ಬಳ್ಳಾರಿ : ರಾಜ್ಯದ ಎಲ್ಲಾ ಜಿಲ್ಲಾ ನ್ಯಾಯಾಲಯಗಳಂತೆ ಬಳ್ಳಾರಿ ಜಿಲ್ಲಾ ನ್ಯಾಯಾಲಯದಲ್ಲಿ ಬೃಹತ್ ಇ-ಲೋಕ ಅದಾಲತ್(ಮೆಗಾ ಇ-ಅದಾಲತ್) ಅತ್ಯಂತ ಸುಸೂತ್ರವಾಗಿ ನಡೆಯಿತು.
ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಕೃಷ್ಣ ಬಿ ಅಸೋಡೆ ಅವರ ಅಧ್ಯಕ್ಷತೆಯಲ್ಲಿ ನಡೆದ ಬೃಹತ್ ಇ-ಲೋಕ ಅದಾಲತ್‌ನಲ್ಲಿ 1929 ಪ್ರಕರಣ ಇತ್ಯರ್ಥ ಪಡಿಸಲಾಯಿತು.
ಇದೇ ಮೊದಲ ಬಾರಿಗೆ ನಡೆದ ಆನ್‌ಲೈನ್ ವಿಡಿಯೋ ಕಾನ್ಫರೆನ್ಸ್‌ನಲ್ಲಿ ರಾಜೀ ಸಂಧಾನದ ಮೂಲಕ ವ್ಯಾಜ್ಯ ಪೂರ್ವ ಪ್ರಕರಣ ಹಾಗೂ ಬಾಕಿ ಇರುವ ಪ್ರಕರಣಗಳನ್ನು ಇತ್ಯರ್ಥಪಡಿಸಲಾಯಿತು.
ಮೋಟಾರ್ ವಾಹನ ಅಪಘಾತ, ವಿಮಾ ಕಂಪನಿಗಳ, ಕೌಟುಂಬಿಕ, ಕಾರ್ಮಿಕ ಸಂಬಂಧಿತ ವಿವಾದಗಳು, ಬ್ಯಾಂಕ್ ವಿಷಯಗಳು, ಚೆಕ್ ಬೌನ್ಸ್, ಹಣವಸೂಲಾತಿ, ಕ್ರಿಮಿನಲ್ ಕಂಪೌಂಡೇಬಲ್ ಅಪರಾಧಗಳು, ಎಂಎಸಿಟಿ ಪ್ರಕರಣಗಳು, ಭೂಸ್ವಾಧೀನ, ವಿದ್ಯುತ್,ಎಂಎಂಡಿಆರ್ ಕಾಯ್ದೆ, ಸಿವಿಲ್ ಪ್ರಕರಣ, ಜನನ ಮತ್ತು ಮರಣ, ನೋಂದಣಿ,ಪಿಸಿ ಪ್ರಕರಣಗಳು ಸೇರಿದಂತೆ ಅನೇಕ ವರ್ಷಗಳಿಂದ ಬಾಕಿ ಇರುವ ಕೇಸ್‌ಗಳನ್ನು ರಾಜೀ ಮೂಲಕ ಬಗೆಹರಿಸಲಾಯಿತು.
ಸುಮಾರು 32 ಕೋಟಿ ರೂ. ಸಂದಾಯ ಮಾಡಲಾಗಿದೆ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಕೃಷ್ಣ ಬಿ ಅಸೋಡೆ ಅವರು ತಿಳಿಸಿದರು. ಈ ವೇಳೆ 2ನೇ ಅಪರ ಜಿಲ್ಲಾ ನ್ಯಾಯಾಧೀಶರಾದ ಖಾಸೀಂ ಚೂರಿಖಾನ್ ಸೇರಿ ನ್ಯಾಯಾಧೀಶರು ಹಾಗೂ ಕೋರ್ಟ್ ಸಿಬ್ಬಂದಿ ಇದ್ದರು.