ETV Bharat / state

ಧೂಳಿನಿಂದ ಆನಂದ್ ಸಿಂಗ್ ಬಂಗಲೆ ರಕ್ಷಿಸಲು ರಸ್ತೆ ಬಂದ್ ಆರೋಪ, ಎಸ್ಪಿ ಹೇಳಿದ್ದೇನು..?

ಧೂಳಿನಿಂದ ಬಂಗಲೆ ರಕ್ಷಿಸಲು ಲಾರಿ-ಬಸ್ಸುಗಳ ಸಂಚಾರ ಬಂದ್ ಮಾಡಿಸಿದ್ದು, ಹಾಗಾಗಿ ಸಂಚಾರಿ ಪೊಲೀಸರು ವಾಹ‌ನಗಳನ್ನು ಸಚಿವರ ಮನೆ ಮುಂಭಾಗ ತಡೆಯುತ್ತಿದ್ದಾರೆ. ರಸ್ತೆ ಬದಲಿ ಮಾಡಿರೋ ಪೊಲೀಸರ ಈ ಕ್ರಮಕ್ಕೆ ರೈತರು, ಸಾರ್ವಜನಿಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

road-bandh-protecting-anand-singh-bungalow-from-dust-news
ಧೂಳಿನಿಂದ ಆನಂದ್ ಸಿಂಗ್ ಬಂಗಲೆ ರಕ್ಷಿಸಲು ರಸ್ತೆ ಬಂದ್ ಆರೋಪ, ಎಸ್ಪಿ ಹೇಳಿದ್ದೇನು..?
author img

By

Published : Oct 10, 2020, 9:23 PM IST

ಹೊಸಪೇಟೆ: ನಗರದ ಬೈಪಾಸ್ ನಲ್ಲಿ ನಿರ್ಮಿಸಿರುವ ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಬಂಗಲೆಗೆ ಧೂಳು ಆವರಿಸಬಾರದು ಎಂದು ಭಾರಿ ವಾಹನ ಸಂಚಾರ ನಿಷೇಧ ಮಾಡಿರುವ ಆರೋಪಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿವೆ.

ಧೂಳಿನಿಂದ ಆನಂದ್ ಸಿಂಗ್ ಬಂಗಲೆ ರಕ್ಷಿಸಲು ರಸ್ತೆ ಬಂದ್ ಆರೋಪ, ಎಸ್ಪಿ ಹೇಳಿದ್ದೇನು..?

ಧೂಳಿನಿಂದ ಬಂಗಲೆ ರಕ್ಷಿಸಲು ಲಾರಿ-ಬಸ್ಸುಗಳ ಸಂಚಾರ ಬಂದ್ ಮಾಡಿಸಿದ್ದಾರೆ. ಹಾಗಾಗಿ ಸಂಚಾರಿ ಪೊಲೀಸರು ವಾಹ‌ನಗಳನ್ನು ಸಚಿವರ ಮನೆ ಮುಂಭಾಗ ತಡೆಯುತ್ತಿದ್ದಾರೆ. ಬ್ಯಾರಿಕೇಡ್ ಬಳಿ ಪೊಲೀಸರು ಹಗಲು–ರಾತ್ರಿ ಮೂರು ಪಾಳಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಹಿಂದೆ ಕೈಗಾರಿಕೆ, ಬಾಳೆ, ಭತ್ತ ಹಾಗೂ ಕಬ್ಬಿನ ಗದ್ದೆಗಳಿಂದ ಕೃಷಿ ಉತ್ಪನ್ನಗಳನ್ನು ಇದೇ ಮಾರ್ಗದಲ್ಲಿ ಲಾರಿಗಳಲ್ಲಿ ಸಾಗಿಸಲಾಗುತ್ತಿತ್ತು. ರಸ್ತೆ ಬದಲಿ ಮಾಡಿರೋ ಪೊಲೀಸರ ಈ ಕ್ರಮಕ್ಕೆ ರೈತರು, ಸಾರ್ವಜನಿಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಿಂದ ಸ್ಪಷ್ಟನೆ:

ನಗರದ ಬೈಪಾಸ್ ನಲ್ಲಿ ಭಾರಿ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಲಾಗಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲು ಅಡಾವತ್ ಸ್ಪಷ್ಟಪಡಿಸಿದ್ದಾರೆ.

ಕಳೆದ ವಾರದಿಂದ ಎಂ.ಪಿ. ಪ್ರಕಾಶ ನಗರದಲ್ಲಿ ರಸ್ತೆ ದುರಸ್ತಿ ನಡೆಯುತ್ತಿದೆ. ಇತ್ತೀಚೆಗೆ ಇದೇ ರಸ್ತೆಯಲ್ಲಿ ಅಪಘಾತವೊಂದು ಆಗಿರುವುದು ‌ಗಮನಿಸಬಹುದು. ಸಂಚಾರ ದಟ್ಟಣೆ ಇಲ್ಲದ ಸಂದರ್ಭದಲ್ಲಿ ಸ್ಥಳೀಯ ಪೊಲೀಸರು ಅಲ್ಲಿನ ಸ್ಥಿತಿಗತಿ ಆಧರಿಸಿ ಭಾರಿ ವಾಹನಗಳ ಸಂಚಾರಕ್ಕೆ ಆ ರೀತಿಯ ಅವಕಾಶ ಮಾಡಿಕೊಡಲಾಗಿದೆ ಅಷ್ಟೇ ಎಂದು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.