ETV Bharat / state

ಹೊಸಪೇಟೆ: ಮಹಿಳೆಯ ಚಿನ್ನದ ಸರ ಕದ್ದು ಪರಾರಿಯಾಗಿದ್ದ ಆರೋಪಿಗಳು 24 ಗಂಟೆಯೊಳಗೆ ಅಂದರ್​ - ಆನ್​ ಲೈನ್​ ಆ್ಯಪ್​ನಲ್ಲಿ ನಿವೃತ ಪ್ರಾಂಶುಪಾಲರಿಗೆ ವಂಚನೆ

ಹೊಸಪೇಟೆ ಹೊರವಲಯಕ್ಕೆ ಆಟೋದಲ್ಲಿ ಮಹಿಳೆಯೊಬ್ಬರನ್ನು ಕರೆದೊಯ್ದು ಸರಗಳ್ಳತನ ಮಾಡಿ ಪರಾರಿಯಾಗಿದ್ದ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ.

Etv Bharat
Etv Bharat
author img

By ETV Bharat Karnataka Team

Published : Oct 4, 2023, 3:55 PM IST

Updated : Oct 4, 2023, 6:07 PM IST

ಎಸ್ಪಿ‌ ಬಿ.ಎಲ್ ಶ್ರೀಹರಿಬಾಬು ಹೇಳಿಕೆ

ವಿಜಯನಗರ (ಹೊಸಪೇಟೆ) : ಮಹಿಳೆಯೊಬ್ಬರ ಕತ್ತಿನಿಂದ ಸರ ದೋಚಿ ಪರಾರಿಯಾಗಿದ್ದ ಇಬ್ಬರು ಖದೀಮರನ್ನು 24 ಗಂಟೆಯೊಳಗೆ ಹೊಸಪೇಟೆ ಗ್ರಾಮೀಣ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಹೊಸಪೇಟೆ ನಿವಾಸಿಗಳಾದ ಆಟೋ ಚಾಲಕ ಶ್ರೀನಿವಾಸ್ ಮತ್ತು ಆತನ ಸ್ನೇಹಿತ ವೆಂಕೋಬ ಬಂಧಿತ ಆರೋಪಿಗಳು. ಹೊರವಲಯದ ಕೊಂಡಾನಾಯಕನಹಳ್ಳಿ ಮಹಿಳೆ ವರಮಹಾಲಕ್ಷ್ಮಿ ಅವರು ಅ.1ರಂದು ಆಟೋದಲ್ಲಿ ಚರ್ಚ್ ಗೆ ಹೋಗಿದ್ದರು. ಅದೇ ಆಟೋದಲ್ಲಿ ಮರಳಿ ಮನೆಗೆ ಹೋಗುವಾಗ ಆರೋಪಿ ಶ್ರೀನಿವಾಸ್ ಆತನ ಸ್ನೇಹಿತ ವೆಂಕೋಬ ಎಂಬವನನ್ನು ಕರೆಸಿಕೊಂಡಿದ್ದಾನೆ. ಇಬ್ಬರು ಸೇರಿ ಆಟೋದಲ್ಲಿ ಮಹಿಳೆಯನ್ನು ನಗರದ ಹೊರವಲಯದ ಜೋಳದರಾಶಿ ಗುಡ್ಡದ ಬಳಿ ಕರೆದೊಯ್ದು ಸರ ಕಸಿದುಕೊಂಡು ಪರಾರಿಯಾಗಿದ್ದರು.

ಅ.2 ರಂದು ಮಹಿಳೆ, ಹೊಸಪೇಟೆ ಗ್ರಾಮೀಣ ಠಾಣೆ ದೂರು ದಾಖಲಿಸಿದ್ದರು.‌ ಪ್ರಕರಣದ ತನಿಖೆಯನ್ನು ಪಿಐ ದೀಪಕ್ ಭೂಸರೆಡ್ಡಿ ನೇತೃತ್ವದಲ್ಲಿ ನಡೆಸಿ, ಪ್ರಕರಣ ದಾಖಲಾದ 24 ತಾಸಿನಲ್ಲೇ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ 1.25 ಲಕ್ಷ ಮೌಲ್ಯದ 25 ಗ್ರಾಂ ಚಿನ್ನದ ಸರ ಹಾಗೂ ಆಟೋವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಡಿಎಸ್ಪಿ ಟಿ. ಮಂಜುನಾಥ ತಳವಾರ ಮಾರ್ಗದರ್ಶನದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಪಿಐ ದೀಪಕ್ ಭೂಸರೆಡ್ಡಿ ನೇತೃತ್ವದಲ್ಲಿ ಪಿಎಸ್ಐ ಬಿ. ಶೇಷಾಚಲಂ ನಾಯ್ಡು, ಸಿಬ್ಬಂದಿಗಳಾದ ಮಂಜುನಾಥ ಮೇಟಿ, ವಿ. ರಾಘವೇಂದ್ರ, ಪಂಪಾಪತಿ, ಏಳಂಜಿ ಕೊಟ್ರೇಶ್, ಸಣ್ಣಗಾಳೆಪ್ಪ, ಅಡಿವೆಪ್ಪ, ಮಲ್ಲಿಕಾರ್ಜುನ ವೈದ್ಯಮಠ, ಬಿ. ಚಂದ್ರಪ್ಪ, ನಜೀರ್ ಸಾಹೇಬ್, ಕುಮಾರನಾಯ್ಕ ಪಾಲ್ಗೊಂಡಿದ್ದರು ಎಂದು ಎಸ್ಪಿ‌ ಬಿ. ಎಲ್ ಶ್ರೀಹರಿಬಾಬು ಮಾಹಿತಿ ನೀಡಿದರು.

ಇದನ್ನೂ ಓದಿ : ಬಿಎಂಟಿಸಿ ಹಿರಿಯ ಅಧಿಕಾರಿಗಳ ಹೆಸರಿನಲ್ಲಿ ನಕಲಿ ಸಹಿ ಹಾಕಿ ₹16 ಕೋಟಿ ವಂಚನೆ: ಓರ್ವನ ಬಂಧನ

ಹಳೆ ಪ್ರಕರಣ- ಆನ್​ ಲೈನ್​ ಆ್ಯಪ್​ನಲ್ಲಿ ನಿವೃತ್ತ ಪ್ರಾಂಶುಪಾಲರಿಗೆ 45.80 ಲಕ್ಷ ವಂಚನೆ : ಖಾಸಗಿ ಆನ್ ಲೈನ್ ಆ್ಯಪ್​ ಮೂಲಕ ನಿವೃತ್ತ ಪ್ರಾಂಶುಪಾಲರಿಗೆ 45.80 ಲಕ್ಷ ರೂ. ವಂಚಿಸಿರುವ ಘಟನೆ ಜಿಲ್ಲೆಯ ಕೊಟ್ಟೂರು ಪಟ್ಟಣದಲ್ಲಿ ಇತ್ತೀಚೆಗೆ ನಡೆದಿತ್ತು. ಕೂಟ್ಟೂರು ಪಟ್ಟಣದ ನಾಗೇಂದ್ರಪ್ಪ ಎಂಬುವವರು ವಂಚನೆಗೊಳಗಾಗಿದ್ದು, ಮುಂಬೈ ಮೂಲದ ಶಶಿಕಾಂತ್ ತಿವಾರಿ ವಂಚನೆ ಮಾಡಿದ ಆರೋಪಿ.

ಆರೋಪಿಗಳು ಆಗಸ್ಟ್​ ಒಂದು ತಿಂಗಳ ಅಂತರದಲ್ಲಿ ಹಂತ ಹಂತವಾಗಿ 45.80 ಲಕ್ಷ ರೂ. ವರ್ಗವಣೆ ಮಾಡಿಸಿಕೊಂಡಿದ್ದ. ಬಳಿಕ ಹಣ ಸಂದಾಯ ಆಗುತ್ತಿದಂತೆ ಮೊಬೈಲ್ ಆಫ್ ಮಾಡಿಕೊಂಡಿದ್ದ. ಈ ವೇಳೆ ವಂಚನೆಗೊಳಗಾಗಿರುವುದು ತಿಳಿದು ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ನಿವೃತ್ತ ಪ್ರಿನ್ಸಿಪಾಲ್​ ಕೇಸ್ ದಾಖಲಿಸಿದ್ದರು.

ಇದನ್ನೂ ಓದಿ : ಕದ್ದ ಮೊಬೈಲ್‌ಗಳಿಗೆ ಫ್ಲ್ಯಾಶ್ ಮಾಡಿಕೊಡಲು ನಿರಾಕರಿಸಿದ ಯುವಕನಿಗೆ ಹಲ್ಲೆ: ಮಹಿಳೆಯ ಗ್ಯಾಂಗ್ ಅರೆಸ್ಟ್

Last Updated : Oct 4, 2023, 6:07 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.