ಹೊಸಪೇಟೆ: ಕೇರಳ ಮತ್ತು ಮಹಾರಾಷ್ಟ್ರದಿಂದ ನಗರಕ್ಕೆ ಬರುವವರಿಗೆ ಕೋವಿಡ್ ಟೆಸ್ಟ್ ಕಡ್ಡಾಯವಾಗಿದೆ. ಕೋವಿಡ್ ಟೆಸ್ಟ್ ಆಗಿ 72 ಗಂಟೆಗಳಾಗಿರಬೇಕು ಎಂದು ಉಪವಿಭಾಗಾಧಿಕಾರಿ ಸಿದ್ದರಾಮೇಶ್ವರ ಮಠದ ಹೇಳಿದ್ದಾರೆ.
ನಗರದ ಉಪವಿಭಾಗದ ಕಚೇರಿಯಲ್ಲಿ ಮಾತನಾಡಿದ ಅವರು, ಹೋಟೆಲ್ ಮಾಲೀಕರ ಸಭೆ ಕರೆದು ಮಾಹಿತಿ ನೀಡಲಾಗಿದೆ. ಕಡ್ಡಾಯ ಕೋವಿಡ್ ವರದಿ ತಗೆದುಕೊಳ್ಳಬೇಕು. ಒಂದು ವೇಳೆ ಕೋವಿಡ್ ಟೆಸ್ಟ್ ಮಾಡಿಸಿದಿದ್ದರೆ ನಗರದ ತಾಲೂಕು ಆಸ್ಪತ್ರೆಯಲ್ಲಿ ಪರೀಕ್ಷೆ ಒಳಪಡಿಸಲಾಗುವುದು.
ಸದ್ಯ ಹೊರ ರಾಜ್ಯದಿಂದ ಯಾರು ಬಂದಿಲ್ಲ. ಅಲ್ಲದೇ, ಕೋವಿಡ್ ಪ್ರಕರಣಗಳು ಪತ್ತೆಯಾಗಿಲ್ಲ. ಹೊಸಪೇಟೆ ಪ್ರವಾಸಿ ತಾಣವಾಗಿದೆ. ಹಾಗಾಗಿ ಆಗಮಿಸುವವರ ಸಂಖ್ಯೆ ಹೆಚ್ಚಾಗಿರುತ್ತೆ. ಕೇರಳ ಮತ್ತು ಮಹಾರಾಷ್ಟ್ರ ಪ್ರವಾಸಿಗರ ಮೇಲೆ ನಿಗಾ ಇಡಲಾಗಿದೆ ಎಂದು ಹೇಳಿದ್ದಾರೆ.