ಬಳ್ಳಾರಿ : ಗಣಿನಾಡು ಗ್ರಾಮಾಂತರ ಪ್ರದೇಶದ ರೇಡಿಯೋ ಪಾರ್ಕ್ನ ಸರ್ಕಾರಿ ಐಟಿಐ ಕಾಲೇಜ್ ಮೈದಾನದಲ್ಲಿ ತರಕಾರಿ ಮಾರಾಟ ಮಾಡಲು ಜಿಲ್ಲಾಡಳಿತ ಆದೇಶವನ್ನು ನೀಡಿದೆ. ಆದರೆ, ಲಾಕ್‌ಡೌನ್ ಉಲ್ಲಂಘಿಸಿ ಕೌಲ ಬಜಾರ್ ಪ್ರದೇಶದಲ್ಲಿ ತರಕಾರಿ ಮಾರಾಟ ಮಾಡ್ತಿರೋದನ್ನ ನಿನ್ನೆ (28.03.20) ರಂದು ಈಟಿವಿ ಭಾರತ ವರದಿ ಪ್ರಸಾರ ಮಾಡಿತ್ತು. ಲಾಕ್‌ಡೌನ್ ಉಲ್ಲಂಘಿಸ್ತಿರೋ ಬಗ್ಗೆ ಜಿಲ್ಲಾಡಳಿತವನ್ನ ಎಚ್ಚರಿಸಿತ್ತು. ಇದರಿಂದಾಗಿ ಇವತ್ತು ಅಧಿಕಾರಿಗಳೇ ಎಚ್ಚೆತ್ತು ಕೌಲ್‌ಬಜಾರ್‌ದಿಂದ ತರಕಾರಿ ವ್ಯಾಪಾರಸ್ಥರನ್ನು ಸರ್ಕಾರಿ ಐಟಿಐ ಕಾಲೇಜಿಗೆ ಶಿಫ್ಟ್ ಮಾಡಿಸಿದ್ದಾರೆ. ಇದು ಈಟಿವಿ ಭಾರತ ಇಂಪ್ಯಾಕ್ಟ್..
ನಗರದಲ್ಲಿ ಏಳು ಕ್ರೀಡಾ ಮೈದಾನದಲ್ಲಿ ತಾತ್ಕಾಲಿಕವಾಗಿ ತರಕಾರಿ ಮಾರಾಟ ಮಾಡಲು ಜಿಲ್ಲಾಡಳಿತ ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ರೇಡಿಯೋ ಪಾರ್ಕ್ನ ಸರ್ಕಾರಿ ಐಟಿಐ ಕಾಲೇಜ್ ಮೈದಾನದಲ್ಲಿ ವ್ಯಾಪಾರಸ್ಥರು ತರಕಾರಿ ಮಾರಾಟ ಮಾಡಿದರು. ಗ್ರಾಹಕರರು ಸಹ ಅಂತರ ಕಾಯ್ದುಕೊಂಡು ತರಕಾರಿ ಖರೀದಿಸಿದರು.