ಬಳ್ಳಾರಿ: ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಉಪನಾಯಕನಹಳ್ಳಿಯಲ್ಲಿ ನಿನ್ನೆ ರಾತ್ರಿ ಸುರಿದ ಧಾರಾಕಾರ ಮಳೆಯಿಂದ ನೂರಾರು ಎಕರೆಯಲ್ಲಿ ಬೆಳೆದಿದ್ದ ಮೆಕ್ಕೆಜೋಳ, ಸಜ್ಜೆ ಸೇರಿದಂತೆ ಇನ್ನಿತರ ಬೆಳೆಗಳು ಸಂಪೂರ್ಣ ಹಾಳಾಗಿವೆ.
ಹಂಪಪಟ್ಟಣ ಮತ್ತು ಉಪನಾಯಕನಹಳ್ಳಿಯ ಸೇತುವೆ ಜಲಾವೃತಗೊಂಡಿದ್ದು, ಜನರು ಸೇತುವೆ ದಾಟುಲು ಹರಸಾಹಸ ಪಡುತ್ತಿದ್ದಾರೆ. ಹಗರಿಬೊಮ್ಮನಹಳ್ಳಿಯ ಕೆಲ ತಗ್ಗು ಪ್ರದೇಶದ ಕೆಲ ಮನೆಗಳು ಸಂಪೂರ್ಣ ಜಲಾವೃತಗೊಂಡಿವೆ.
ಬಳ್ಳಾರಿ ಜಿಲ್ಲೆಯಲ್ಲಿ ಹಗರಿಬೊಮ್ಮನಹಳ್ಳಿ ತಾಲೂಕಿನಲ್ಲಿ 100.8 ಸೆಂ.ಮೀಟರ್ ನಷ್ಟು ಮಳೆ ಆಗಿದೆ. ಕೂಡ್ಲಿಗಿ 51.6, ಹೊಸಪೇಟೆ 23, ಬಳ್ಳಾರಿ 1.3, ಹಡಗಲಿ 29.6, ಸಂಡೂರು 1.3, ಸಿರುಗುಪ್ಪ 1.6, ಹರಪನಹಳ್ಳಿ 14.0 ಸೆಂ.ಮೀಟರ್ನಷ್ಟು ಮಳೆಯಾಗಿದೆ. ಸ್ಥಳಕ್ಕೆ ಹಗರಿಬೊಮ್ಮನಹಳ್ಳಿ ಶಾಸಕ ಭೀಮಾನಾಯ್ಕ ಹಾಗೂ ಇತರ ಅಧಿಕಾರಿಗಳು ಭೇಟಿ ನೀಡದಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.