ETV Bharat / state

ನಾಳೆ ಮಣ್ಣೆತ್ತಿನ ಅಮಾವಾಸ್ಯೆ: ಬಳ್ಳಾರಿಯಲ್ಲಿ ಕಳೆಗುಂದಿದ ಮಣ್ಣೆತ್ತುಗಳ ಖರೀದಿ

author img

By

Published : Jun 20, 2020, 5:09 PM IST

ಕಲ್ಯಾಣ ಕರ್ನಾಟಕ ಹಾಗೂ ಉತ್ತರ ಕರ್ನಾಟಕ ಭಾಗದ ಗ್ರಾಮೀಣ ಸೊಗಡಿನ ಮಣ್ಣೆತ್ತಿನ‌ ಅಮವಾಸ್ಯೆ ಸಂಭ್ರಮಕ್ಕೆ ಗಣಿನಾಡು ಬಳ್ಳಾರಿ ಜಿಲ್ಲೆಯ ಸಕಲ ತಯಾರಿ ನಡೆಸಿಕೊಂಡಿದೆ. ಆದರೆ ಮಣ್ಣೆತ್ತುಗಳ ಖರೀದಿಯ ಭರಾಟೆ ಅಷ್ಟಾಗಿ ಕಂಡು ಬರುತ್ತಿಲ್ಲ.

mannettina amavasye in bellary district
ನಾಳೆ ಮಣ್ಣೆತ್ತಿನ ಅಮಾವಾಸೆ; ಬಳ್ಳಾರಿಯಲ್ಲಿ ಕಳೆಗುಂದಿದ ಮಣ್ಣೆತ್ತುಗಳ ಖರೀದಿ

ಬಳ್ಳಾರಿ: ನಾಳೆ ನಡೆಯಲಿರುವ ಮಣ್ಣೆತ್ತಿನ ಅಮವಾಸ್ಯೆ ನಿಮಿತ್ತ ಮಣ್ಣಿನಿಂದ ತಯಾರಿಸಿದ ಜೋಡೆತ್ತು - ಗೋದಲಿಗಳ ಖರೀದಿ ಅಷ್ಟಕ್ಕಷ್ಟೇ ಎಂಬಂತಾಗಿದೆ. ಕೊರೊನಾ ಮಹಾಮಾರಿ ಹಿನ್ನೆಲೆಯಲ್ಲಿ ಮಣ್ಣೆತ್ತಿನ ಅಮವಾಸ್ಯೆಯನ್ನ ಅತ್ಯಂತ ಸಂಭ್ರಮದಿಂದ ಆಚರಿಸುವ ಬದಲಿಗೆ ಸರಳವಾಗಿ ಆಚರಿಸಲು ಗಣಿನಾಡಿನ ಜನರು ನಿರ್ಧರಿಸಿದ್ದಾರೆ.

ನಾಳೆ ಮಣ್ಣೆತ್ತಿನ ಅಮಾವಾಸ್ಯೆ: ಬಳ್ಳಾರಿಯಲ್ಲಿ ಕಳೆಗುಂದಿದ ಮಣ್ಣೆತ್ತುಗಳ ಖರೀದಿ

ಮಣ್ಣೆತ್ತುಗಳ ಖರೀದಿಯ ಭರಾಟೆ ಹೆಚ್ಚಾಗಿ ಕಂಡು ಬರುತ್ತಿಲ್ಲ. ಕಲ್ಯಾಣ ಕರ್ನಾಟಕ ಹಾಗೂ ಉತ್ತರ ಕರ್ನಾಟಕ ಭಾಗದಲ್ಲಿ ಈ ಅಮವಾಸ್ಯೆ ಸಂಭ್ರಮ ಜೋರು ಇರುತ್ತೆ. ಪಕ್ಕಾ ಗ್ರಾಮೀಣ ಸೊಗಡಿನ ಹಬ್ಬ ಇದಾಗಿದೆ. ವಿಶೇಷವಾಗಿ ರೈತಾಪಿ‌ ವರ್ಗದವರು ಈ ಅಮವಾಸ್ಯೆಯನ್ನ ಅತ್ಯಂತ ಸಂಭ್ರಮದಿಂದ ಆಚರಿಸುವುದು ವಾಡಿಕೆ. ಈ ಕೊರೊನಾ ಸೋಂಕಿನಿಂದಾಗಿ ಈ‌ ಅಮವಾಸ್ಯೆ ಸಂಭ್ರಮ ಕಳೆಗುಂದಿದೆ.

ಮಾರುಕಟ್ಟೆಯಲ್ಲಿ ಜೋಡಿ ಮಣ್ಣೆತ್ತುಗಳ‌ ಕಲರವ ಇದ್ದರೂ ಕೂಡ ಖರೀದಿ ಮಾತ್ರ ಮಂದಗತಿಯಲ್ಲಿ ಸಾಗಿದೆ ಎನ್ನಲಾಗಿದೆ. ಪ್ರತಿಯೊಬ್ಬರು ತಮ್ಮ ತಮ್ಮ ಮನೆಗಳಲ್ಲಿ ಈ ಜೋಡಿ ಮಣ್ಣೆತ್ತುಗಳ‌ನ್ನಿಟ್ಟುಕೊಂಡು ವಿಶೇಷ ಪೂಜೆ ಮಾಡುತ್ತಾರೆ. ಮಹಾನಗರ, ಪಟ್ಟಣ ಹಾಗೂ ಹೋಬಳಿ ಪ್ರದೇಶಗಳಲ್ಲೂ ಮಣ್ಣೆತ್ತಿನ‌ ಅಮವಾಸ್ಯೆ ಆಚರಿಸಲಾಗುತ್ತೆ.

ಈಟಿವಿ ಭಾರತದೊಂದಿಗೆ ಮಾತನಾಡಿದ ರಂಗಭೂಮಿ ಕಲಾವಿದ ಪುರುಷೋತ್ತಮ ಹಂದ್ಯಾಳ್, ಭಾರತೀಯ ಸಂಪ್ರದಾಯದಲ್ಲೊಂದಾದ ಮಣ್ಣೆತ್ತಿನ ಅಮವಾಸ್ಯೆಯನ್ನ ಈ ಭಾಗದಲ್ಲಿ ಅತ್ಯಂತ ಸಂಭ್ರಮದಿಂದ ಆಚರಿಸಲಾಗುತ್ತೆ. ಇಂದಿನ ಯುವ ಪೀಳಿಗೆಗೆ ಇಂತಹ ಭಾರತೀಯ ಸಂಪ್ರದಾಯದ ಹಬ್ಬ- ಹರಿದಿನಗಳು ಪರಿಚಯಿಸುವುದು ಇದರ ಉದ್ದೇಶವಾಗಿದೆ ಎನ್ನುತ್ತಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.