ಬೀದರ್: ಎರಡು ಬೈಕ್ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಇಬ್ಬರು ಸಾವನ್ನಪ್ಪಿದ್ದು, ಮತ್ತಿಬ್ಬರ ಸ್ಥಿತಿ ಚಿಂತಾಜನಕವಾಗಿದೆ.
ಜಿಲ್ಲೆಯ ಔರಾದ್ ತಾಲೂಕಿನ ಗಣೇಶಪೂರ್ ಬಳಿ ರಸ್ತೆ ಅಪಘಾತವಾಗಿದ್ದು, ಎಕಂಬಾ ಗ್ರಾಮದ ನರಸಿಂಗ್ ರಂಗರಾವ್ ಬಿರಾದರ ಎಂಬಾತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಇನ್ನು ಬೆಳಕೊಣಿ ಗ್ರಾಮದ ವಿನೋದ ರಾಮ್ ಮಾನೆ ಎಂಬಾತ ಆಸ್ಪತ್ರೆ ಸಾಗಿಸುವಾಗ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.
ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ. ಸ್ಥಳಕ್ಕೆ ಔರಾದ್ ಪೊಲೀಸ್ ಠಾಣೆ ಸಿಪಿಐ ರಮೇಶ್ಕುಮಾರ್ ಮೈಲೂರಕರ್ ಹಾಗೂ ಪಿಎಸ್ಐ ನಾನಾಗೌಡ ಪಾಟೀಲ್ ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.