ಬೀದರ್: ಶೋಷಿತ ವರ್ಗಗಳ ಸಮಾವೇಶಕ್ಕೆ ಜಿಲ್ಲೆಗೆ ಆಗಮಿಸಿದ ಮಾಜಿ ಸಿಎಂ ಸಿದ್ದರಾಮಯ್ಯ ಸಮ್ಮುಖದಲ್ಲೇ ಜಿಲ್ಲಾ ಕಾಂಗ್ರೆಸ್‌ನಲ್ಲಿ ಹೊಗೆಯಾಡುತ್ತಿದ್ದ ಭಿನ್ನಮತ ಬಹಿರಂಗವಾಗಿದೆ.
ನಗರದ ಹೈದರಾಬಾದ್ ಹೆದ್ದಾರಿಯಲ್ಲಿ ಸಿದ್ದರಾಮಯ್ಯ ಸ್ವಾಗತಕ್ಕಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಅವರ ಒಂದು ಟೀಂ ನಿಂತರೆ, ಸ್ವಲ್ಪ ದೂರದಲ್ಲೇ ಮಾಜಿ ಸಿಎಂ ದಿವಂಗತ ಧರಂಸಿಂಗ್ ಅಳಿಯ ಚಂದ್ರಾಸಿಂಗ್ ಬೆಂಬಲಿಗರು ಪ್ರತ್ಯೇಕವಾಗಿ ಸ್ವಾಗತ ಮಾಡುವ ಮೂಲಕ ಪರಸ್ಪರ ಶಕ್ತಿ ಪ್ರದರ್ಶನ ತೊರಿಸಿರುವುದು ಕಂಡು ಬಂದಿದೆ.
ಸಿದ್ದರಾಮಯ್ಯ ಆಗಮಿಸುತ್ತಿದ್ದಂತೆ ಮೊದಲು ಒಂದು ಬಣ ಸ್ವಾಗತ ಮಾಡಿದರೆ, ಕೂಗಳತೆ ದೂರದಲ್ಲಿ ಮತ್ತೊಂದು ಬಣ ಪ್ರತ್ಯೇಕವಾಗಿ ಸ್ವಾಗತ ಮಾಡಿದೆ. ಅಲ್ಲದೆ ಎರಡೂ ಬಣದ ಕಾರ್ಯಕರ್ತರು ಈಶ್ವರ ಖಂಡ್ರೆ ಹಾಗೂ ಚಂದ್ರಾಸಿಂಗ್ ಪರ ಪ್ರತ್ಯೇಕವಾಗಿ ಘೋಷಣೆ ಕೂಗುವ ಮೂಲಕ ಬೀದರ್ ಕಾಂಗ್ರೆಸ್‌ನಲ್ಲಿ ಎಲ್ಲವೂ ಸರಿಯಿಲ್ಲ ಎಂಬುದನ್ನು ತೋರಿಸಿದ್ರು.