ಬೀದರ್: ಜಿಲ್ಲೆಯಲ್ಲಿ ಕೊರೊನಾ ವಿರುದ್ಧದ ಸಮರ ಮುಂದುವರೆದಿದ್ದು ಇಂದು ಒಂದೇ ದಿನ ಜಿಲ್ಲೆಯಾದ್ಯಂತ 104 ಜನ ಸೋಂಕಿತರು ಗುಣಮುಖರಾಗಿ ಬಿಡುಗಡೆಯಾಗಿದ್ದು ಹೊಸದಾಗಿ 17 ಜನರಿಗೆ ಕೊರೊನಾ ಸೋಂಕು ದೃಢವಾಗಿದೆ.
ಜಿಲ್ಲೆಯಲ್ಲಿ ಮಳೆಯ ಆರ್ಭಟದ ನಡುವೆ ಕೋವಿಡ್-19 ವೈರಾಣು ಸೋಂಕಿನ ವಿರುದ್ಧ ಜಿಲ್ಲಾಡಳಿತ ಸಮರ್ಥವಾಗಿ ಹೊರಾಡುತ್ತಿದ್ದು, ಬೀಮ್ಸ್ ಆಸ್ಪತ್ರೆಯ ವೈದ್ಯರ ಶ್ರಮದಿಂದಾಗಿ ಜಿಲ್ಲೆಯಲ್ಲಿ ಬಿಡುಗಡೆಯಾಗುವವರ ಸಂಖ್ಯೆ ಹೆಚ್ಚಾಗಿದೆ.
![Bidar](https://etvbharatimages.akamaized.net/etvbharat/prod-images/kn-bdr-02-21-coronaupdate-7203280-av-0_21092020203804_2109f_1600700884_641.jpg)
ಜಿಲ್ಲೆಯಲ್ಲಿ 17 ಜನ ಸೋಂಕಿತರು ಪತ್ತೆಯಾಗಿದ್ದು ಈ ಮೂಲಕ ಸೋಂಕಿತರ ಸಂಖ್ಯೆ 5,840 ಕ್ಕೆ ಏರಿಕೆಯಾಗಿದ್ದು 5,228 ಜನ ಸೋಂಕಿತರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಅಲ್ಲದೇ 149 ಜನ ಸಾವನ್ನಪ್ಪಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.