ಹೊಸಪೇಟೆ (ವಿಜಯನಗರ): ಕರ್ತವ್ಯ ಲೋಪ, ದುರ್ನಡತೆ, ಸಾರ್ವಜನಿಕರ ಜತೆ ಸಂಯಮದಿಂದ ವರ್ತಿಸದಿರುವ ಆರೋಪ ಸೇರಿದಂತೆ ನಾನಾ ಕಾರಣಗಳ ಹಿನ್ನೆಲೆಯಲ್ಲಿ ಹೂವಿನ ಹಡಗಲಿ ಪೊಲೀಸ್ ಠಾಣೆಯ ಪಿಎಸ್ಐ ಎಸ್.ಪಿ.ನಾಯ್ಕ್ ಅವರನ್ನು ಅಮಾನತು ಮಾಡಲಾಗಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲು ಅಡಾವತ್ ಅವರು ಆದೇಶವನ್ನು ಹೊರಡಿಸಿದ್ದು, ಪಿಎಸ್ಐ ಕರ್ತವ್ಯ ಸಂದರ್ಭದಲ್ಲಿ ಅತೀವ ನಿರ್ಲಕ್ಷ್ಯತನ, ದುರ್ನಡತೆ, ಬೇಜವ್ದಾರಿತನ, ಕರ್ತವ್ಯ ಲೋಪ ಎಸಗಿದ ಆರೋಪ ಮಾಡಲಾಗಿದ್ದು, ವಿಚಾರಣೆ ನಡೆಸಲು ನಿರ್ಧರಿಸಲಾಗಿದೆ.
ಕರ್ನಾಟಕ ರಾಜ್ಯ ಪೊಲೀಸ್ (ಶಿಸ್ತುನಡುವಳಿಗಳು) ನಿಯಮಗಳು-1965 (ತಿದ್ದುಪಡಿ 1989) ನಿಯಮದ ಮೇಲಿನ ಅಧಿಕಾರವನ್ನು ಚಲಾಯಿಸಿ, ಪಿಎಸ್ಐ ಎಸ್.ಪಿ.ನಾಯ್ಕ್ ಅವರನ್ನು ಅಮಾನತು ಮಾಡಲಾಗಿದೆ ಎಂದು ಎಸ್ಪಿ ಸೈದುಲು ಅಡಾವತ್ ತಿಳಿಸಿದ್ದಾರೆ.
ಇದನ್ನೂ ಓದಿ: ಮೋದಿ ಕ್ಯಾಬಿನೆಟ್: 13 ವಕೀಲರು, 6 ವೈದ್ಯರು, 5 ಇಂಜಿನಿಯರ್ ಸೇರಿ ಉನ್ನತ ಶಿಕ್ಷಣ ಮುಗಿಸಿದವರಿಗೆ ಮಣೆ!