ಬೀದರ್: ಖಾಸಗಿ ಆಸ್ಪತ್ರೆಯಲ್ಲಿ ಚುಚ್ಚು ಮದ್ದು ನೀಡಿದ ಕಾಂಪೌಂಡರ್ನಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, ರೋಂಗಿ ಸಂಖ್ಯೆ 590 ಸಾರಿ (SARI)ಯ ಸಂಪರ್ಕಕ್ಕೆ ಬಂದ 10 ಜನರಲ್ಲಿ ಸೊಂಕು ಪತ್ತೆಯಾಗಿದೆ.
ನಗರದ ಒಲ್ಡ್ ಸಿಟಿಯ ಗೊಲೆಖಾನದ ರೋಗಿ ನಂಬರ್ 590 SARI 82 ವಯಸ್ಸಿನ ನಿವೃತ್ತ ಶಿಕ್ಷಕನ ಸಾವಿನ ನಂತರ ಗಂಟಲು ಮಾದರಿ ಪರಿಕ್ಷೆ ಮಾಡಿದಾಗ ಸೊಂಕು ಪತ್ತೆಯಾಗಿದೆ. ಹೀಗಾಗಿ ಬ್ರೀಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ ಇಬ್ಬರು ಸಿಬ್ಬಂದಿ ಹಾಗೂ ಆತನ ಪತ್ನಿ ರೋಗಿ ಸಂಖ್ಯೆ 647 ಸೇರಿದಂತೆ ಒಟ್ಟು 7 ಜನರಲ್ಲಿ ಸೊಂಕು ಪತ್ತೆಯಾಗಿತ್ತು. ಆದ್ರೆ ಈಗ ಸೋಂಕಿತ 647ನೇ ರೋಗಿ ಮಹಿಳೆ ಅನಾರೋಗ್ಯದಿಂದ ಬಳಲುತ್ತಿದ್ದಾಗ ಖಾಸಗಿ ಆಸ್ಪತ್ರೆ ಕಾಂಪೌಂಡರ್ ಚುಚ್ಚು ಮದ್ದು ನೀಡಿದ್ದಾನೆ. ಈಗ ಅವನಲ್ಲೂ ಸೊಂಕು ಪತ್ತೆಯಾಗಿದೆ. ಅಲ್ಲದೆ ರೋಗಿ ಸಂಖ್ಯೆ 590ರ ಮನೆಯಲ್ಲೇ ಬಾಡಿಗೆ ಇದ್ದ ಮಹಿಳೆಯೊಬ್ಬಳಿಗೆ ಇಂದು ಸೋಂಕು ಪತ್ತೆಯಾಗಿದ್ದು, ಜಿಲ್ಲಾಡಳಿತಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಇನ್ನು ಖಾಸಗಿ ಆಸ್ಪತ್ರೆಯ ಕಾಂಪೌಂಡರ್ ರೋಗಿ ಸಂಖ್ಯೆ 770 ಮೈಲೂರು ನಿವಾಸಿಯಾಗಿದ್ದು, ಈ ವ್ಯಕ್ತಿಯಲ್ಲಿ ಸೊಂಕು ದೃಢವಾಗಿದೆ. ಒಲ್ಡ್ ಸಿಟಿಯಲ್ಲಿ ಇದ್ದ ಈ ಸೋಂಕು ಈಗ ಮೈಲೂರು ಭಾಗದಲ್ಲಿನ ವ್ಯಕ್ತಿಗೆ ತಗುಲಿದ್ದು, ಈತ ಎಷ್ಟು ಜನರ ಸಂಪರ್ಕಕ್ಕೆ ಬಂದಿದ್ದನೋ ಅವರನ್ನೆಲ್ಲ ಕ್ವಾರಂಟೈನ್ನಲ್ಲಿ ಇಡಲಾಗಿದೆ.