ETV Bharat / state

ಸಿಎಎ,ಎನ್‌ಆರ್‌ಸಿ, ಎನ್‌ಪಿಆರ್ ವಿರೋಧಿಸಿ ನೂರಾರು ಮಹಿಳೆಯರಿಂದ ಪ್ರತಿಭಟನೆ.. - ಎಐಎಂಎಸ್​ಎಸ್ ನ ರಾಜ್ಯ ಉಪಾಧ್ಯಕ್ಷೆ ಎಂ.ಎನ್.ಮಂಜುಳಾ

ಸಿಎಎ, ಎನ್​ಆರ್​ಸಿ ಮತ್ತು ಎನ್​ಪಿಆರ್​​ ಇದೊಂದು ಮಹಿಳಾ ವಿರೋಧಿ ಕಾನೂನುಗಳಾಗಿವೆ. ಇದನ್ನು ವಾಪಸ್​​ ತೆಗೆದುಕ್ಕೊಳ್ಳೋವರೆಗೂ ನಮ್ಮ ಹೋರಾಟ ನಿಲ್ಲಲ್ಲ. ಕೇಂದ್ರ ಸರ್ಕಾರ ಭೇಟಿ ಪಡಾವೋ ಭೇಟಿ ಬಚಾವೋ ಅಂತಾ ಹೇಳಿದ್ರು. ಆದರೆ, ಭೇಟಿ ಬಚಾವೋ ಆಗುತ್ತಿಲ್ಲ. ಆದರೆ, ಮಹಿಳೆಯರನ್ನು ದೇಶ ಬಿಟ್ಟು ಹೋಗಿ ಎನ್ನುವ ಧೋರಣೆಯನ್ನು ಬಿಜೆಪಿ ಸರ್ಕಾರ ತೋರಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

womens protest against caa and nrc and npr in bellary
ಸಿಎಎ ಮತ್ತು ಎನ್.ಆರ್.ಸಿ ಹಾಗೂ ಎನ್.ಪಿ.ಆರ್ ವಿರೋಧಿಸಿ ನೂರಾರು ಮಹಿಳೆಯರಿಂದ ಪ್ರತಿಭಟನೆ
author img

By

Published : Feb 4, 2020, 11:07 PM IST

ಬಳ್ಳಾರಿ: ನಗರದಲ್ಲಿ ಸಂಗಮ್ ವೃತ್ತದಿಂದ ಜಿಲ್ಲಾಧಿಕಾರಿ‌ ಕಚೇರಿವರೆಗೆ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ (ಎಐಎಂಎಸ್​ಎಸ್) ಜಿಲ್ಲಾ ಸಮಿತಿಯಿಂದ ಅಖಿಲ ಭಾರತ ಪ್ರತಿಭಟನಾ ದಿನದ ಅಂಗವಾಗಿ ಜಿಲ್ಲೆಯಲ್ಲಿ ಸಿಎಎ, ಎನ್‌ಆರ್‌ಸಿ ಹಾಗೂ ಎನ್‌ಪಿಆರ್ ವಿರೋಧಿಸಿ ನೂರಾರು ಮಹಿಳೆಯರು ಪ್ರತಿಭಟನೆ ಮಾಡಿದರು.

ಸಿಎಎ, ಎನ್‌ಆರ್‌ಸಿ ಹಾಗೂ ಎನ್‌ಪಿಆರ್ ವಿರೋಧಿಸಿ ನೂರಾರು ಮಹಿಳೆಯರ ಪ್ರತಿಭಟನೆ..

ಈ ಸಭೆಯನ್ನು ಉದ್ದೇಶಿಸಿ (ಎಐಎಂಎಸ್​ಎಸ್)ನ ರಾಜ್ಯ ಉಪಾಧ್ಯಕ್ಷೆ ಎಂ ಎನ್ ಮಂಜುಳಾ ಮಾತನಾಡಿ, ಇಡೀ ದೇಶದಾದ್ಯಂತ ಮಹಿಳೆಯರು ನೂರಾರು ಶಾಹಿನ್‌ ಬಾಗ್‌ಗಳನ್ನು ರಚನೆ ಮಾಡಿ ಹೋರಾಟ ಮಾಡುತ್ತಿದ್ದಾರೆ. ಸಿಎಎ, ಎನ್​ಆರ್​ಸಿ ಮತ್ತು ಎನ್​ಪಿಆರ್​​ ಇದೊಂದು ಮಹಿಳಾ ವಿರೋಧಿ ಕಾನೂನುಗಳಾಗಿವೆ. ಇದನ್ನು ವಾಪಸ್​​ ತೆಗೆದುಕ್ಕೊಳ್ಳೋವರೆಗೂ ನಮ್ಮ ಹೋರಾಟ ನಿಲ್ಲಲ್ಲ. ಕೇಂದ್ರ ಸರ್ಕಾರ ಭೇಟಿ ಪಡಾವೋ ಭೇಟಿ ಬಚಾವೋ ಅಂತಾ ಹೇಳಿದ್ರು. ಆದರೆ, ಭೇಟಿ ಬಚಾವೋ ಆಗುತ್ತಿಲ್ಲ. ಆದರೆ, ಮಹಿಳೆಯರನ್ನು ದೇಶ ಬಿಟ್ಟು ಹೋಗಿ ಎನ್ನುವ ಧೋರಣೆಯನ್ನು ಬಿಜೆಪಿ ಸರ್ಕಾರ ತೋರಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಂತರ ಎಸ್​ಯುಸಿಐ ಕಮ್ಯೂನಿಸ್ಟ್ ಪಾರ್ಟಿಯ ಜಿಲ್ಲಾ ಕಾರ್ಯದರ್ಶಿ ರಾಧಾಕೃಷ್ಣ ಉಪಾಧ್ಯ ಮಾತನಾಡಿ, ಕೇಂದ್ರ ಬಿಜೆಪಿ ಸರ್ಕಾರ ಅತ್ಯಂತ ಜನ ವಿರೋಧಿ ನೀತಿಯಾಗಿರುವ ಸಿಎಎ, ಎನ್​ಆರ್​​ಸಿ ಮತ್ತು ಎನ್​​ಪಿಆರ್‌ನ ತರುತ್ತಿದೆ. ಇದರ ವಿರುದ್ಧ ನಾವೆಲ್ಲರೂ ಧ್ವನಿ ಎತ್ತ ಬೇಕಿದೆ. ಈ ದೇಶದಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತರು ಎಲ್ಲ ಧರ್ಮದವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದರು. ಇದು ಒಂದು ಧರ್ಮಕ್ಕೆ ಸೀಮಿತವಾದ ದೇಶ ಅಲ್ಲ. ಇದು ಎಲ್ಲ ಧರ್ಮದವರ ದೇಶ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.