ETV Bharat / state

ಜೀವನದಲ್ಲಿ ಭಯ ಇರ್ಬೇಕು, ಭಯ ಗುಂಡಿಗೆಯಲ್ಲಿರ್ಬೇಕು.. ಹಂಪಿ ಉತ್ಸವದಲ್ಲಿ ಯಶ್‌ ಕೆಜಿಎಫ್​ ಡೈಲಾಗ್..

ಹಂಪಿ ಉತ್ಸವ 2020 ಕಾರ್ಯಕ್ರಮಕ್ಕೆ ರಾಕಿಂಗ್ ಸ್ಟಾರ್ ಯಶ್ ವಿಶೇಷ ಅತಿಥಿಯಾಗಿ ಆಗಮಿಸಿದರು.‌ ವಿರೂಪಾಕ್ಷೇಶ್ವರ ದೇಗುಲ ಮುಂಭಾಗಕ್ಕೆ ನಟ ಯಶ್ ಆಗಮಿಸುತ್ತಿದ್ದಂತೆ ಅಪಾರ ಜನಸ್ತೋಮ ಕೇಕೆ, ಸಿಳ್ಳೆಗಳ ಮೂಲಕ ಸ್ವಾಗತಿಸಲಾಯಿತು.

KGF actor Yash at Hampi festival in bellary
ನಟ ಯಶ್
author img

By

Published : Jan 12, 2020, 10:21 AM IST

ಬಳ್ಳಾರಿ: ಹಂಪಿ ಉತ್ಸವ 2020 ಕಾರ್ಯಕ್ರಮಕ್ಕೆ ರಾಕಿಂಗ್ ಸ್ಟಾರ್ ಯಶ್ ವಿಶೇಷ ಅತಿಥಿಯಾಗಿ ಆಗಮಿಸಿದ್ದರು.‌ ವಿರೂಪಾಕ್ಷೇಶ್ವರ ದೇಗುಲ ಮುಂಭಾಗಕ್ಕೆ ನಟ ಯಶ್ ಆಗಮಿಸುತ್ತಿದ್ದಂತೆ ಅಪಾರ ಜನಸ್ತೋಮ ಕೇಕೆ, ಶಿಳ್ಳೆಗಳ ಮೂಲಕ ಸ್ವಾಗತಿಸಿತು.

ನಟ ಯಶ್

ಜಿಲ್ಲೆಯ ಐತಿಹಾಸಿಕ ಪ್ರಸಿದ್ಧ ಹಂಪಿಯ ಶ್ರೀ ಕೃಷ್ಣದೇವರಾಯ ವೇದಿಕೆ ಮೇಲೆ ನಟ ಯಶ್ ಹಂಪಿಯ ಸಂಸ್ಕೃತಿ, ನಾಡು-ನುಡಿ ಬಗ್ಗೆ ಮಾತನಾಡಿದರು. ಹಂಪಿಯ ಮಣ್ಣಿನಲ್ಲಿ ಶಕ್ತಿ ಇದೆ. ಹಂಪಿ ಪುಣ್ಯಭೂಮಿ. ಇಲ್ಲಿನ ಸ್ಮಾರಕಗಳು ನೂರಾರು ವರ್ಷಗಳ ಇತಿಹಾಸ ಹೇಳುತ್ತವೆ. ಈಗಿನ ಜನಪ್ರತಿನಿಧಿಗಳು ಇಲ್ಲಿನ ಇತಿಹಾಸವನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕಿದೆ. ಕಲೆ, ಸಂಸ್ಕೃತಿ, ಪರಂಪರೆಗೆ ಹೆಚ್ಚಿನ ಒತ್ತು ನೀಡಬೇಕಿದೆ ಎಂದರು. ಇತಿಹಾಸ ತಿಳಿಸುವಂತ ಕಿರುಚಿತ್ರಗಳು ಸೇರಿ ನಾನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಅಗತ್ಯವಿದೆ ಎಂದರು.

ಇದೇ ವೇಳೆ ಕೆಜಿಎಫ್‌ ಚಿತ್ರದ ಡೈಲಾಗ್‌ಗಳನ್ನ ಹೇಳಿ ಅಭಿಮಾನಿಗಳನ್ನ ಯಶ್‌ ರಂಜಿಸಿದರು.

Intro:ಹಂಪಿಯಲಿ ರಾಕಿಂಗ್ ಸ್ಟಾರ್ ಯಶ್ ಕಲರವ: ಯಶ್ ನೋಡಿ ಪುಳಕಿತರಾದ ಜನಸ್ತೋಮ
ಬಳ್ಳಾರಿ: ಹಂಪಿ ಉತ್ಸವದ ನಿಮಿತ್ತ ರಾಕಿಂಗ್ ಸ್ಟಾರ್ ಯಶ್ ವಿಶೇಷ ಅತಿಥಿಯಾಗಿದ್ದರು.‌ ವಿರೂಪಾಕ್ಷೇಶ್ವರ ದೇಗುಲದ ಮುಖ್ಯ (ಗಾಯತ್ರಿ ಪೀಠ) ನಟ ಯಶ್ ಆಗಮಿಸುತ್ತಿದ್ದಂತೆಯೇ ಅಪಾರ ಜನಸ್ತೋಮದ ಕೇಕೆ, ಕರತಾಡತನ ಮುಗಿಲ ಮುಟ್ಟಿತು.
ಜಿಲ್ಲೆಯ ಐತಿಹಾಸಿಕ ಪ್ರಸಿದ್ಧ ಹಂಪಿಯ ಮುಖ್ಯ ವೇದಿಕೆಯಲಿ ನಟ ಯಶ್ ಅವರನ್ನ ಕಾಣುತ್ತಿದ್ದಂತೆಯೇ ಸಾವಿರಾರು ಮಂದಿ ಪ್ರೇಕ್ಷಕರು ಮುಗಿಬಿದ್ದರು.
ಬಳಿಕ ಅವರು ಮಾತಾಡಿ, ಹಂಪಿಯ ಮಣ್ಣಿನಲ್ಲಿ ಶಕ್ತಿ ಇದೆ.
ಆಗಾಗಿ ಇತಿಹಾಸ ಸೃಷ್ಟಿಯಾಗಿದೆ. ಹಂಪಿ ಕಣ್ತುಂಬಿಕೊಳ್ಳಬೇಕು ಎಂದು ಬಹಳಷ್ಟು ಮಂದಿ ಇಷ್ಟ ಪಡುತ್ತಾರೆ ಎಂದ್ರು ನಟ ಯಶ್.
ಹಂಪಿ ಪುಣ್ಯಭೂಮಿ. ಗತಕಾಲದವರು ಬದುಕಿಗೋಸ್ಕರ ಜೀವನ ನಡೆಸಿಲ್ಲ. ಅವರ ಕಾರ್ಯದಲ್ಲಿ ಶ್ರಮ, ಶ್ರದ್ಧೆ ಅಡಗಿದೆ. ಹಂಪಿಯ ಸ್ಮಾರಕಗಳು ನೂರಾರು ವರ್ಷಗಳ ಇತಿಹಾಸ ಹೇಳುತ್ತಿವೆ. ಈಗಿನ ಜನಪ್ರತಿನಿಧಿಗಳು ಇಲ್ಲಿನ ಇತಿಹಾಸವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕಿದೆ. ಕಲೆ, ಸಂಸ್ಕೃತಿ, ಪರಂಪರೆಗೆ ಹೆಚ್ಚಿನ ಒತ್ತು ನೀಡಬೇಕಿದೆ. ಇತಿಹಾಸ ತಿಳಿಸುವಂತ ಕಿರುಚಿತ್ರಗಳು ಸೇರಿದಂತೆ ನಾನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಅಗತ್ಯ ವಿದೆ ಎಂದ್ರು.
Body:ಹುಮ್ಮಸ್ಸು ತುಂಬಿದ ಯಶ್: ಶ್ರೀಕೃಷ್ಣದೇವರಾಯ ವೇದಿಕೆಗೆ ನಟ ಯಶ್ ಬರುತ್ತಿದ್ದಂತೆ ಸಾವಿರಾರು ಪ್ರೇಕ್ಷಕರು ಸಿಳ್ಳೆ, ಕೇಕೆ ಹಾಕುವ ಮೂಲಕ ಅದ್ದೂರಿಯಾಗಿ ಸ್ವಾಗತಿಸಿದ್ರು.
ಮೊಟ್ಟ ಮೊದಲ ಬಾರಿಗೆ ಉತ್ಸವಕ್ಕೆ ಆಗಮಿಸಿದ ನಟ ಯಶ್ ಅವರು ಚಲನಚಿತ್ರದ ಕೆಲ ಡೈಲಾಂಗ್‌ಗಳನ್ನು ಹೇಳುವ ಮೂಲಕ ಗಮನಸೆಳೆದರು. ಕೊರೆವ ಚಳಿ ನಡುವೆ ಸಾವಿರಾರು ಪ್ರೇಕ್ಷಕರು ಕಾದು ಕುಳಿತ್ತಿದ್ದರು. ಕೇವಲ ಹತ್ತು ನಿಮಿಷಗಳ ಕಾಲ ವೇದಿಕೆ ಮೇಲಿದ್ದು ಅಭಿಮಾನಗಳನ್ನು ಉದ್ದೇಶಿಸಿ ಮಾತನಾಡಿ ವಾಪಸ್ ತೆರಳಿದರು.
ಇದಕ್ಕೂ ಮುನ್ನ ವೇದಿಕೆಯಲ್ಲಿ ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ್ ಅವರಿಂದ ಹಾಸ್ಯ ಸಂಜೆ ಕಾರ್ಯಕ್ರಮ ನಡೆಯಿತು. ಭರತ್ಯ ನಾಟ್ಯ ಸೇರಿ ನಾನಾ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:KN_BLY_5_FILM_ACTOR_YESH_SPCH_VSL_7203310

KN_BLY_5a_FILM_ACTOR_YESH_SPCH_VSL_7203310
ETV Bharat Logo

Copyright © 2024 Ushodaya Enterprises Pvt. Ltd., All Rights Reserved.