ETV Bharat / state

ಹಂಪಿ ಕನ್ನಡ ವಿವಿ ಘಟಿಕೋತ್ಸವ : ಉದ್ಯಮಿ ಗುಡಗಂಟಿ, ಉಡುಪಿಯ ಡಾ.ಕೃಷ್ಣಪ್ರಸಾದ್ ಗೆ ನಾಡೋಜ ಗರಿ

ಶುಕ್ರವಾರ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಘಟಿಕೋತ್ಸವ ಜರುಗಿತು. ಉದ್ಯಮಿ ಜಗದೀಶ ಎಸ್.ಗುಡಗಂಟಿ, ಹಾಗೂ ವೈದ್ಯಕೀಯ ಕ್ಷೇತ್ರದ ಸಾಧಕರಾದ ಉಡುಪಿ ಡಾ.ಕೃಷ್ಣಪ್ರಸಾದ್ ಅವರಿಗೆ ನಾಡೋಜ ಗೌರವ ಪದವಿಯನ್ನ ಪ್ರದಾನ ಮಾಡಲಾಯಿತು. ಈ ವೇಳೆ ಲಲಿತಕಲಾ ನಿಕಾಯದಲ್ಲಿ ಕನ್ನಡ ಚಲನಚಿತ್ರ ಗೀತ ರಚನೆಕಾರ ವಿ‌.ನಾಗೇಂದ್ರ ಪ್ರಸಾದ್ ಅವರ ಕನ್ನಡ ಚಲನಚಿತ್ರ ಗೀತೆಗಳ ಸಾಮಾಜಿಕ ಪರಿಣಾಮ: ಒಂದು ಅಧ್ಯಯನ ಎಂಬ ಮಹಾಪ್ರಬಂಧಕ್ಕೆ ಡಾಕ್ಟರ್ ಆಫ್ ಲಿಟರೇಚರ್(ಡಿ.ಲಿಟ್) ಪದವಿಯನ್ನ ನೀಡಲಾಯಿತು.

Hampi Kannada University Convocation Program
ಹಂಪಿ ಕನ್ನಡ ವಿಶ್ವವಿದ್ಯಾಲಯ ಘಟಿಕೋತ್ಸವ ಕಾರ್ಯಕ್ರಮ
author img

By

Published : Apr 10, 2021, 7:33 AM IST

ಹೊಸಪೇಟೆ: ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ನಡೆದ 29 ನೇ ನುಡಿಹಬ್ಬ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಉದ್ಯಮಿ ಜಗದೀಶ ಎಸ್. ಗುಡಗಂಟಿ, ಹಾಗೂ ವೈದ್ಯಕೀಯ ಕ್ಷೇತ್ರದ ಸಾಧಕರಾದ ಉಡುಪಿ ಡಾ.ಕೃಷ್ಣಪ್ರಸಾದ್ ಅವರಿಗೆ ನಾಡೋಜ ಗೌರವ ಪದವಿಯನ್ನ ಕುಲಪತಿ ಸ.ಚಿ. ರಮೇಶ್ ಅವರು ಪ್ರದಾನ ಮಾಡಿದರು. ಇದೇ ಸಂದರ್ಭದಲ್ಲಿ 10 ಜನರಿಗೆ ಡಿ.ಲಿಟ್,100 ಪಿ.ಎಚ್.ಡಿ ಪದವಿ ಹಾಗೂ 365 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.

ಹಂಪಿ ಕನ್ನಡ ವಿಶ್ವವಿದ್ಯಾಲಯ ಘಟಿಕೋತ್ಸವ ಕಾರ್ಯಕ್ರಮ

ಲಲಿತಕಲಾ ನಿಕಾಯದಲ್ಲಿ ಕನ್ನಡ ಚಲನಚಿತ್ರ ಗೀತ ರಚನೆಕಾರ ವಿ‌.ನಾಗೇಂದ್ರ ಪ್ರಸಾದ್ ಅವರ ಕನ್ನಡ ಚಲನಚಿತ್ರ ಗೀತೆಗಳ ಸಾಮಾಜಿಕ ಪರಿಣಾಮ: ಒಂದು ಅಧ್ಯಯನ ಎಂಬ ಮಹಾಪ್ರಬಂಧಕ್ಕೆ ಡಾಕ್ಟರ್ ಆಫ್ ಲಿಟರೇಚರ್(ಡಿ.ಲಿಟ್) ಪದವಿಯನ್ನ ನೀಡಲಾಯಿತು.

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ವೀರಾಪುರ ಹಿರೇಮಠ ಶ್ರೀ ಮರಳಸಿದ್ಧ ಪಂಡಿತರಾಧ್ಯ ಶಿವಾಚಾರ್ಯ ಅವರ ವ್ಯಕ್ತಿತ್ವ ವಿಕಾಸಕ್ಕೆ ಸಂಸ್ಕಾರಗಳ ಅಗತ್ಯ: ವೈಜ್ಞಾನಿಕ ಅಧ್ಯಯನ ಎಂಬುದರ ಕುರಿತ ಮಹಾಪ್ರಬಂಧಕ್ಕೆ ಡಿ.ಲಿಟ್ ಸಂದಿದೆ.

ಘಟಿಕೋತ್ಸವ ಕಾರ್ಯಕ್ರಮಕ್ಕೆ ಗಣ್ಯರು ಗೈರು: ನಾಡೋಜ ಪದವಿ ಪ್ರದಾನವನ್ನ ರಾಜ್ಯಪಾಲ ವಜುಭಾಯಿ ವಾಲಾ ಹಾಗೂ ಡಿ.ಲಿಟ್ ಹಾಗೂ ಪಿಎಚ್.ಡಿ ಪದವಿ ಪ್ರದಾನವನ್ನ ಉಪಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್.ಅಶ್ವಥ್ ನಾರಾಯಣ ಅವರು ಮಾಡಬೇಕಿತ್ತು.‌ ಆದರೆ ಹಲವು ಕಾರಣಗಳಿಂದ ಕಾರ್ಯಕ್ರಮಕ್ಕೆ ಗೈರಾಗಿದ್ದರು.

ಓದಿ : ಮುಷ್ಕರ 'ಕೈಗಾರಿಕಾ ವಿವಾದ ಕಾಯ್ದೆ'ಯ ವಿರುದ್ಧವಾಗಿದೆ: ಸಾರಿಗೆ ನೌಕರರ ಪ್ರತಿಭಟನೆ ನಿಷೇಧಿಸಿ ಸರ್ಕಾರದ ಆದೇಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.