ETV Bharat / state

ಬಳ್ಳಾರಿ:  ಶ್ರೀಕೃಷ್ಣದೇವರಾಯ ವಿಮಾನ ನಿಲ್ದಾಣದ ಕೆಲಸ ಆರಂಭ

ಚಾಗನೂರು - ಸಿರವಾರ ಬಳಿ ನೀರಾವರಿ ಕೃಷಿ ಭೂಮಿಯಲ್ಲಿ ಸ್ಥಗಿತಹೊಂಡಿದ್ದ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ಮಾಣ ಕಾರ್ಯ ಪ್ರಾರಂಭವಾಗಿದೆ. ಇದರ ಜೊತೆಗೆ ನಿಲ್ದಾಣಕ್ಕೆ ಶ್ರೀ ಕೃಷ್ಣದೇವರಾಯ ಎಂಬ ಹೆಸರನ್ನು ನಾಮಕರಣ ಮಾಡಲಾಗಿದೆ.

ಗಣಿನಗರಿಯಲ್ಲಿ ವಿಮಾನ ನಿಲ್ದಾಣ ಕಾರ್ಯ ಆರಂಭ
New airport construction work started in Bellary
author img

By

Published : Apr 7, 2021, 12:25 PM IST

ಬಳ್ಳಾರಿ: ತಾಲೂಕಿನ ಚಾಗನೂರು- ಸಿರವಾರ ಬಳಿ ಉದ್ದೇಶಿತ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ಮಾಣ ಕಾರ್ಯ ಶುರುವಾಗಿದೆ.

ಚಾಗನೂರು - ಸಿರವಾರ ಬಳಿ ನೀರಾವರಿ ಕೃಷಿ ಭೂಮಿಯಿದ್ದು, ಅಲ್ಲಿ ಯಾವುದೇ ಕಾರಣಕ್ಕೂ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಅನುಮತಿ ನೀಡಬಾರದೆಂಬ ಪ್ರಬಲ ವಿರೋಧ ಹಾಗೂ ಹೋರಾಟದ ತೀವ್ರತೆಯನ್ನು ಅರಿತ ಅಂದಿನ ಬಿಜೆಪಿ ಸರ್ಕಾರ ನಿರ್ಮಾಣ ಕಾರ್ಯವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿತ್ತು. ಆದರೀಗ ಪುನಃ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣೆ ಹಿಡಿದಿರುವ ಬಿಜೆಪಿ ಸರ್ಕಾರ ಮತ್ತೆ ವಿಮಾನ ನಿಲ್ದಾಣದ ನಿರ್ಮಾಣ ಕಾರ್ಯವನ್ನು ಮುನ್ನಲೆಗೆ ತಂದು ಈ ಭಾಗದ ರೈತರ ಕೆಂಗಣ್ಣಿಗೆ ಗುರಿಯಾಗಿದೆ.

ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿಯವರ ಕನಸಿನ ಕೂಸಾಗಿದ್ದ ಈ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಕಾರ್ಯವು ಕಳೆದ 12 ವರ್ಷಗಳ ನಂತರ ಈಗ ಸಾಕಾರಗೊಂಡಿದೆ. ಬಲವಂತದ ಭೂಸ್ವಾಧೀನ ಪ್ರಕ್ರಿಯೆ, ವಿಮಾನ ನಿಲ್ದಾಣ ನಿರ್ಮಾಣ ಕಾರ್ಯದ ವಿರೋಧಿ ಹೋರಾಟವು ಇಡೀ ದೇಶದ ಗಮನ ಸೆಳೆದಿತ್ತು. ಮೇಧಾ ಪಾಟ್ಕರ್, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಸೇರಿದಂತೆ ನಾನಾ ರಾಜಕೀಯ ಮುಖಂಡರು ಹೋರಾಟದಲ್ಲಿ ಪಾಲ್ಗೊಂಡು ವಿಮಾನ ನಿಲ್ದಾಣ ನಿರ್ಮಾಣಕ್ಕೆ ಭಾರೀ ವಿರೋಧ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ: ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರ: ಕಲಬುರಗಿಯಲ್ಲಿ ಸೆ. 144 ಜಾರಿ

ಚಾಗನೂರು- ಸಿರವಾರ ಕೆಲ ರೈತರು ವಿಮಾನ ನಿಲ್ದಾಣ ನಿರ್ಮಾಣ ಕಾರ್ಯವನ್ನು ವಿರೋಧಿಸಿ ಧಾರವಾಡ ಸಂಚಾರ ಪೀಠದ ಮೊರೆ ಹೋಗಿದ್ದರು. ಅದೆಲ್ಲವೂ ಹೈಕೋರ್ಟ್​ನಲ್ಲಿ ವಿಚಾರಣೆ ಹಂತದಲ್ಲಿರುವಾಗಲೇ ಇತ್ತ ರಾಜ್ಯ ತರಾತುರಿಯಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಚಾಲನೆ ನೀಡಿದೆ. ಇದಲ್ಲದೆ ಶ್ರೀ ಕೃಷ್ಣದೇವರಾಯ ಎಂಬ ಹೆಸರನ್ನೂ ಕೂಡ ಈ ವಿಮಾನ ನಿಲ್ದಾಣಕ್ಕೆ ಇಡಲಾಗಿದೆ.

ಅಖಂಡ ಬಳ್ಳಾರಿ ಜಿಲ್ಲೆಯನ್ನು ವಿಭಜನೆ ಮಾಡುವ ಮುಖೇನ ಪ್ರತ್ಯೇಕ ವಿಜಯನಗರ ಜಿಲ್ಲೆ ರಚನೆಗೆ ಮುಂದಾಗಿ ಜಿಲ್ಲೆಯ ಜನರ ಕೆಂಗಣ್ಣಿಗೆ ರಾಜ್ಯ ಸರ್ಕಾರ ಗುರಿಯಾಗಿತ್ತು. ಅದನ್ನು ಸರಿದೂಗಿಸಲು ಚಾಗನೂರು- ಸಿರವಾರ ಬಳಿ ವಿಮಾನ ನಿಲ್ದಾಣ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಿರುವ ಸರ್ಕಾರ, ಅದಕ್ಕೆ ಶ್ರೀಕೃಷ್ಣದೇವರಾಯನ ಹೆಸರು ಇಡುವ ಮೂಲಕ ಉಭಯ ಜಿಲ್ಲೆಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಂಬುದನ್ನು ಸಾಬೀತುಪಡಿಸಲು ರಾಜ್ಯ ಸರ್ಕಾರ ಹೊರಟಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.