ಬೀದರ್ : ಮಹಾರಾಷ್ಟ್ರದಿಂದ ಜಿಲ್ಲೆಗೆ ಮರಳಿದ್ದ 42 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಸೋಂಕಿತರ ಸಂಖ್ಯೆ 350ಕ್ಕೆ ಏರಿಕೆಯಾಗಿದೆ.
ಬೀದರ್ ತಾಲೂಕಿನ ನಜವಾಡ ಗ್ರಾಮದಲ್ಲಿ 1, ಬಸವಕಲ್ಯಾಣ ತಾಲೂಕಿನ ಭೋಸ್ಗಾ ಗ್ರಾಮದಲ್ಲಿ 13, ಲಾಡವಂತಿ 6, ಸೇರೂರಿ 2, ಹತ್ತರಗಾ-1, ಘಾಟ ಹಿಪ್ಪರಗಾ ತಾಂಡ 3, ಬಸವಕಲ್ಯಾಣ 1, ಯಕಲೂರ ವಾಡಿ 3, ರಾಜೇಶ್ವರ 1, ಹತ್ಯಾಳ ತಾಂಡ 1, ಬೇಲೂರ 3, ತ್ರಿಪುರಾಂತ 1, ಖೇರ್ಡಾ(ಕೆ)1, ದಾಸೂರವಾಡಿ 3, ಸಸ್ತಾಪೂರ್ 1 ಹಾಗೂ ಆಶ್ರಯ ಕಾಲೋನಿಯಲ್ಲಿ 1 ಸೇರಿ ಒಟ್ಟು 42 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 350ಕ್ಕೆ ಏರಿಕೆ ಕಂಡಿದೆ. ಈವರೆಗೂ 6 ಜನರು ಸಾವನ್ನಪ್ಪಿದ್ದಾರೆ. ಈಗಾಗಲೇ 203 ಜನರು ಗುಣಮುಖರಾಗಿದ್ದಾರೆ. 141 ಜನರಿಗೆ ಕೋವಿಡ್-19 ವಾರ್ಡ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.