ಬಳ್ಳಾರಿ: ನಗರದ ಡಾ. ಬಿ.ಆರ್.ಅಂಬೇಡ್ಕರ್ ವೃತ್ತದ ಕೆಳ ಭಾಗದಲ್ಲಿರುವ ರೈಲ್ವೆ ಹಳಿ ಮೇಲೆ ರೈಲಿಗೆ ತಲೆ ಕೊಟ್ಟು ಇಂದು ಮಧ್ಯಾಹ್ನ ಯುವಕನೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ.
ತಾಲೂಕಿನ ರೂಪನಗುಡಿಯ ಒಂದನೇ ವಾರ್ಡ್ ನಿವಾಸಿ ದಾದಾಪೀರ್ (26) ಎಂಬ ಯುವಕ ಸಾವನ್ನಪ್ಪಿದ್ದು, ಜೀವನದಲ್ಲಿ ಜಿಗುಪ್ಸೆ ಹೊಂದಿ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದನಂತೆ. ಬೆಳಿಗ್ಗೆ ಮನೆಯಿಂದ ನಗರಕ್ಕೆ ಬಂದು ಮಧ್ಯಾಹ್ನ ಬರುತ್ತಿದ್ದ ಗೂಡ್ಸ್ ರೈಲು ಗಾಡಿಗೆ ತಲೆ ಕೊಟ್ಟಿದ್ದಾನೆ.
ಸ್ಥಳಕ್ಕೆ ರೈಲ್ವೆ ಪೊಲೀಸ್ ಅಧಿಕಾರಿಗಳು ಮತ್ತು ಪೊಲೀಸರು ಭೇಟಿ ನೀಡಿ ಪರೀಶಿಲನೆ ಮಾಡಿದ್ದು, ರೈಲ್ವೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.