ಬೀದರ್ : ಕಟ್ಟಿಗೆ ತರಲೆಂದು ಕಾಡಿಗೆ ತೆರಳಿ ಪ್ರವಾಹಕ್ಕೆ ಸಿಲುಕಿದ್ದ ನಾಲ್ವರು ಕಾರ್ಮಿಕರು ರಾತ್ರಿಯಿಡೀ ಮರದ ಮೇಲೆ ಕುಳಿತು ಜೀವ ರಕ್ಷಣೆ ಮಾಡಿಕೊಂಡ ಘಟನೆ ಜಿಲ್ಲೆಯ ಹುಮನಾಬಾದ ತಾಲೂಕಿನ ಮೊಗದಾಳ ಗ್ರಾಮದ ವ್ಯಾಪ್ತಿಯಲ್ಲಿ ನಡೆದಿದೆ.
ಕಾಡಿನಲ್ಲಿ ಕಡಿದು ಕೂಡಿಟ್ಟಿದ ಕಟ್ಟಿಗೆ ತರಲೆಂದು ನಿನ್ನೆ ರಾತ್ರಿ ಓರ್ವ ಮಹಿಳೆ ಸೇರಿದಂತೆ ಮೂವರು ಪುರುಷರು ಕಾಡಿಗೆ ತೆರಳಿದ್ದರು. ಈ ವೇಳೆ ಭಾರಿ ಮಳೆ ಸುರಿದ ಪರಿಣಾಮ ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ.
ಇದರಿಂದ ಆತಂಕಗೊಂಡ ನಾಲ್ವರು ಜೀವ ರಕ್ಷಣೆಗಾಗಿ ತಕ್ಷಣ ಮರವೆರಿ ಕುಳಿತು ರಾತ್ರಿಯಿಡೀ ಅಲ್ಲೆ ಕಾಲ ಕಳೆದಿದ್ದಾರೆ.
ಬೆಳಗ್ಗೆ ಸುದ್ದಿ ತಿಳಿದ ಬೇಮಳಖೇಡಾ ಠಾಣೆ ಪಿಎಸ್ಐ ಗಂಗಮ್ಮ ನೇತೃತ್ವದ ಪೊಲೀಸರ ತಂಡ ಸ್ಥಳಕ್ಕೆ ಧಾವಿಸಿ, ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸ್ಥಳೀಯ ಮೀನುಗಾರರ ಸಹಾಯದೊಂದಿಗೆ ಇಂದು ಅವರನ್ನು ರಕ್ಷಿಸಿದ್ದಾರೆ.
ಕಾರ್ಮಿಕರೆಲ್ಲರೂ ಮಹಾರಾಷ್ಟ್ರದ ಭೀಡ್ ಜಿಲ್ಲೆಯ ಮೂಲದವರು ಎಂದು ತಿಳಿದು ಬಂದಿದೆ.