ETV Bharat / state

ಯಾಕತಪುರ ಶಾಲೆಯಲ್ಲಿ ಸುಂದರ ಕೈತೋಟ; ಮಕ್ಕಳ ಮಧ್ಯಾಹ್ನದ ಬಿಸಿಯೂಟಕ್ಕೆ ಅನುಕೂಲ - ETv Bharat kannada news

ಸರ್ಕಾರಿ ಶಾಲೆಯ ಆವರಣದಲ್ಲಿ ಕೈತೋಟವಿದ್ದರೆ ಹೇಗೆ?. ಹೌದು, ಇಲ್ಲೊಂದೆಡೆ ಗ್ರಾಮ ಪಂಚಾಯಿತಿ ಬೆಂಬಲದೊಂದಿಗೆ ಸುಂದರ ಕೈತೋಟ ರೂಪುಗೊಂಡಿದ್ದು, ವಿದ್ಯಾರ್ಥಿಗಳ ಮಧ್ಯಾಹ್ನದ ಬಿಸಿಯೂಟಕ್ಕೂ ಅನುಕೂಲವಾಗುತ್ತಿದೆ.

Beautiful hand garden at Yakatapura School
ಯಾಕತಪುರ ಶಾಲೆಯಲ್ಲಿ ಸುಂದರ ಕೈತೋಟ
author img

By

Published : Jan 18, 2023, 12:17 PM IST

Updated : Jan 18, 2023, 1:21 PM IST

ಯಾಕತಪುರ ಸರ್ಕಾರಿ ಶಾಲೆಯ ಆವರಣದಲ್ಲಿ ಪೌಷ್ಠಿಕ ಕೈತೋಟ ನಿರ್ಮಾಣ

ಬೀದರ್ : ತಾಲೂಕಿನ ನಾಗೋರಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಾಕತಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಸುಂದರ ಪೌಷ್ಠಿಕ ಕೈತೋಟ ರೂಪುಗೊಂಡಿದೆ. ಗ್ರಾಮ ಪಂಚಾಯಿತಿ ವತಿಯಿಂದ ತೋಟ ನಿರ್ಮಾಣವಾಗಿದ್ದು ಹಲವು ಬಗೆಯ ಸೊಪ್ಪು, ತರಕಾರಿ ಬೆಳೆಯುತ್ತಿದ್ದಾರೆ. ಶಾಲಾ ವಿದ್ಯಾರ್ಥಿಗಳ ಮಧ್ಯಾಹ್ನದ ಬಿಸಿಯೂಟಕ್ಕೆ ಇದರಿಂದ ಅನುಕೂಲವಾಗುತ್ತಿದೆ.

ನಾಗೋರಾ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗಾಯತ್ರಿದೇವಿ ಹೊಸಮನಿ ಮಾತನಾಡಿ, ಕೈತೋಟದಲ್ಲಿ ಟೊಮೆಟೊ, ಮೆಂತೆ, ನುಗ್ಗೆ, ಅವರೆ, ಕೊತ್ತಂಬರಿ ಸೊಪ್ಪು, ಮೆಣಸಿನಕಾಯಿ ಸೇರಿ ವಿವಿಧ ತರಕಾರಿಗಳ ಬೀಜಗಳನ್ನು ಬಿತ್ತಲಾಗಿದೆ. ಕರಿಬೇವು, ತೆಂಗು, ಪೇರಲ, ನೇರಳೆ, ದಾಳಿಂಬೆ ಸಸಿಗಳನ್ನೂ ನೆಟ್ಟಿದ್ದೇವೆ. ಬೆಳೆದ ತರಕಾರಿಗಳನ್ನು ಬಿಸಿಯೂಟಕ್ಕೆ ಬಳಸುತ್ತಿದ್ದೇವೆ. ಶಾಲಾ ಆವರಣದಲ್ಲಿ ಕೊಳವೆಬಾವಿ ಇದ್ದು ನೀರುಣಿಸಲು ಸಮಸ್ಯೆ ಇಲ್ಲ ಎಂದರು.

ಮಕ್ಕಳಿಗೆ ಪೌಷ್ಟಿಕ ಆಹಾರ ಸಿಗಬೇಕು. ಔಷಧರಹಿತ ತರಕಾರಿ ನೀಡಬೇಕು ಎಂಬ ಉದ್ದೇಶದಿಂದ ಕೈತೋಟವನ್ನು ಶಾಲಾ ಆವರಣದಲ್ಲೇ ನಿರ್ಮಿಸಲಾಗಿದೆ. ನಾಗೋರಾ ಗ್ರಾಮ ಪಂಚಾಯಿತಿಯ ಜನಪ್ರತಿನಿಧಿಗಳ ಸಹಕಾರದೊಂದಿಗೆ ಕೈತೋಟ ನಿರ್ಮಿಸಿ ಪೋಷಿಸಲಾಗುತ್ತಿದೆ ಎಂದು ಪಿಡಿಒ ಹೇಳಿದರು.

ಈ ಕೈತೋಟದಿಂದ ಶಾಲೆಯ ಸೌಂದರ್ಯವೂ ಹೆಚ್ಚಾಗಿದ್ದು, ಮಕ್ಕಳಲ್ಲಿ ಪರಿಸರ ಪ್ರೀತಿ ಮೂಡಿಸುತ್ತಿದೆ. ಇದೇ ಮಾದರಿಯಲ್ಲಿ ಕೈತೋಟ ನಿರ್ಮಿಸಲು ವಿವಿಧ ಸರ್ಕಾರಿ ಶಾಲೆಗಳು ಮುಂದಾಗಿರುವುದು ಗಮನಾರ್ಹ ಬೆಳವಣಿಗೆ. ನಾಗೋರಾ ಗ್ರಾಮ ಪಂಚಾಯಿತಿ ಅಧ್ಯಕ್ಷ, ಸದಸ್ಯರ ಸಹಕಾರದಿಂದ ಸರ್ಕಾರಿ ಶಾಲೆಯಲ್ಲಿ ಕೈತೋಟ ಸಿದ್ದವಾಗಿದೆ ಎಂದರು.

ಮುಂಬರುವ ದಿನಗಳಲ್ಲಿ ಅಮೃತ ಯೋಜನೆಯಡಿ ಪಂಚಾಯಿತಿ ವ್ಯಾಪ್ತಿಯ ಇನ್ನಷ್ಟು ಶಾಲೆಗಳಲ್ಲಿ ಕೈತೋಟ ನಿರ್ಮಿಸಲು ಯೋಜಿಸಲಾಗಿದೆ. ಪಿಡಿಒ ಆಸಕ್ತಿಯ ಫಲವಾಗಿ ಶಾಲೆಯಲ್ಲಿ ಆಕರ್ಷಕ ಕೈತೋಟ ನಿರ್ಮಾಣಗೊಂಡಿದೆ. ಇದರಿಂದ ಗ್ರಾಮದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ಗ್ರಾಮ ಪಂಚಾಯಿತಿ ಸದಸ್ಯ ನರಸಪ್ಪ ಯಾಕತಪುರ ಹೇಳಿದರು.

ಇದನ್ನೂ ಓದಿ: ಕೊಠಡಿಯಲ್ಲಿಯೇ ಕೃತಕ ಬೆಳಕಿನಲ್ಲಿ ಕೃಷಿ: ಕೃಷಿ ವಿವಿಯ ಹೊಸ ಸಂಶೋಧನೆ

Last Updated : Jan 18, 2023, 1:21 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.