ETV Bharat / state

ಲಾಕ್‌ಡೌನ್ ವೇಳೆ ಬಳ್ಳಾರಿ ಅಬಕಾರಿ ಇಲಾಖೆ ಕಾರ್ಯವೈಖರಿ ಹೇಗಿತ್ತು ಗೊತ್ತೇ?

ಲಾಕ್‌ಡೌನ್ ಸಮಯದಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ ಮದ್ಯ ನಿಷೇಧ ನಿಯಮ ಉಲ್ಲಂಘಿಸಿದ ಆರು ವೈನ್‌ ಸ್ಟೋರ್‌ಗಳ ವಿರುದ್ಧ ಕೇಸು ದಾಖಲಾಗಿವೆ. ಇವುಗಳಲ್ಲಿ ಮೂರು ಅಂಗಡಿಗಳ ಪರವಾನಗಿ ರದ್ದು ಮಾಡಲಾಗಿದೆ. ಇನ್ನೂ ಮೂರು ಅಂಗಡಿಗಳನ್ನು ರದ್ದು ಮಾಡುವ ಪ್ರಕ್ರಿಯೆ ನಡೆಯುತ್ತಿದೆ.

ಜಿಲ್ಲಾ ಅಬಕಾರಿ ಅಧಿಕಾರಿ ಎ.ರವೀಂದ್ರ
ಜಿಲ್ಲಾ ಅಬಕಾರಿ ಅಧಿಕಾರಿ ಎ.ರವೀಂದ್ರ
author img

By

Published : Jun 23, 2020, 12:25 PM IST

ಬಳ್ಳಾರಿ : ಜಿಲ್ಲೆಯಲ್ಲಿ ಲಾಕ್‌ಡೌನ್ ಸಮಯದಲ್ಲಿ ಮದ್ಯ ಮಾರಾಟ ಸಂಬಂಧಿಸಿದ 76 ಪ್ರಕರಣಗಳು ದಾಖಲಾಗಿವೆ. 7,060 ಲೀಟರ್ ಬಿಯರ್, 53 ಲೀಟರ್​ ಸೇಂದಿ, 1,773 ಲೀಟರ್ ಲೀಕರ್ ಸೇರಿ ಒಟ್ಟು 12,‌768 ಸಾವಿರ ಲೀಟರ್ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ. ಮದ್ಯ ಸಾಗಾಟ ಮಾಡಲು ಬಳಸಿದ 29 ವಾಹನಗಳನ್ನು ವಶಪಡಿಸಿಕೊಂಡಿದ್ದೇವೆ ಎಂದು ಜಿಲ್ಲಾ ಅಬಕಾರಿ ಅಧಿಕಾರಿ ಎ.ರವೀಂದ್ರ ತಿಳಿಸಿದರು.

ಜಿಲ್ಲಾ ಅಬಕಾರಿ ಅಧಿಕಾರಿ ಎ.ರವೀಂದ್ರ ಮಾಹಿತಿ

ಮೇ 4 ರಿಂದ ವೈನ್‌ಸ್ಟೋರ್ ಮತ್ತು ಎಂ.ಐ.ಎಸ್.ಎಲ್ ಅಂಗಡಿಗಳನ್ನು ತೆರೆಯಲಾಗಿತ್ತು. ಮೇ 8 ರಿಂದ ಬಾರ್ ಆ್ಯಂಡ್ ರೆಸ್ಟೊರೆಂಟ್, ಸಿ.ಎಲ್ 7, ಕ್ಲಬ್‌ಗಳಿಗೆ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಬಾರ್, ವೈನ್ ಸ್ಟೋರ್, ಸಿ.ಎಲ್ 7 ಗಳಲ್ಲಿ ಪಾರ್ಸಲ್​​ಗೆ ಮಾತ್ರ ಅವಕಾಶ ನೀಡಿದ್ದು, ಬೆಳಿಗ್ಗೆ 10 ಗಂಟೆಯಿಂದ ಸಂಜೆ 7 ವರೆಗೆ ವ್ಯಾಪಾರ ನಡೆಸಲು ಅನುಮತಿ ನೀಡಲಾಗಿತ್ತು.

ಜಿಲ್ಲೆಯ ಅಬಕಾರಿ ಆದಾಯ 2019ಕ್ಕೆ ಹೋಲಿಸಿದರೆ 2020ರಲ್ಲಿ ಏರಿಕೆ ಕಂಡಿದೆ. ಮೇ. 2019 ರಂದು 2 ಲಕ್ಷ 9 ಸಾವಿರ ಪೆಟ್ಟಿಗೆ ಮದ್ಯ ಮಾರಾಟವಾಗಿತ್ತು. ಇದುವರೆಗೂ 2 ಲಕ್ಷ ಮದ್ಯ ಮಾರಾಟ ಮಾಡಿದ್ದೇವೆ. ಈ ಹಿಂದಿನ ವರ್ಷದ ಗುರಿ ಶೇ. 99 ರಷ್ಟಾಗಿತ್ತು ಎಂದು ಅಬಕಾರಿ ಅಧಿಕಾರಿ ಎ.ರವೀಂದ್ರ ವಿವರಿಸಿದರು.

ಲಾಕ್‌ಡೌನ್ ಮುಗಿದ ನಂತರದ ಪ್ರಕರಣಗಳು:

7 ಘೋರ ಅಪರಾಧ ಪ್ರಕರಣ, 50 ಸನ್ನದು ರದ್ದು (ಐ.ಎಂ.ಎಲ್ ಲೈಸನ್ಸ್ ವಿರುದ್ಧ) ಪ್ರಕರಣ, ಸಾರ್ವಜನಿಕ ಸ್ಥಳಗಳಲ್ಲಿ ಮದ್ಯ ಸೇವನೆ ಸೇರಿ ಮೇ ತಿಂಗಳಲ್ಲಿ 39 ಪ್ರಕರಣಗಳು ದಾಖಲಾಗಿವೆ. ಈ ಸಂಭಂದ 2,867 ಲೀಟರ್ ಮದ್ಯ, 3352 ಲೀಟರ್ ಬಿಯರ್, 19 ಲೀಟರ್ ಕಳ್ಳಬಟ್ಟಿ, 74 ಲೀಟರ್ ಬೆಲ್ಲದ ಕೊಳ ವಶಪಡಿಸಿಕೊಂಡಿದ್ದೆವೆ ಎಂದು ತಿಳಿಸಿದರು.

ಎಂ.ಆರ್.ಪಿ ಬೆಲೆಗಿಂತ ಹೆಚ್ಚು ಮಧ್ಯ ಮಾರಾಟವೇಕೆ?

ಇದಕ್ಕೆ ಉತ್ತರಿಸಿದ ಅಬಕಾರಿ ಜಿಲ್ಲಾಧಿಕಾರಿ, ಈ ಕುರಿತು ಸಾರ್ವಜನಿಕರಿಂದ ದೂರುಗಳು ಬಂದಿವೆ. ಅದಕ್ಕೆ ಸಂಬಂಧಿಸಿದ 50 ಪ್ರಕರಣಗಳು ದಾಖಲಾಗಿವೆ. ಬೆಲೆಯಲ್ಲೂ ಸಹ ಗೊಂದಲವಿದೆ. ಎಂ.ಆರ್.ಪಿ ಬೆಲೆ ಮೇ 8 ಕ್ಕೆ ರಿವೈಸ್ ಆಗಿದೆ. 20 ರಿಂದ‌ 25 ರಷ್ಟು ಬೆಲೆ ಹೆಚ್ಚಳ ಆಗಿದೆ. ಬಾಟಲಿ​​ ಮೇಲೆ ಇರುವ ಬೆಲೆಗೂ ಈಗಿನ ಸರ್ಕಾರ ನಿಗದಿ ಮಾಡಿದ ಬೆಲೆಗೂ ವ್ಯತ್ಯಾಸ ಇದೆ ಎಂದರು.

ಬಾರ್, ವೈನ್‌ಸ್ಟೋರ್‌ಗಳ ಮುಂದೆ ಮದ್ಯಗಳ ಬೆಲೆಗಳ ಬೋರ್ಡ್ ಏಕಿಲ್ಲ?

ಇದಕ್ಕೆ ಉತ್ತರಿಸಿದ ಅವರು, ಲೈಸೆನ್ಸ್ ನಿಯಮದ ಅನುಸಾರವಾಗಿ ವೈನ್‌ಸ್ಟೋರ್ ಮತ್ತು ಎಂ.ಎಸ್.ಐ.ಎಲ್‌ಗಳಿಗೆ ಮಾತ್ರ ಬೋರ್ಡ್ ಹಾಕುತ್ತವೆ. ಆದ್ರೆ ಸಿ.ಎಲ್ 9 ಮತ್ತು ಸಿ.ಎಲ್ 7, ಸಿ.ಎಲ್ 4 ಮತ್ತು ಕ್ಲಬ್‌ಗಳಿಗೆ ಇಷ್ಟೇ ಬೆಲೆಗೆ ಮಾರಾಟ ಮಾಡಬೇಕು ಎನ್ನುವ ನಿರ್ಬಂಧವಿಲ್ಲ ಎಂದರು.

ಜಿಲ್ಲೆಯಲ್ಲಿ ಕಳ್ಳಭಟ್ಟಿ ಕೇಂದ್ರ ಎಂದರೆ ಕಂಪ್ಲಿ ಮಾತ್ರ ಇತ್ತು. ಆದರೆ ಲಾಕ್‌ಡೌನ್ ಸಮಯದಲ್ಲಿ ಆರು ಕಳ್ಳಬಟ್ಟಿ ಕೇಂದ್ರಗಳನ್ನು ಪತ್ತೆ ಹಚ್ಚಿದ್ದೇವೆ. ಅದರಲ್ಲಿ ಬಳ್ಳಾರಿಯ ಹೊನ್ನಳಿ ತಾಂಡ, ಬೆಳಗಲ್ ತಾಂಡ, ಸಂಡೂರಿನ ಸುಶೀಲ ನಗರ, ಹರಪನಹಳ್ಳಿಯ ವಡೆಯರನ ಹಳ್ಳಿ ಹೊಸಪೇಟೆಯ ನಾಗಲಾಪುರ, ಸಿರುಗುಪ್ಪ ಗಡಿಪ್ರದೇಶವಾಗಿದೆ. ಇವೆಲ್ಲವನ್ನೂ ಸಂಪೂರ್ಣವಾಗಿ ನಿರ್ಮೂಲನೆ ಮಾಡಿದ್ದೇವೆ ಎಂದರು.

ಇದನ್ನೂ ಓದಿ: ಗಡಿಗ್ರಾಮ ರಾರಾವಿಯಲ್ಲಿ ಮದ್ಯದಂಗಡಿ ಓಪನ್: ಗ್ರಾಮಸ್ಥರ ವಿರೋಧ..!

ಬಳ್ಳಾರಿ ಜಿಲ್ಲೆಯಲ್ಲಿ ಹತ್ತು ವಲಯ ಕಚೇರಿ ಇವೆ. 6 ನಿರೀಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. 4 ವಲಯ ನಿರೀಕ್ಷಕರು ಖಾಲಿ ಇದೆ. ಒಂದು ಅಬಕಾರಿ ಕಚೇರಿಯಲ್ಲಿ ಒಬ್ಬ ಇನ್ಸ್‌ಪೆಕ್ಟರ್, ಇಬ್ಬರು ಸಬ್ ಇನ್​​​ಸ್ಪೆಕ್ಟರ್, ಎಂಟು ಜನ ರಕ್ಷಕರು ಇರುತ್ತಾರೆ. ಬಳ್ಳಾರಿ ಜಿಲ್ಲೆಯಲ್ಲಿ ಅಬಕಾರಿ ರಕ್ಷಕರ ಕೊರತೆ ಇಲ್ಲ,‌ 4 ನಿರೀಕ್ಷರ ಹುದ್ದೆ ಖಾಲಿ ಇದೆ ಎಂದರು. ನಾಲ್ಕು ರೇಂಜ್ ಗಳಿಗೆ ಹೆಚ್ಚುವರಿ ಯಾಗಿ ಅಧಿಕಾರಿ ನೇಮಕ‌ ಮಾಡಿರುತ್ತವೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.