ಬಳ್ಳಾರಿ: ಇಲ್ಲಿನ ಜಿಲ್ಲಾ ಪಂಚಾಯತ್ ಕಚೇರಿಯ ಲೆಕ್ಕಪತ್ರ ವಿಭಾಗದ ಅಧೀಕ್ಷಕರ ಕಚೇರಿಯಲ್ಲಿ ನಡೆದ ನೌಕರರಿಬ್ಬರ ರೋಮ್ಯಾನ್ಸ್ ವಿಡಿಯೋ ವೈರಲ್ ಆಗಿರೋದು ಹಳೆಯ ಘಟನೆಯದು. ಈಗಾಗಲೇ ಹಿಂದಿನ ಸಿಇಒ ಅವರು ಸೂಕ್ತ ಕ್ರಮ ಕೈಗೊಂಡಿದ್ದಾರೆಂದು ಹಾಲಿ ಸಿಇಒ ಕೆ ಆರ್ ನಂದಿನಿ ಸ್ಪಷ್ಟಪಡಿಸಿದ್ದಾರೆ.
ಬಳ್ಳಾರಿಯ ಜಿಪಂ ಕಚೇರಿಯಲ್ಲಿಂದು ಈಟಿವಿ ಭಾರತ ದೊಂದಿಗೆ ಮಾತನಾಡಿದ ಸಿಇಒ ಕೆ ಆರ್ ನಂದಿನಿ ಅವರು, ಲೆಕ್ಕಪತ್ರ ವಿಭಾಗದ ಅಧೀಕ್ಷಕರ ಕಚೇರಿಯ ನೌಕರರ ಸಂಪತ್ ಕುಮಾರ್ ತನ್ನ ಸಹೋದ್ಯೋಗಿ ಮಹಿಳಾ ನೌಕರೆಯೊಂದಿಗೆ ನಡೆಸಿರೋ ರೋಮ್ಯಾನ್ಸ್ ವಿಡಿಯೋ ಈಗ್ಯಾಕೆ ವೈರಲ್ ಆಗಿದೆಯಂತಲೂ ನನಗಂತೂ ಗೊತ್ತಿಲ್ಲ ಎಂದರು.
ಸಾರ್ವಜನಿಕ ಸ್ಥಳದಲ್ಲಿ ಇಂತಹ ಅನುಚಿತ ವರ್ತನೆ ಹಾಗೂ ವೈಯಕ್ತಿಕ ವಿಚಾರ ಪ್ರಸ್ತಾಪ ಆಗಿರೋದಂತಲೂ ಶುದ್ಧ ತಪ್ಪು. ಅದರ ವಿರುದ್ಧ ಹಿಂದಿನ ಸಿಇಒ ಆಗಿದ್ದ ಕೆ.ನಿತೀಶ್ ಅವರು ಸೂಕ್ತ ಕ್ರಮ ಕೈಗೊಂಡಿದ್ದು, ಅವರನ್ನು ಬೇರೆ ಬೇರೆ ಕಡೆಗೆ ವರ್ಗಾವಣೆ ಮಾಡಲಾಗಿದೆ. ಈಗ ಈ ರೋಮ್ಯಾನ್ಸ್ ವಿಡಿಯೋ ವೈರಲ್ ಆಗಿರುವುದರ ಹಿಂದಿನ ಉದ್ದೇಶ ಏನೆಂಬುದು ತಿಳಿಯುತ್ತಿಲ್ಲ. ಹೀಗಾಗಿ, ಅದರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸಿಇಒ ನಂದಿನಿ ಹೇಳಿದರು.