ಹೊಸಪೇಟೆ: ಸುಕ್ಷೇತ್ರ ಮೈಲಾರ ಶ್ರೀ ಮೈಲಾರ ಲಿಂಗೇಶ್ವರ ಸ್ವಾಮಿ ದೇವಸ್ಥಾನ ಉದ್ಭವ ಲಿಂಗ ನೀರು ಕುಡಿಯುವುದು ಹೊಸದಲ್ಲ ಎಂದು ಮೈಲಾರಲಿಂಗೇಶ್ವರ ದೇವಾಲಯದ ಧರ್ಮದರ್ಶಿ ವೆಂಕಪ್ಪಯ್ಯ ಒಡೆಯರ್ ಸ್ಪಷ್ಟನೆ ನೀಡಿದ್ದಾರೆ.
ಸುಕ್ಷೇತ್ರ ಮೈಲಾರಲಿಂಗೇಶ್ವರನ ಸನ್ನಿಧಿಯಲ್ಲಿ ಲಿಂಗ ನೀರು ಕುಡಿಯುತ್ತಿರುವ ಪವಾಡದ ವಿಚಾರ ಕುರಿತು ಮಾತನಾಡಿದವರು, ಸ್ವಯಂಬು ಲಿಂಗುವಿಗೆ ಸಹಸ್ರಾರು ಬಿಂದಿಗೆಯಲ್ಲಿ ನೀರನ್ನು ಹಾಕಿದರೆ ಆ ಲಿಂಗವು ನೀರನ್ನು ಸ್ವೀಕರಿಸುವುದು ಪ್ರತೀತಿ ಇದೆ. ಇದಕ್ಕೆ ಸಾವಿರಾರು ವರ್ಷದ ಇತಿಹಾಸವಿದೆ ಎಂದರು.
ಪ್ರತಿಯೊಬ್ಬರು ಭಕ್ತಿಯಿಂದ ಆ ಭಗವಂತನನ್ನು ನೆನೆದು ನೀರನ್ನು ಲಿಂಗುವಿಗೆ ಹಾಕಿದರೆ ಸ್ವೀಕಾರ ಮಾಡುವುದು ಸ್ವಯಂಬು ಲಿಂಗುವಿನ ವಿಶೇಷತೆ ಇದೆ. ಗುರು ಕಪಿಲ ಮಹಾಮುನಿಗಳು ತಪಸ್ಸನ್ನು ಆಚರಿಸಿ ಶಿವನನ್ನು ಸಾಕ್ಷಾತ್ಕರಿಸಿದ ದಿನದಿಂದಲೂ ಉದ್ಭವಲಿಂಗ ಜಲವನ್ನು ಸ್ವೀಕರಿಸುತ್ತಲೇ ಇದೆ. ಈ ಒಂದು ವಿಚಾರವು ಯಾವುದೇ ರೀತಿಯಲ್ಲಿ ಹೊಸದಲ್ಲ ಎಂದು ಧರ್ಮದರ್ಶಿ ಹೇಳಿದರು.
ಓದಿ : ಇಂಟರ್ನ್ಯಾಷನಲ್ ಜೂನಿಯರ್ ಕರಾಟೆ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ: ರಾಜ್ಯಕ್ಕೆ ಕೀರ್ತಿ ತಂದ ಅಥಣಿ ಬಾಲಕ