ಹೊಸಪೇಟೆ : ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಡೆದ ತಾಲೂಕು ಪಂಚಾಯಿತಿ ಅಧ್ಯಕ್ಷರ ಚುನಾವಣೆಯಲ್ಲಿ ನಾಗೇನಹಳ್ಳಿ ಸದಸ್ಯೆ ನಾಗವೇಣಿ ಬಸವರಾಜ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಜೋಗದ ನೀಲಮ್ಮ ಅವರು ಅಧ್ಯಕ್ಷೆ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಹಾಗಾಗಿ ಚುನಾವಣೆ ನಡೆದಿತ್ತು. ನಾಗವೇಣಿ ಅವರು ಮಾತ್ರ ಅಧ್ಯಕ್ಷೆ ಸ್ಥಾನಕ್ಕೆ ನಾಮಪತ್ರವನ್ನು ಸಲ್ಲಿಸಿದ್ದರು. ಹಾಗಾಗಿ ಇವರು ಅವಿರೋಧ ಆಯ್ಕೆಯನ್ನು ಚುನಾವಣಾಧಿಕಾರಿ, ಎಸಿ ಶೇಖ್ ತನ್ವೀರ್ ಆಸೀಫ್ ಘೋಷಿಸಿದರು.
ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ತಾಲೂಕು ಪಂಚಾಯತಿ ಅಧ್ಯಕ್ಷೆ ಗದ್ದುಗೆಯನ್ನು ನಾಗವೇಣಿ ಬಸವರಾಜ ಅವರು ಅವಿರೋಧವಾಗಿ ಆಯ್ಕೆಯಾಗಿ ಮಾಡಿದ್ದು, ತಾಲೂಕು ಪಂಚಾಯಿತಿ ಚುನಾವಣೆಗೆ ಇನ್ನು 14 ತಿಂಗಳು ಕಾಲಾವಕಾಶವಿತ್ತು.
ಒಟ್ಟು 18 ತಾಲೂಕು ಪಂಚಾಯಿತಿ ಸದಸ್ಯರು ಇದ್ದು, ಈಗ ಹೊಸದಾಗಿ ಕಂಪ್ಲಿ ತಾಲೂಕು ರಚನೆಯಾಗಿರುವುದರಿಂದ 7 ಸದಸ್ಯರು ಕಂಪ್ಲಿ ತಾಲೂಕು ವ್ಯಾಪ್ತಿಗೆ ಬರುತ್ತಾರೆ. ಪ್ರಸ್ತುತವಾಗಿ ಹೊಸಪೇಟೆ ತಾಲೂಕು ಪಂಚಾಯತಿ ಸದಸ್ಯರ ಸಂಖ್ಯೆ 11ಆಗಿದೆ. ತಾಲೂಕು ಪಂಚಾಯಿತಿ ಎಡಿ ಉಮೇಶ ಹಾಗೂ ತಾಲೂಕು ಪಂಚಾಯಿತಿ ಸದಸ್ಯರು ಹಾಗೂ ಉಪಸ್ಥಿತಿ ಇದ್ದರು.