ಹೊಸಪೇಟೆ: ಹಂಪಿ ಉತ್ಸವ ನೋಡಲು ಬಂದ ಪ್ರವಾಸಿಗರಿಗೆ ದೇಶಿಯ ಪಾರಂಪರಿಕ ಊಟದ ವ್ಯವಸ್ಥೆ ಮಾಡಲಾಗಿತ್ತು.
ಈ ಕುರಿತು ಮಾತನಾಡಿದ ಹೋಟೆಲ್ ಮಾಲೀಕ ಬಸವರಾಜ ಗೌಡ, ಹಂಪಿ ಉತ್ಸವಕ್ಕೆ ನಾವು ಪ್ರತಿ ವರ್ಷದಂತೆ ಈ ವರ್ಷವು ದೇಶಿಯ ಊಟವನ್ನು ಮಾಡುತ್ತೇವೆ. ಅನ್ನ ಸಾಂಬಾರ್, ಹೋಳಿಗೆ, ಬದನೆಕಾಯಿ ಪಲ್ಯ, ಪಲಾವ್, ಮಜ್ಜಿಗೆ, ಮೊಸರು, ಹಸಿ ಮೆಣಸಿನಕಾಯಿ ಚಟ್ನಿ, ಹುಣಿಸೆಹಣ್ಣಿನ ಚಟ್ನಿ ಹೀಗೆ ಹಲವು ಬಗೆಯ ಅಡುಗೆಯನ್ನು ತಯಾರಿಸಲಾಗಿದೆ ಎಂದರು.
1 ಹೋಳಿಗೆ ಊಟಕ್ಕೆ 150 ರೂ.ಗಳು. ರೊಟ್ಟಿ ಊಟಕ್ಕೆ ಮತ್ತು ಚಪಾತಿ ಊಟಕ್ಕೆ 120 ರೂ. ದರವನ್ನು ನಿಗದಿ ಮಾಡಲಾಗಿದೆ ಎಂದು ಅವರು ತಿಳಿಸಿದರು.