ಬಳ್ಳಾರಿ : ಎರಡು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಜಿಲ್ಲೆಯಾದ್ಯಂತ ಹಳ್ಳ ,ನದಿಗಳೆಲ್ಲಾ ತುಂಬಿ ಹರಿಯುತ್ತಿವೆ.
ಬಳ್ಳಾರಿ ಜಿಲ್ಲೆಯ ಸಂಡೂರು, ಸಿರುಗುಪ್ಪ ಮತ್ತು ಕಂಪ್ಲಿ ತಾಲೂಕಿನ ದರೂರು ಗ್ರಾಮದ ಹಿರೇಹಳ್ಳದ ಸೇತುವೆಯ ಮೇಲೆ ಅಪಾರ ಪ್ರಮಾಣ ನೀಡು ಹರಿಯುತ್ತಿವೆ. ಹಾಗೆ ಪಟ್ಟಣಸೆರಗು ಗ್ರಾಮದಲ್ಲಿ ಕೂಡ ಮಳೆಯಿಂದಾಗಿ ಹಳ್ಳಗಳು ತುಂಬಿ ಹರಿದಿವೆ. ಅಲ್ಲದೆ ರಾರಾವಿ ಹಗರು ಸೇತುವೆ ಸಹ ಮಳೆ ನೀರಿನಿಂದ ತುಂಬಿ ರಸ್ತೆ ಸಂಚಾರಕ್ಕೆ ತೊಂದರೆಯಾಯಿತು.
ಸಂಡೂರು ಭಾಗದಿಂದ ಬರುವ ನೀರು ಕುಡಿತಿನಿ, ಎರಂಗಳಿ, ವದ್ದಟ್ಟಿ ,ಕೋಳೂರು, ಚಾನಾಳು, ದಮ್ಮೂರು, ಹೊಸಳ್ಳಿ, ಹಾಗಲೂರು, ದರೂರು, ಕರೂರು, ಗೋಸಬಾಳ ,ಬೂದುಗುಪ್ಪ ,ಬಲಕುಂದಿಯ ಮುಖಾಂತರ ವೇದಾವತಿ ನದಿಗೆ ಸೇರುತ್ತಿದೆ.