ಬಳ್ಳಾರಿ: ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ ಬಳ್ಳಾರಿಯ 14 ವಾರ್ಡ್ಗಳಲ್ಲಿ ಅಂದಾಜು 20 ಮಂದಿ ಸ್ಪರ್ಧಾಕಾಂಕ್ಷಿಗಳಿದ್ದಾರೆಂದು ಜೆಡಿಎಸ್ನ ಹಿರಿಯ ಮುಖಂಡ ಮೀನಳ್ಳಿ ಡಿ. ತಾಯಣ್ಣ ತಿಳಿಸಿದರು.
ಬಳ್ಳಾರಿಯ ಮೀನಾಕ್ಷಿ ವೃತ್ತದಲ್ಲಿರುವ ಜೆಡಿಎಸ್ ಕಚೇರಿಯಲ್ಲಿ ಇಂದು ನಡೆದ ಮಾಧ್ಯಮಗೋಷ್ಠಿಯಲ್ಲಿ ಅವರು ಮಾತನಾಡಿದರು.
ಜೆಡಿಎಸ್ ಪಕ್ಷದಿಂದ ಮಹಾನಗರದ ಎಲ್ಲ 39 ವಾರ್ಡ್ಗಳಲ್ಲಿಯೂ ಕೂಡ ಸ್ಪರ್ಧೆಗೆ ಇಳಿಯಲು ನಿರ್ಧರಿಸಿದ್ದು, ಈಗಾಗಲೇ 14 ವಾರ್ಡ್ಗಳಿಗೆ ಸುಮಾರು 20 ಮಂದಿ ಸ್ಪರ್ಧಾಳುಗಳು ಅರ್ಜಿ ಸಲ್ಲಿಸಿದ್ದಾರೆ ಎಂದರು.
ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿಯವರ ಅಧಿಕಾರದ ಅವಧಿಯಲ್ಲಾದ ಜನಪರ ಯೋಜನೆಗಳನ್ನು ಮುಂದಿಟ್ಟುಕೊಂಡು ಪಾಲಿಕೆ ಚುನಾವಣೆಯಲ್ಲಿ ಪ್ರಚಾರ ನಡೆಸಿ, ಜಾಗೃತಿ ಮೂಡಿಸುವುದಲ್ಲದೇ ಜೆಡಿಎಸ್ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಲಾಗುವುದು ಎಂದು ಹೇಳಿದರು.