ETV Bharat / state

ಕರ್ನಾಟಕ, ಆಂಧ್ರ ಗಡಿ ಸರ್ವೇ ಈಗಲಾದ್ರೂ ಸರಿಯಾಗಿ ನಡೆಯಲಿ: ಟಪಾಲ್ ಗಣೇಶ್​

ಕರ್ನಾಟಕ ಮತ್ತು ಆಂಧ್ರ ಗಡಿಸರ್ವೇ ಮಾಡಲು ಆದೇಶ ಹೊರಡಿಸಿರುವುದು ಸ್ವಾಗತಾರ್ಹ ಎಂದು ಗಣಿ ಅಕ್ರಮದ ಹೋರಾಟಗಾರ ಟಪಾಲ್ ಗಣೇಶ್​ ಹೇಳಿದ್ದಾರೆ.

author img

By

Published : Feb 1, 2021, 2:14 PM IST

dsd
ಟಪಾಲ್ ಗಣೇಶ್​ ಹೇಳಿಕೆ

ಬಳ್ಳಾರಿ: ಕರ್ನಾಟಕ ಮತ್ತು ಆಂಧ್ರ ಗಡಿಸರ್ವೇ ಕಾರ್ಯವು ಈಗಲಾದರೂ ಸರಿಯಾಗಿ ನಡೆಯಲಿ ಎಂದು ಗಣಿ ಅಕ್ರಮ ವಿರುದ್ಧದ ಹೋರಾಟಗಾರ ಟಪಾಲ್ ಗಣೇಶ್​ ಆಗ್ರಹಿಸಿದ್ದಾರೆ.

ಟಪಾಲ್ ಗಣೇಶ್​ ಹೇಳಿಕೆ

ನಗರದಲ್ಲಿ ಮಾತನಾಡಿದ ಅವರು, ಈ ಹಿಂದೆ ಜಿಲ್ಲೆಗೆ ಬಂದಿದ್ದ ಸರ್ವೇ ಆಫ್ ಇಂಡಿಯಾದ ಡೈರೆಕ್ಟರ್​ಗಳ ನೇತೃತ್ವದ ತಂಡ 43 ದಿನ ಮಾಡಿರುವ ಗಡಿ ಸರ್ವೇ ಅವೈಜ್ಞಾನಿಕವಾಗಿದೆ. 1896ರ ನಕ್ಷೆಯನ್ನು ಸರ್ವೇಕಾರ್ಯಕ್ಕೆ ಬಳಕೆ ಮಾಡಲು ಆಗುವುದಿಲ್ಲ ಎಂದು ಸರ್ವೇ ಆಫ್ ಇಂಡಿಯಾದ ಹಿಂದಿನ ಡೈರೆಕ್ಟರ್​ಗಳು ಸುಪ್ರೀಂಕೋರ್ಟ್​ಗೆ ಅಫಿಡವಿಟ್ ಸಲ್ಲಿಸಿದ್ದಾರೆ. ನಂತರ ಅದೇ ನಕ್ಷೆ ಬಳಸಿ ಸರ್ವೇ ಮಾಡಿರುವುದು ಬೆಳಕಿಗೆ ಬಂದಿದೆ.

ಈಗಲಾದ್ರೂ ಬ್ರಿಟಿಷರ ಕಾಲದ 1886-87 ನಕ್ಷೆಯ ಪ್ರಕಾರ ಸರ್ವೇ ನಡೆಯಬೇಕು. ಎರಡು ಗ್ರಾಮಗಳ ನಡುವಿನ ಸರಹದ್ದು ಹಾಗೂ ಮೂರು ಗ್ರಾಮಗಳ ನಡುವಿನ ಸರಹದ್ದನ್ನು ಮೊದಲು ಗುರುತಿಸಿ ನಂತರ ಈ ಸರ್ವೇ ಕಾರ್ಯಕ್ಕೆ ಸರ್ವೇ ಆಫ್ ಇಂಡಿಯಾದ ಅಧಿಕಾರಿ ವರ್ಗ ಮುಂದಾಗಬೇಕೆಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.