ಬಳ್ಳಾರಿ: ಕಟ್ಟಿಗೆ ವ್ಯಾಪಾರ ಮಾಡಲು ಬಳ್ಳಾರಿಯಿಂದ ಮೋಕ ಗ್ರಾಮಕ್ಕೆ ಪ್ರಯಾಣ ಮಾಡುವಾಗ ಲಾರಿ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಮೂವರು ಮೃತಪಟ್ಟಿದ್ದಾರೆ.

ಮೃತರನ್ನು ಬಳ್ಳಾರಿ ನಗರದ ಬಂಡಿಮೋಟ್ ಅಜಗರ್ (45), ಗುಗ್ಗುರಟ್ಟಿ ಶರ್ಮಸ್ (50) ಹಾಗು ಬೊಮ್ಮನಾಳ್ ಉಮೇಶ್ ಗೌಡ (35) ಎಂದು ಗುರುತಿಸಲಾಗಿದೆ.

ಸ್ಥಳಕ್ಕೆ ಗ್ರಾಮಾಂತರ ಪೊಲೀಸ್ ಠಾಣೆ ಅಧಿಕಾರಿಗಳು ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.

ಬಳ್ಳಾರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.