ಬೀದರ್ : ಜೈಲು ಅಧಿಕಾರಿಯೋರ್ವ ಲಂಚ ಪಡೆಯುವಾಗ ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿರುವ ಘಟನೆ ನಡೆದಿದೆ.
ಓದಿ: ಅಕ್ರಮ ಸಂಬಂಧ: ವಿಧವೆಯೊಂದಿಗೆ ಬೆತ್ತಲಾದ ಯುವಕ, ಬ್ಲ್ಯಾಕ್ ಮೇಲ್ಗೆ ಹೆದರಿ ಆತ್ಮಹತ್ಯೆ
ನಗರದ ಜಿಲ್ಲಾ ಕೇಂದ್ರ ಕಾರಾಗೃಹದ ಜೈಲು ಅಧಿಕಾರಿ ಬಸವರಾಜ್ ಎಂಬಾತ, ಆದರ್ಶ ಎಂಬ ವ್ಯಕ್ತಿಯಿಂದ 90 ಸಾವಿರ ರೂಪಾಯಿ ಲಂಚ ಪಡೆಯುವಾಗ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಜೈಲಿನಲ್ಲಿ ಕೈದಿಯಾಗಿರುವ ರೇವಣ್ಣ ಸಿದ್ದಯ್ಯ ಎಂಬಾತನನ್ನ ಹೆಚ್ಚಿನ ಚಿಕಿತ್ಸೆಗಾಗಿ ಬೇರೆ ಕಡೆ ಕರೆದುಕೊಂಡು ಹೋಗಲು ಕೈದಿಯ ಸಂಬಂಧಿಕ ಆದರ್ಶ, ಜೈಲು ಸಹಾಯಕ ಬಸವರಾಜ್‌ರನ್ನ ಕೇಳಿಕೊಂಡಾಗ ಒಂದು ಲಕ್ಷ ರೂ. ಲಂಚ ನೀಡುವಂತೆ ಡಿಮ್ಯಾಂಡ್ ಮಾಡಿದ್ದರು.
₹90 ಸಾವಿರ ಹಣ ನೀಡುವಾಗ ಎಸಿಬಿ ಎಸ್ಪಿ ಮಹೇಶ ಮೇಗನವರ್ ನೇತೃತ್ವದ ತಂಡದಿಂದ ದಾಳಿ ನಡೆಸಿ ಸಹಾಯಕ ಜೈಲರ್ನನ್ನು ವಶಕ್ಕೆ ಪಡೆದು ಕೊಂಡಿದ್ದಾರೆ.