ETV Bharat / state

ಶಾಕಿಂಗ್​: ಬಳ್ಳಾರಿ, ವಿಜಯನಗರದ 35 ಮಕ್ಕಳಲ್ಲಿ MIS- C, ANEC ಹೊಸ ರೋಗಗಳು ಪತ್ತೆ! - ಮಿಸ್- ಸಿ ಕಾಯಿಲೆ ಪತ್ತೆ

ಕೊರೊನಾದಿಂದ ಗುಣಮುಖರಾದ ಮಕ್ಕಳಲ್ಲಿ MIS- C, ANEC ಎಂಬ ಹೊಸ ರೋಗಗಳು ಪತ್ತೆಯಾಗುತ್ತಿರುವುದು ಜನರಲ್ಲಿ ಆತಂಕ ಮೂಡಿಸಿದೆ. ಈ ಕುರಿತು ಬಳ್ಳಾರಿ ಡಿಹೆಚ್​ಓ ಡಾ.ಹೆಚ್​.ಎಲ್. ಜನಾರ್ದನ್ ನೀಡಿರುವ ಮಾಹಿತಿ ಇಲ್ಲಿದೆ.

ಬಳ್ಳಾರಿಯಲ್ಲಿ MIS- C, ANEC ಎಂಬ ಹೊಸ ರೋಗಗಳು ಪತ್ತೆ!

author img

By

Published : Jul 3, 2021, 8:22 AM IST

Updated : Jul 3, 2021, 12:53 PM IST

ಬಳ್ಳಾರಿ: ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಕೋವಿಡ್​ನಿಂದ ಗುಣಮುಖರಾದ ಮಕ್ಕಳಲ್ಲಿ ಹೊಸದಾದ ಮಿಸ್- ಸಿ ಕಾಯಿಲೆ ಪತ್ತೆಯಾಗಿದೆ. ಕೊರೊನಾ, ಬ್ಲ್ಯಾಕ್ ಫಂಗಸ್ ಹಾಗೂ ಮೂರನೇ ಅಲೆಯ ಆತಂಕದ ನಡುವೆ ಹೊಸದಾದ ರೋಗ ಪತ್ತೆಯಾಗಿರುವುದು ಉಭಯ ಜಿಲ್ಲೆಗಳ ಜನರನ್ನು ಭೀತಿಗೆ ದೂಡಿದೆ.

ಕೊರೊನಾ ಸೋಂಕಿಗೆ ಒಳಗಾಗಿ ಗುಣಮುಖರಾದ ಕೆಲವೇ ಕೆಲ ಮಕ್ಕಳಲ್ಲಿ ಮಿಸ್-ಸಿ (MIS- C) ಕಾಯಿಲೆ ಕಂಡುಬಂದಿದೆ. ಬಳ್ಳಾರಿ- ವಿಜಯನಗರ ಜಿಲ್ಲೆಗಳ ವ್ಯಾಪ್ತಿಯಲ್ಲಿ ಈವರೆಗೆ 35 ಮಕ್ಕಳಲ್ಲಿ ಈ ಕಾಯಿಲೆ ಕಾಣಿಸಿಕೊಂಡಿದ್ದು, ಸದ್ಯ ವಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

MIS- C ಎಂದರೇನು?

ಈ ಬಗ್ಗೆ ಪ್ರತಿಕ್ರಿಯಿಸಿರುವ ಡಿಹೆಚ್​ಓ ಜನಾರ್ದನ್​, ಇದನ್ನು ಮಲ್ಟಿ ಆರ್ಗನ್ ಇನ್ ಫೆಂಟ್ರಿ ಸಿಂಡ್ರೋಮ್ ಇನ್ ಚಿಲ್ಡ್ರನ್ ( ಮಿಸ್- ಸಿ) ಎಂದು ಕರೆಯಲಾಗುತ್ತದೆ ಎಂದಿದ್ದಾರೆ. ಈ ರೋಗಕ್ಕೆ ತುತ್ತಾಗಿರುವ ಮಕ್ಕಳನ್ನು ಪರೀಕ್ಷಿಸಿದಾಗ ಕೋವಿಡ್ ರೋಗ ನಿರೋಧಕ ಶಕ್ತಿ ಬೆಳೆದಿರುತ್ತದೆ. ಅಂದರೆ ಕೋವಿಡ್ ಬಂದಿರುವುದು ಗೊತ್ತಾಗದೆ ಇದ್ದರೂ ಕೊರೊನಾ ಬಂದು ಹೋಗಿರೋದನ್ನು ಈ ರೋಗ ಖಚಿತಪಡಿಸುತ್ತದೆ.

ಯಾವ ಮಕ್ಕಳು ಕೊರೊನಾಗೆ ತುತ್ತಾಗಿ ಗುಣಮುಖರಾಗಿರುತ್ತಾರೋ ಅಂತಹ ಮಕ್ಕಳಿಗೆ ಎರಡು-ಮೂರು ವಾರಗಳ ನಂತರ ಇದ್ದಕ್ಕಿದ್ದಂತೆ ಉಸಿರಾಟದ ಸಮಸ್ಯೆ ಎದುರಾಗುತ್ತದೆ. ಆ ಸಮಯದಲ್ಲಿ ಪರೀಕ್ಷೆಗೆ ಒಳಪಡಿಸಿದಾಗ ಶ್ವಾಸಕೋಶದಲ್ಲಿ ನೀರು ತುಂಬಿಕೊಂಡಿರುತ್ತದೆ. ಮೂತ್ರಪಿಂಡ, ಲಿವರ್ ಸಹಿತ ದೇಹದ ಬಹುತೇಕ ಅಂಗಾಂಗಗಳಿಗೆ ತೊಂದರೆಯಾಗುತ್ತದೆ.

ಜಿಲ್ಲೆಯಲ್ಲಿ ಈವರೆಗೆ 3,500 ಮಕ್ಕಳಿಗೆ ಕೊರೊನಾ ಸೋಂಕು ತಗುಲಿರೋದು ಬೆಳಕಿಗೆ ಬಂದಿದೆ. ಆ ಪೈಕಿ 35 ಮಕ್ಕಳಲ್ಲಿ ಮಿಸ್- ಸಿ ರೋಗ ಕಾಣಿಸಿಕೊಂಡಿದೆ. ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರೋದು ಜನರ ಕಳವಳಕ್ಕೆ ಕಾರಣವಾಗಿದೆ.

ANEC ಎಂಬ ಮತ್ತೊಂದು ರೋಗವೂ ಪತ್ತೆ!

ಮಿಸ್​-ಸಿ ಯ ನಂತರ ಎಎನ್​​ಇಸಿ ಎಂಬ ಮತ್ತೊಂದು ರೋಗ ಕಾಣಿಸಿಕೊಂಡಿದೆ. ಇದನ್ನು ಅಕ್ಯೂಟ್ ನೈಟ್ರೈ ಟೈಸಿಂಗ್ ಮೆಅನಿಂಗ್ ಇನ್ ಕೆಫಲೋಪಥಿ ಇನ್ ಚಿಲ್ಡ್ರನ್ ಎಂದು ಕರೆಯಲಾಗುತ್ತದೆ. ಮಿಸ್​-ಸಿ ಕಾಯಿಲೆ ಬಂದ ಬಾಲಕನನ್ನು ಮತ್ತೊಮ್ಮೆ ತಪಾಸಣೆಗೆ ಒಳಪಡಿಸಿದಾಗ ಎಎನ್​ಇಸಿ ರೋಗ ಇರುವುದು ಪತ್ತೆಯಾಗಿದೆ. ಈ ವೈರಸ್​ ನೇರವಾಗಿ ಮೆದುಳಿನ ಮೇಲೆ ನೇರ ದಾಳಿ ನಡೆಸುತ್ತದೆ.

ಈ ರೋಗ ಇಡೀ ದೇಶದಲ್ಲೇ ಮೊದಲಿಗೆ ಗಣಿ ಜಿಲ್ಲೆಯಲ್ಲಿ ಪತ್ತೆಯಾಗಿದೆ. ದಾವಣಗೆರೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ 13 ವರ್ಷದ ಬಾಲಕನಲ್ಲಿ ಮಿಸ್- ಸಿ ಕಂಡು ಬಂದಿತ್ತು. ಆ ಬಾಲಕನಿಗೆ ಮತ್ತೊಮ್ಮೆ ಪರೀಕ್ಷಿಸಿದಾಗ ಎಎನ್ ಇಸಿ ರೋಗ ಇರೋದು ಕಂಡು ಬಂದಿರೋದು ಜನರಲ್ಲಿ ಮತ್ತಷ್ಟು ಆತಂಕ ಸೃಷ್ಟಿಸಿದೆ.

ಇದನ್ನೂ ಓದಿ:ಕೋವಿಡ್ ವೇಳೆಯಲ್ಲೂ ಅಹಮದಾಬಾದ್ ಐಐಎಂ ಶ್ಲಾಘನೀಯ ಕಾರ್ಯ: 450ಕ್ಕೂ ಹೆಚ್ಚು ಮಂದಿಗೆ ಉದ್ಯೋಗ

ಮಿಸ್​- ಸಿ ಹಾಗೂ ಎಎನ್​​ಇಸಿ ರೋಗಿಗಳಿಗೆ ವಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಡಿಹೆಚ್​ಓ ಡಾ. ಹೆಚ್​.ಎಲ್. ಜನಾರ್ದನ್ ತಿಳಿಸಿದ್ದಾರೆ.

Last Updated : Jul 3, 2021, 12:53 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.