗೆ ಹೋಗಿ ಮಾರಲಾಗ್ತಿಲ್ಲ. ಕಾರಣ ಜನ ಮನೆಗಳಿಂದ ಹೊರ ಬರುತ್ತಿಲ್ಲ. ಹಾಗಾಗಿ ದ್ರಾಕ್ಷಿ ಗಿಡದಲ್ಲೇ ಕೆಟ್ಟು ಹೋಗುವ ಸ್ಥಿತಿ ನಿರ್ಮಾಣವಾಗಿದೆ.

ದ್ರಾಕ್ಷಿ ಬೆಳೆಗೆ ಕಂಟಕವಾಗಿ ಕಾಡಿದೆ ಕೊರೊನಾ

ಸದ್ಯ ದ್ರಾಕ್ಷಿಯನ್ನು ತೋಟದಲ್ಲೇ ಹೊರಗಿನಿಂದ ಬರುವ ಜನರಿಗೆ ಸ್ವಲ್ಪ ಪ್ರಮಾಣದಲ್ಲಿ ಮಾರಾಟ ಮಾಡಲಾಗ್ತಿದೆ. ಆದ್ರೆ ಮಾರುಕಟ್ಟೆ ಇಲ್ಲದೆ ಸಂಪೂರ್ಣ ದ್ರಾಕ್ಷಿ ಮಾರಾಟ ಕಷ್ಟ ಎನ್ನುತ್ತಿದ್ದಾರೆ ಈ ರೈತ.

ತೋಟಗಾರಿಕೆ ಅಧಿಕಾರಿಗಳು ಲಾಕ್​ಡೌನ್ ಸಮಯದಲ್ಲಿ ಪಾಸ್ ಮಾಡಿಕೊಡುವುದಾಗಿ ಹೇಳ್ತಾರೆ. ಆದ್ರೆ ಮಾರುಕಟ್ಟೆಯಲ್ಲಿ ಜನರೇ ಇಲ್ಲದಿರುವ ಈ ಸಂದರ್ಭದಲ್ಲಿ ಎಲ್ಲಿಗೆ ಹೋಗಿ ಮಾರಾಟ ಮಾಡಬೇಕು ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಸರ್ಕಾರವೇ ಸೂಕ್ತ ಪರಿಹಾರ ಹುಡುಕಬೇಕು ಎಂದು ಮನವಿ ಮಾಡಿದ್ದಾರೆ ರೈತ ಗೋರಖನಾಥ್​.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.