ಹೊಸಪೇಟೆ (ವಿಜಯನಗರ): ಬಿಹಾರ ದ್ವಿತೀಯ ಪಿಯುಸಿ ಸಿಬಿಎಸ್ಸಿ ಪರೀಕ್ಷೆಯಲ್ಲಿ ಹೊಸಪೇಟೆಯ ಪಟೇಲ್ ನಗರ ಮೂಲದ ವಿದ್ಯಾರ್ಥಿನಿ ವೈ. ಅಶ್ವಿನಿ ಪಾಟ್ನಾ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾಳೆ.
![Ashwnini student](https://etvbharatimages.akamaized.net/etvbharat/prod-images/kn-hpt-01-hospet-girl-first-for-patna-section-vsl-ka10031_04082021104422_0408f_1628054062_845.jpg)
ಪಾಟ್ನಾದ ಕೇಂದ್ರೀಯ ವಿದ್ಯಾಲಯದ 2020/21ನೇ ಸಾಲಿನ ಸಿಬಿಎಸ್ಸಿ ಪರೀಕ್ಷೆಯಲ್ಲಿ ಶೇ.99ರಷ್ಟು ಅಂಕ ಪಡೆದು ಪಾಟ್ನಾ ವಿಭಾಗಕ್ಕೆ ಪ್ರಥಮ ಸ್ಥಾನ ಗಳಿಸಿದ್ದಾಳೆ.
ಅಶ್ವಿನಿ ಅವರ ತಂದೆ ವೈ.ಅರುಣ್ ಕುಮಾರ್ ಹೊಸಪೇಟೆಯ ಪಟೇಲ್ ನಗರ ಮೂಲದವರಾಗಿದ್ದು, ಪಾಟ್ನಾ ಕೇಂದ್ರೀಯ ವಿದ್ಯಾಲಯ ಸಂಘಟನೆಯಲ್ಲಿ ಡೆಪ್ಯೂಟಿ ಕಮಿಷನರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.