ETV Bharat / state

ಸಂಜೀವರಾಯನಕೋಟೆ ಮನೆಯಲ್ಲಿ ಸಿಲಿಂಡರ್ ಸ್ಫೋಟ ಅಲ್ಲ; ನಡೆದಿದ್ದು ಆತ್ಮಹತ್ಯೆ! - Bellary latest news

ಇಂದು ಬೆಳಗಿನಜಾವ‌ ಸಂಜೀವರಾಯನ ಕೋಟೆಯಲ್ಲಿ ಸಿಲಿಂಡರ್ ಸ್ಫೋಟಗೊಂಡು ತಾಯಿ ಮಗಳು ಸ್ಥಳದಲ್ಲಿ ಸಾವನ್ನಪ್ಪಿರುವ ಸುದ್ದಿಗೆ ಈಗ ಹೊಸ ತಿರುವು ಪಡೆದುಕೊಂಡಿದೆ.

cylinder explosion
ಸಿಲಿಂಡರ್ ಸ್ಪೋಟ
author img

By

Published : Jan 6, 2020, 9:17 AM IST

Updated : Jan 6, 2020, 1:40 PM IST

ಬಳ್ಳಾರಿ: ನಗರ ಹೊರವಲಯದ ಸಂಜೀವರಾಯನಕೋಟೆ ಮನೆಯೊಂದರಲ್ಲಿ ನಡೆದಿದ್ದು ಸಿಲಿಂಡರ್ ಸ್ಫೋಟ ಅಲ್ಲ. ಅಲ್ಲಿ ನಡೆದಿದ್ದು ಆತ್ಮಹತ್ಯೆಯಂತೆ.

ಹೌದು, ಹಾಗಂತ ಬಳ್ಳಾರಿ ಗ್ರಾಮಾಂತರ ಪೊಲೀಸ್ ಠಾಣೆ ಹಾಗೂ ಅಗ್ನಿ ಶಾಮಕದಳ ಸಿಬ್ಬಂದಿಗಳೇ ಖಚಿತ ಪಡಿಸಿದ್ದಾರೆ. ಸಿಲಿಂಡರ್ ಮನೆಯೊಳಗೆ ಇರಲಿಲ್ಲ ಮನೆ ಹೊರಗಡೆ ಇದ್ದವು. ವಾಸ್ತವವಾಗಿ ನೋಡಬೇಕಾದ್ರೆ ಮನೆಯಲ್ಲಿ ಅವರಿಬ್ಬರು ಬೆಂಕಿಗೆ ಆಹುತಿಯಾಗಿದ್ದಾರೆ ಅದು ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ಸಿಲಿಂಡರ್ ಸ್ಫೋಟಗೊಂಡಿರುವುದು

ಪಾರ್ವತೆಮ್ಮ (55) ಮಗಳು ಹುಲಿಗೆಮ್ಮ ಎಂಬುವವರು ಬೆಂಕಿಗೆ ಆಹುತಿಯಾದವರೆಂದು ಗುರುತಿಸಲಾಗಿದೆ. ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗೆ ಈ‌ ಕಟುಸತ್ಯ ಬೆಳಕಿಗೆ ಬಂದಿದೆ.

ವಿವಾಹ ವಿಚ್ಚೇದನ ವಿವಾದ ಕುರಿತು ಈ ದಿನ ಕೋರ್ಟ್​ನಲ್ಲಿ ವಿಚಾರಣೆ ಇತ್ತು. ಆ ವಿಚಾರಣೆ ಸಲುವಾಗಿ ದಂಪತಿಗಳಿಬ್ಬರ ನಡುವೆ ಕಚ್ಚಾಟ ನಡೆದಿತ್ತು. ಈ ಘಟನೆಯಿಂದ ಮನನೊಂದು ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

Intro:
ಸಿಲಿಂಡರ್ ಸ್ಪೋಟ ಸ್ಥಳದಲ್ಲಿಯೇ ತಾಯಿ ಮಗಳು ಸಾವು.

ಬಳ್ಳಾರಿ‌ ಜಿಲ್ಲೆಯ ಬಳ್ಳಾರಿ ತಾಲೂಕಿನ ಸಂಜೀವರಾಯನ ಕೋಟೆ ಯ ಮನೆಯಲ್ಲಿ ಸಿಲಿಂಡರ್ ಸ್ಫೋಟ ತಾಯಿ ಮಗಳು ಸ್ಥಳದಲ್ಲಿ ಸಾವುBody:.

ಇಂದು ಬೆಳಿಗ್ಗೆ 8 ಗಂಟೆ ಘಟನೆ ನಡೆದಿದೆ. ಮನೆಯಲ್ಲಿ ಇದ್ದ ತಾಯಿ ಪಾರ್ವತಿ, ಮಗಳು ಹುಲಿಗೆ, ಮನೆಯಲ್ಲಿಯೇ ಸಾವನ್ನಪಿದ್ದಾರೆ. ಇಬ್ಬರ ದೇಹಗಳು ಉರಿಯುತ್ತಿವೆ ಎಂದು ಮಾಹಿತಿ ತಿಳಿದು ಬಂದಿದೆ.

ಗಂಡ ಹೆಂಡತಿ ನಡುವೆ ಕೋರ್ಟ್ ನಲ್ಲಿ ಕೇಸ್ ನಡೆಯುತ್ತಿತ್ತು ಎನ್ನುವ ಮಾಹಿತಿ ತಿಳಿದು ಬಂದಿದೆ. ಇದರಿಂದ ನೊಂದು ತಾಯಿ ಮಗಳು ಮನೆಯಲ್ಲಿ ಸಿಲಿಂಡರ್ ಒಪನ್ ಮಾಡಿ, ಬೆಂಕಿ ಹಚ್ಚಿ ಕೊಂಡಿ ಆತ್ಮಹತ್ಯೆ ಮಾಡಿಕೊಂಡಿದ್ಧಾರೆ ಎನ್ನುವ ಮಾಹಿತಿ‌ ಇದೆ.

ಸ್ಥಳಕ್ಕೆ ಅಗ್ನಿಶಾಮಕ ದಳದ ಇನ್ಸ್ಪೆಕ್ಟರ್ ಬಸವರಾಜ್ ಮತ್ತು ಸಿಬ್ಬಂದಿಗಳು ಹಾಜರಾಗಿ ಅಗ್ನಿ ನಂದಿಸಲು ಮುಂದಾಗಿದ್ದಾರೆ.

Conclusion:ನಗರದ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated : Jan 6, 2020, 1:40 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.