ಬೀದರ್ : ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‍ನ 25 ಸ್ಥಾನಗಳಿಗೆ ಇಂದು ಚುನಾವಣೆ ನಡೆಯುತ್ತಿದೆ. ಈ ಬೆನ್ನಲ್ಲೇ ಜಿಲ್ಲೆಯ ಔರಾದ್ ತಾಲೂಕಿನಲ್ಲಿ ಬಿಜೆಪಿ-ಕಾಂಗ್ರೆಸ್ ನಾಯಕರ ಹೈಡ್ರಾಮಾ ಆರಂಭವಾಗಿದೆ.
ಪಶು ಸಂಗೋಪನಾ ಇಲಾಖೆ ಸಚಿವ ಪ್ರಭು ಚೌಹಾಣ್ ಅವರ ಕಾರನ್ನು ಕಾಂಗ್ರೆಸ್ ಅಭ್ಯರ್ಥಿ ಭೀಮರಾವ್ ಪಾಟೀಲ್ ಬೆಳಗ್ಗೆಯಿಂದ ಹಿಂಬಾಲಿಸುತ್ತಿದ್ದಾರೆ ಎನ್ನಲಾಗಿದೆ.
ಸಚಿವ ಪ್ರಭು ಚೌಹಾಣ್ ಅವರ ತಂಡವನ್ನು ಕಾಂಗ್ರೆಸ್ ಅಭ್ಯರ್ಥಿ ಭೀಮರಾವ್ ತಂಡ ಬೆಳಗ್ಗೆ 9 ಗಂಟೆಯಿಂದ ದಾಬಕಾ, ಹೊಕ್ರಾಣ, ಭಂಡಾರ, ಕುಮಠಾ, ಎಕಂಬಾ ಭಾಗದಲ್ಲಿ ಹಿಂಬಾಲಿಸಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.
ಸಚಿವರು ಮತಗಟ್ಟೆಗಳಿಗೆ ಹೋಗದಂತೆ ಕಾವಲು ಮಾಡುತ್ತಿದ್ದಾರೆ ಎನ್ನಲಾಗಿದೆ. ಪ್ರಭು ಚೌಹಾಣ್ ಕೂಡ ಶಾಂತಿಯುತ ಮತದಾನಕ್ಕಾಗಿ ಮನವಿ ಮಾಡಿದ್ದಾರೆ.