ETV Bharat / state

ಬಳ್ಳಾರಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಪದವಿ ಕಾಲೇಜು ಸ್ಥಾಪಿಸಲು ಮನವಿ

author img

By

Published : Jan 3, 2020, 8:35 AM IST

ಬಳ್ಳಾರಿ‌ಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ಪದವಿ ಕಾಲೇಜು ಸ್ಥಾಪನೆ ಮಾಡಬೇಕೆಂದು ಒತ್ತಾಯಿಸಿ ವಿದ್ಯಾರ್ಥಿಗಳು ಹಾಗೂ ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಅಧ್ಯಕ್ಷ ಪನ್ನರಾಜ್ ಸರ್ಕಾರಕ್ಕೆ ಮನವಿ ಮಾಡಿದರು.

Students appealing to establish a graduate college
ಪನ್ನರಾಜ್

ಬಳ್ಳಾರಿ‌: ನಗರದ ಹೊರವಲಯದ ಹಗರಿ ಬಳಿಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ಪದವಿ ಕಾಲೇಜು ಸ್ಥಾಪನೆ ಮಾಡಬೇಕೆಂದು ಒತ್ತಾಯಿಸಿ, ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಅಧ್ಯಕ್ಷ ಪನ್ನರಾಜ್, ಎಡಿಸಿ ಮಂಜುನಾಥ್ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.

2020-2021 ರ ಬಜೆಟ್​ನಲ್ಲಿ ಬಳ್ಳಾರಿ ಕೃಷಿ ವಿಶ್ವವಿದ್ಯಾಲಯಕ್ಕೆ 50 ಕೋಟಿ ರೂ ಮೀಸಲಿಡಬೇಕು ಮತ್ತು ಆಡಳಿತಾತ್ಮಕವಾಗಿ ಅನುಮೋದನೆ ನೀಡಬೇಕು. ಮುಖ್ಯವಾಗಿ ಡಿ.ಎಂ.ಎಫ್ ಹಣದಲ್ಲಿ 50 ಕೋಟಿ ರೂ. ಹಣ ನೀಡಬಹುದು ಹಾಗೂ ಕೆ.ಎಂ.ಆರ್.ಸಿಯಲ್ಲಿ 50 ಕೋಟಿ ರೂ. ಹಣ ನೀಡಬಹುದು ಎಂದು ಹಿಂದಿನ ಎಲ್ಲಾ ಜಿಲ್ಲಾಧಿಕಾರಿಗಳು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಈ ಕೃಷಿ ಕಾಲೇಜಿ​ನಿಂದ ಸರ್ಕಾರಕ್ಕೆ ಯಾವುದೇ ರೀತಿಯ ಆರ್ಥಿಕ ಹೊಣೆಯಿಲ್ಲದೇ ಕಾಲೇಜು ಆರಂಭಿಸಬಹುದು ಎಂದು ಪನ್ನರಾಜ್‌ ತಿಳಿಸಿದರು.

ಪದವಿ ಕಾಲೇಜು ಸ್ಥಾಪನೆಗೆ ಒತ್ತಾಯ

ರೈತ ಮಾಧವ ರೆಡ್ಡಿ ಮಾತನಾಡಿ, ಈ ಕೃಷಿ ಕಾಲೇಜು ಆರಂಭವಾಗುವುದರಿಂದ ಬಹಳಷ್ಟು ಮಕ್ಕಳಿಗೆ ಅನುಕೂಲವಾಗುತ್ತದೆ. ಇಂದಿನ ದಿನಮಾನಗಳಲ್ಲಿ ಇಂಜಿನಿಯರಿಂಗ್ ಓದಿದರೂ ಕೆಲಸ ಸಿಗದ ಪರಿಸ್ಥಿತಿಯಿದೆ. ಹಾಗಾಗಿ ಕೃಷಿ ಕಾಲೇಜು ಆರಂಭಿಸಿದರೆ ಸ್ವಯಂ ಉದ್ಯೋಗ ಮಾಡಬಹುದು. ರೈತರ ಮಕ್ಕಳಿಗೆ ಕೃಷಿ ಕಾಲೇಜು​ಗಳಲ್ಲಿ ಓದಿಸುವ ಮೂಲಕ ಮಕ್ಕಳನ್ನು ಕೃಷಿ ಕ್ಷೇತ್ರದತ್ತ ಸೆಳೆಯುತ್ತೇವೆ ಎಂದರು.

Intro:kn_bly_03_020120_protestnewsaboutKrishiuniversiry_ka10007

2020ರ ಬಜೆಟ್ ನಲ್ಲಿ‌ ಕೃಷಿ ಕಾಲೇಜ್ ಗಾಗಿ 50 ಕೋಟಿ ಮೀಸಲು ಇಡಿ : ಹೈದರಬಾದ್ ಕರ್ನಾಟಕ ಹೋರಾಟ ಸಮಿತಿಯ ಅಧ್ಯಕ್ಷ ಪನ್ನರಾಜ್.

ಬಳ್ಳಾರಿ‌ ನಗರದ ಹೊರವಲಯದ ಹಗರಿ ಹತ್ತಿರದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಪದವಿ ಕಾಲೇಜ್ ಸ್ಥಾಪನೆ ಮಾಡಬೇಕೆಂದು ಹತ್ತಾರು ವರ್ಷಗಳಿಂದ ಹೋರಾಟ ನಡೆಯುತ್ತಿದೆ ಎಂದು ಒತ್ತಾಯಿಸಿ ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿಯ ಅದ್ಯಕ್ಷ ಪನ್ನಾರಾಜ್ ಎಡಿಸಿ ಮಂಜುನಾಥ್ ಅವರಿಗೆ ವಿದ್ಯಾರ್ಥಿಗಳ ನೇತೃತ್ವದಲ್ಲಿ ಪ್ರತಿಭಟನೆ ಮಾಡಿ ಮನವಿ ಪತ್ರವನ್ನು
ಸಲ್ಲಿಸಿದರು.

ಬೈಟ್ :-

೧.) ಪನ್ನರಾಜ್.
ಅಧ್ಯಕ್ಷ
ಹೈದರಬಾದ್ ಕರ್ನಾಟಕ ಹೋರಾಟ ಸಮಿತಿ
ಬಳ್ಳಾರಿ.

೨.) ಮಾದವರೆಡ್ಡಿ.
ರೈತ ಮುಖಂಡರು
ಬಳ್ಳಾರಿ.

Body:.

ನಗರದ ಜಿಲ್ಲಾಧಿಕಾರಿ ಕಚೇರಿಯ ಆವರಣದಲ್ಲಿ ಈಟಿವಿ ಭಾರತದೊಂದಿಗೆ ಮಾತನಾಡಿದ ಹೈದ್ರಾಬಾದ್ ಕರ್ನಾಟಕ ಹೋರಾಟ ಸಮಿತಿಯ ಅಧ್ಯಕ್ಷ ಸಿ.ಪನ್ನರಾಜ್ ಅವರು
ಎಡಿಸಿ ಮಂಜುನಾಥ ಅವರಿಗೆ ಮನವಿ ಪತ್ರವನ್ನು ಸಲ್ಲಿಸಿದರು.

ಮಾತನಾಡಿದ ಅವರು ಈ ಹೋರಾಟಕ್ಕೆ ಮೂಲ ಅಂದು ಬಿ.ಎಸ್ ಯಡಿಯೂರಪ್ಪ ಅವರು ಮುಖ್ಯಂತ್ರಿಯಾಗಿದ್ದಾಗ, ಕೃಷಿ ತಜ್ಞರಾದ ಡಾ. ಬಿಸಲೈಯ ನೇತೃತ್ವದಲ್ಲಿ ಸಮಿತಿ ಯನ್ನು ರಚಿಸಿ ರಾಜ್ಯದ ಎಂಟು ಕಡೆಗಳಲ್ಲಿ ಕೃಷಿ ವಿಜ್ಞಾನ ಕೇಂದ್ರಗಳನ್ನು ಆರಂಭಿಸಿದರು. ಇವುಗಳನ್ನು ಪರಿಶೀಲಿಸಿ ಅಧ್ಯಾಯನ ಮಾಡಿ 2009 ರಿಂದ ನೆನೆಗುದಿಗೆ ಬಿದ್ದಿದೆ. ಪ್ರತಿವರ್ಷ ಬಜೆಟ್ ನಲ್ಲಿ ಸೇರಿಸುತ್ತವೆ ಎಂದು ಹೇಳತ್ತಾರೆ ನಿರಂತರವಾಗಿ ಎಲ್ಲಾ ಸರ್ಕಾರಗಳು ಕಡೆ ಗಣನೆ ಮಾಡುತ್ತವೆ ಬಜೆಟ್ ನಲ್ಲಿ ಕೃಷಿ ಕಾಲೇಜ್ ಗಳಿಗೆ ಹಣ ಬಿಡುಗಡೆ ಮಾಡಲ್ಲ ಎಂದು ದೂರಿದರು.

ಮುಂದಿನ 2020 2021 ರ ಬಜೆಟ್ ನಲ್ಲಿ ಬಳ್ಳಾರಿ ಕೃಷಿ ವಿಶ್ವವಿದ್ಯಾಲಯಕ್ಕೆ 50 ಕೋಟಿ ಮೀಸಲು ಇಡಬೇಕು ಮತ್ತು ಆಡಳಿತಾತ್ಮಕವಾಗಿ ಅನುಮೋದನೆ ನೀಡಬೇಕು ಎಂದು ಒತ್ತಾಯ ಮಾಡಿದರು.
ಮುಖ್ಯವಾಗಿ ಡಿ.ಎಂ.ಎಫ್ ಹಣದಲ್ಲಿ 50 ಕೋಟಿ ಹಣ ಕೊಡಬಹುದು, ಕೆ.ಎಂ.ಆರ್.ಸಿ ಯಲ್ಲಿ 50 ಕೋಟಿ ಹಣ ಕೊಡಬಹುದು ಎಂದು ಹಿಂದಿನ ಎಲ್ಲಾ ಜಿಲ್ಲಾಧಿಕಾರಿಗಳು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.

ಈ ಕೃಷಿ ಕಾಲೇಜ್ ನಿಂದ ಸರ್ಕಾರಕ್ಕೆ ಯಾವುದೇ ರೀತಿಯ ಆರ್ಥಿಕ ಹೊಣೆಯಾಗದೇ ಈ ಕಾಲೇಜ್ ನ್ನು ಆರಂಭ ಮಾಡಬಹುದು ಎಂದು ತಿಳಿಸಿದರು.

371(J) ಅಡಿಯಲ್ಲಿ ವಿಶೇಷ ಸ್ಥಾನಮಾನ ಹೈದರಾಬಾದ್ ಕರ್ನಾಟಕ ಮೀಸಲಾತಿ ಪಡೆದುಕೊಂಡರು ಸಹ ಲಾಭ ಸಿಗದ ಪರಿಸ್ಥಿತಿಯಲ್ಲಿ ಇದೀವಿ ಎಂದು ತಮ್ಮ ನೋವನ್ನು ಹೇಳಿಕೊಂಡರು.

ಒಟ್ಟಾರೆಯಾಗಿ ಈ ಕೃಷಿ ಕಾಲೆಜ್ ಪರವಾಗಿ ಬಳ್ಳಾರಿ ಜಿಲ್ಲೆಯ ಶಾಸಕರು, ಸಂಸದರು ಧ್ವನಿ ಎತ್ತುವ ಕೆಲಸ ಮಾಡಬೇಕು ಎಂದು ಮನವಿ ಮಾಡಿಕೊಂಡರು.ಇದಕ್ಕೆ ಪ್ರತಿಕ್ರಿಯೆ ಸಿಗದಿದ್ದರೇ ಈ ಚಳುವಳಿಯನ್ನು ಉಗ್ರರೂಪಕ್ಕೆ ತೆಗೆದುಕೊಂಡು ಹೋಗುತ್ತವೆ ಎಂದು ತಿಳಿಸಿದರು.

ಈಟಿವಿ ಭಾರತದೊಂದಿಗೆ ರೈತ ಮಾಧವರೆಡ್ಡಿ ಮಾತನಾಡಿ ಈ ಕೃಷಿ ಕಾಲೇಜ್ ಆರಂಭವಾಗುವುದರಿಂದ ಬಹಳ ಮಕ್ಕಳಿಗೆ ಅನುಕೂಲಕರವಾಗುತ್ತದೆ. ಇಂದಿನ ದಿನಮಾನಗಳಲ್ಲಿ ಇಂಜಿನಿಯರಿಂಗ್ ಓದಿದರೂ ಕೆಲಸ ಸಿಗದ ಪರಿಸ್ಥಿತಿ, ನಿರುದ್ಯೋಗ ಸಮಸ್ಯೆ ನಿರ್ಮಾಣ ವಾಗಿದೆ. ಬದಲಿಗೆ ಕೃಷಿ ಕಾಲೇಜ್ ಆರಂಭ ಮಾಡಿದರೇ ಸ್ವಯಂ ಉದ್ಯೋ ಮಾಡಬಹುದು ಮತ್ತು ಸ್ವತಂತ್ರವಾಗಿ ಬದುಕಲು ರೈತ ಮಾತ್ರ ಸಾಧ್ಯ, ರೈತರ ಮಕ್ಕಳಿಗೆ ಕೃಷಿ ಕಾಲೇಜ್ ಗಳಲ್ಲಿ ಓದಿಸುವ ಮೂಲಕ ಮಕ್ಕಳನ್ನು ರೈತರನ್ನಾಗಿ ಮಾಡುತ್ತೇವೆ ಎಂದು ಹೇಳಿದರು.

Conclusion:ಈ ಪ್ರತಿಭಟನೆಯಲ್ಲಿ ಅಕ್ಕಿಮ್ಸ್ ಮತ್ತು ರಾವ್ ಬಹೂದರ್ ಕಾಲೇಜ್ ನ ನೂರಾರು ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು ಭಾಗವಹಿಸಿದರು.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.