ಬಳ್ಳಾರಿ: ಜಿಲ್ಲೆಯ ನವಜಾತ ಶಿಶುವಿನಲ್ಲಿನ ಅಪೌಷ್ಟಿಕತೆ ನಿವಾರಣೆಗೋಸ್ಕರ ಮೊಬೈಲ್ ಕ್ಲಿನಿಕ್ ಬರಲಿದೆಯಂತೆ.
ಜಿಲ್ಲೆಯ ಆಯಾ ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಈ ಅಪೌಷ್ಟಿಕತೆಯಿಂದ ಬಳಲುತ್ತಿರುವ ನವಜಾತ ಶಿಶು ಹಾಗೂ ಮಕ್ಕಳ ಮನೆ-ಮನೆಗೆ ಈ ಮೊಬೈಲ್ ಕ್ಲಿನಿಕ್ ತೆರಳಿ ವೈದ್ಯಕೀಯ ಸೇರಿದಂತೆ ಇನ್ನಿತರ ಚಿಕಿತ್ಸೆಯನ್ನು ನೀಡಲಿದೆ. ಮುಂದಿನ ಆರು ತಿಂಗಳೊಳಗೆ ಈ ಅಪೌಷ್ಟಿಕತೆ ನಿವಾರಣೆಗೆ ಜಿಲ್ಲಾಡಳಿತ ಪಣತೊಟ್ಟಿದೆ.
ಜಿಲ್ಲೆಯಲ್ಲಿ 1,257 ಮಕ್ಕಳ ಪೈಕಿ 1097 ಮಕ್ಕಳ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಕಳೆದ ಆರು ತಿಂಗಳಲ್ಲಿ ಅಂದಾಜು 100 ಮಕ್ಕಳಲ್ಲಿ ಅಪೌಷ್ಟಿಕತೆ ನಿವಾರಣೆಗೆ ಪಣತೊಡಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ನಾಗರಾಜ ಈ ಟಿವಿ ಭಾರತ್ಗೆ ತಿಳಿಸಿದ್ದಾರೆ.
ಜಿಲ್ಲಾದ್ಯಂತ ಸರಿಸುಮಾರು 48,000 ಮಕ್ಕಳು ಮಧ್ಯಮ ಅಪೌಷ್ಟಿಕತೆಯಿಂದ ಬಳಲುತ್ತಿದ್ದು, ಅವರನ್ನೂ ಕೂಡ ಸಾಮಾನ್ಯ ಸ್ಥಿತಿಗೆ ತರುವಲ್ಲಿ ಶ್ರಮಿಸಲಾಗುವುದು. ಹಾಗೂ ಜಿಲ್ಲಾ ಖನಿಜ ನಿಧಿಯಿಂದ ಮೊಬೈಲ್ ಕ್ಲಿನಿಕ್ ವಾಹನ ಖರೀದಿಗೆ ಅಗತ್ಯ ಅನುದಾನವನ್ನು ಜಿಲ್ಲಾಧಿಕಾರಿ ಎಸ್.ಎಸ್ ನಕುಲ್ ಅವರು ಬಿಡುಗಡೆ ಮಾಡಲಾಗಿದ್ದು, ಜಿಲ್ಲಾ ಪಂಚಾಯಿತ್ ಸಿಇಒ ಕೆ.ನಿತೀಶ ಅವರೂ ಕೂಡ ಅಗತ್ಯ ಸಹಕಾರ ನೀಡುತ್ತಿದ್ದಾರೆ. ಮುಂದಿನ ಆರು ತಿಂಗಳಲ್ಲಿ ಸಂಪೂರ್ಣ ಅಪೌಷ್ಟಿಕತೆಯ ನಿವಾರಣೆಗೆ ಶ್ರಮಿಸಲಾಗುವುದು ಎಂದು ಹೇಳಿದ್ದಾರೆ.